PDO ಅಧ್ಯಯನ ಸಾಮಗ್ರಿ 8

💐 💐 ಪಂಚಾಯತ ರಾಜ್ ಕ್ವಿಜ್ 💐 💐

1) 73 ನೇ ಸಂವಿಧಾನ ತಿದ್ದುಪಡಿ ರಾಷ್ಟ್ರಪತಿ ಅವರಿಂದ ಯಾವಾಗ ಅನುಮೋದನೆ ಪಡೆಯಿತು?

ಎ) ಡಿಸೆಂಬರ್ 22, 1992
ಬಿ) ಡಿಸೆಂಬರ್ 23, 1992
ಸಿ) ಏಪ್ರಿಲ್      20, 1993
ಡಿ) ಏಪ್ರಿಲ್      24, 1993
ಉತ್ತರ : ಸಿ ) ಏಪ್ರಿಲ್ 20,  1993 ✔️✔️
2) ಪಂಚಾಯತ ಶೀರ್ಷಿಕೆಯನ್ನು ಯಾವ ಭಾಗದಲ್ಲಿ ಸೇರಿಸಲಾಗಿದೆ?

ಎ) ಒಂಬತ್ತನೇ ಭಾಗ
ಬಿ) ಹತ್ತನೇ ಭಾಗ
ಸಿ) ಹನ್ನೊಂದನೇ ಭಾಗ
ಡಿ) ಹನ್ನೆರಡನೇ ಭಾಗ
ಉತ್ತರ : ಎ ) ಒಂಬತ್ತನೇ ಭಾಗ ✔️✔️
3) ಮೆಹ್ತಾ ಹುಟ್ಟಿದ ದಿನಾಂಕ ಫೆಬ್ರುವರಿ 19 ರಂದು ಯಾವ ರಾಜ್ಯದಲ್ಲಿ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತದೆ?

ಎ) ರಾಜಸ್ತಾನ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ಕೇರಳ
ಉತ್ತರ : ಡಿ) ಕೇರಳ ✔️✔️
4) ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ ಕನಿಷ್ಠ ಎಷ್ಟು ತಿಂಗಳ ಅಂತರವಿರಬೇಕು?

ಎ) ಒಂದು ತಿಂಗಳು
ಬಿ) ಎರಡು ತಿಂಗಳು
ಸಿ) ಮೂರು ತಿಂಗಳು
ಡಿ) ಆರು ತಿಂಗಳು
ಉತ್ತರ : ಸಿ ) ಮೂರು ತಿಂಗಳು ✔️✔️
5) ಯಾವುದೇ ಪಂಚಾಯತ ಪ್ರದೇಶ ಕಾರ್ಯಸ್ಥಾನವನ್ನು ಬದಲಾಯಿಸುವ ಅಧಿಕಾರ ಯಾರು ಹೊಂದಿರುತ್ತಾರೆ?

ಎ) ಜಿಲ್ಲಾಧಿಕಾರಿಗಳು
ಬಿ) ಉಪವಿಭಾಗಾಧಿಕಾರಿಗಳು
ಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಎ ) ಜಿಲ್ಲಾಧಿಕಾರಿಗಳು ✔️✔️
6) ಮತದಾರರ ಪಟ್ಟಿ ಸಿದ್ಧಪಡಿಸುವವರು ಯಾರು?

ಎ) ಜಿಲ್ಲಾಧಿಕಾರಿಗಳು
ಬಿ) ತಹಶೀಲ್ದಾರರು
ಸಿ) ಉಪವಿಭಾಗಾಧಿಕಾರಿಗಳು
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಬಿ ) ತಹಶೀಲ್ದಾರರು ✔️✔️
7) ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದದ್ದು?

ಎ) 1998
ಬಿ) 1999
ಸಿ) 2000
ಡಿ) 2001
ಉತ್ತರ : ಸಿ ) 2000✔️✔️
8) "ಜನಶ್ರೀ ಭೀಮಾ ಯೋಜನೆ "ಯ ಕಾರ್ಯಕ್ರಮ ದನ್ವಯ ಸ್ವಾಭಾವಿಕ ಸಾವು ಸಂಭವಿಸಿದಾಗ ಪರಿಹಾರ ವಿಮಾ ಮೊತ್ತ ಎಷ್ಟು ಕೊಡಲಾಗುತ್ತದೆ ?

ಎ) 30000
ಬಿ) 37500
ಸಿ) 45000
ಡಿ) 75000
ಉತ್ತರ : ಎ ) 30000 ✔️✔️
9) ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಯ ಕಡತಗಳಿಗಾಗಿ ಮುಂಗಡವಾಗಿ ಎಷ್ಟು ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ?

ಎ) 250
ಬಿ) 400
ಸಿ) 500
ಡಿ) 1000
ಉತ್ತರ : ಸಿ ) 500✔️✔️
10) ಚುನಾವಣಾ ತಕರಾರು ಅರ್ಜಿಯನ್ನು ಸಿವಿಲ್ ನ್ಯಾಯಾಧೀಶರಿಗೆ ಸಲ್ಲಿಸಿದ ದಿನಾಂಕದಿಂದ ಎಷ್ಟು ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸತಕ್ಕದ್ದು?

ಎ) ಎರಡು ತಿಂಗಳು
ಬಿ) ಮೂರು ತಿಂಗಳು
ಸಿ) ಆರು ತಿಂಗಳು
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಸಿ) ಆರು ತಿಂಗಳು ✔️✔️
11) ಸಿವಿಲ್ ನ್ಯಾಯಾಧೀಶರು 18 ಮತ್ತು 19 ನೇ ಪ್ರಕರಣದ ಅಡಿಯಲ್ಲಿ ಮಾಡಿದ ಆದೇಶಗಳನ್ನು ಪ್ರಕಟಿಸಿದ ತರುವಾಯ ಅದರ ಒಂದು ಪ್ರತಿಯನ್ನು ಯಾರಿಗೆ ಕಳುಹಿಸಬೇಕು?

ಎ) ತಹಶೀಲ್ದಾರರು
ಬಿ) ಉಪವಿಭಾಗಾಧಿಕಾರಿಗಳು
ಸಿ) ಡೆಪ್ಯುಟಿ ಕಮಿಷನರ್
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಡೆಪ್ಯುಟಿ ಕಮಿಷನರ್ ✔️✔️
12) ಮತದಾನದ ರಹಸ್ಯವನ್ನು ಉಲ್ಲಂಘಿಸಿದ ವ್ಯಕ್ತಿಗೆ ನೀಡಬಹುದಾದ ಶಿಕ್ಷೆ ಯಾವುದು?

ಎ) ಎರಡು ತಿಂಗಳು ಜೈಲು ಅಥವಾ ದಂಡ
ಬಿ) ಮೂರು ತಿಂಗಳು ಜೈಲು ಅಥವಾ ದಂಡ
ಸಿ) ಆರು ತಿಂಗಳು ಜೈಲು ಅಥವಾ ದಂಡ
ಡಿ) ಹನ್ನೆರಡು ತಿಂಗಳು ಜೈಲು ಅಥವಾ ದಂಡ
ಉತ್ತರ : ಬಿ ) ಮೂರು ತಿಂಗಳು ಜೈಲು ಅಥವಾ ದಂಡ ✔️✔️
13) ಚುನಾವಣಾ ಕೆಲಸಕ್ಕೆ ನಿಯೋಜಿತನಾಗಿದ್ದ ಅಧಿಕಾರಿ ಗೈರು ಹಾಜರಾದರೆ ಯಾವ ರೀತಿ ದಂಡ ವಿಧಿಸಬಹುದು?

ಎ) 250 ರೂ
ಬಿ) 300 ರೂ
ಸಿ) 500 ರೂ
ಡಿ) 1000 ರೂ
ಉತ್ತರ : ಸಿ ) 500 ✔️✔️
14) 206 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?

ಎ) ತೆರಿಗೆಗಳು ಮತ್ತು ಬಾಕಿ ವಸೂಲಿ
ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ
ಸಿ) ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸಿಬ್ಬಂದಿ ಅನುದಾನ
ಡಿ) ಗ್ರಾಮ ಪಂಚಾಯಿತಿ ಸಾಲಗಳನ್ನು ಮರು ಪಾವತಿ ಮಾಡಲು ಅವಕಾಶ
ಉತ್ತರ : ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ ✔️✔️
15) ನೀರಿನ ದರ ಬೇಡಿಕೆ ಮತ್ತು ವಸೂಲಾತಿ ರಿಜಿಸ್ಟರ್ ಬಗ್ಗೆ ತಿಳಿಸುವ ನಮೂನೆ ಯಾವುದು?

ಎ) ನಮೂನೆ 11
ಬಿ) ನಮೂನೆ 12
ಸಿ) ನಮೂನೆ 13
ಡಿ) ನಮೂನೆ 14
ಉತ್ತರ : ಡಿ) ನಮೂನೆ 14 ✔️✔️
16) ವೇತನ ಬಟವಾಡೆಯ ಮೂಲ ಪುಟ ದ ಬಗ್ಗೆ ತಿಳಿಸುವ ನಮೂನೆ ಯಾವುದು?

ಎ) ನಮೂನೆ 21
ಬಿ) ನಮೂನೆ 22
ಸಿ) ನಮೂನೆ 23
ಡಿ) ನಮೂನೆ 24
ಉತ್ತರ : ಡಿ ) ನಮೂನೆ 24 ✔️✔️
17) ಗ್ರಾಮ ಪಂಚಾಯಿತಿಯ ಮಾಸಿಕ ಲೆಕ್ಕ ಪತ್ರಗಳನ್ನು ಮುಂಬರುವ ತಿಂಗಳ -------------------------- ದಿನಾಂಕದ ಒಳಗೆ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು?

ಎ) ಹತ್ತನೇ ದಿನಾಂಕ
ಬಿ) ಹದಿನೈದನೇ ದಿನಾಂಕ
ಸಿ) ಮೂವತ್ತನೇ ದಿನಾಂಕ
ಡಿ) ಮೂವತ್ತೋಂದನೇಯ ದಿನಾಂಕ
ಉತ್ತರ : ಎ ) ಹತ್ತನೇ ದಿನಾಂಕ ✔️✔️
18) ತಾಲೂಕಿನ ಜನಸಂಖ್ಯೆ 1 ಲಕ್ಷಕ್ಕಿಂತ ಒಳಗೆ ಇರುವಾಗ ಕನಿಷ್ಠ ಎಷ್ಟು ಸದಸ್ಯರನ್ನು ಹೊಂದಿರತಕ್ಕದ್ದು?

ಎ) 10 ಸದಸ್ಯರು
ಬಿ) 11 ಸದಸ್ಯರು
ಸಿ) 12 ಸದಸ್ಯರು
ಡಿ) 13 ಸದಸ್ಯರು
ಉತ್ತರ : ಬಿ ) 11 ಸದಸ್ಯರು ✔️✔️
19) ಪಿ.ಕೆ.ತುಂಗನ ಸಮಿತಿ ನೇಮಕವಾದ್ದದು?

ಎ) 1985
ಬಿ) 1986
ಸಿ) 1988
ಡಿ) 1989
ಉತ್ತರ : ಸಿ ) 1988 ✔️✔️
20) 1978 ಜನತಾ ಸರ್ಕಾರ ಅಶೋಕ ಮೆಹ್ತಾ ಶಿಫಾರಸ್ಸಿನ ಅನ್ವಯ ಮಂಡಲ ಪಂಚಾಯಿತಿಯನ್ನು ಸ್ಥಾಪನೆ ಮಾಡಿದ ಮೊದಲ ರಾಜ್ಯ ಯಾವುದು?

ಎ) ಕೇರಳ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ರಾಜಸ್ಥಾನ
ಉತ್ತರ : ಸಿ ) ಕರ್ನಾಟಕ ✔️✔️

Thanks to ಗುರುರಾಜ್ ಡಿ ಪಾಟೀಲ್

Post a Comment

0 Comments