ಪಿ. ಡಿ. ಒ.(PDO) ಅಧ್ಯಯನ ಸಾಮಗ್ರಿ 1


ಪಿ. ಡಿ. ಒ.(PDO)

  
2-10 2009 ರಂದು 'ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (NREGS) ಯನ್ನು 'ಮಹಾತ್ಮ ಗಾಂಧಿ ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಎಂದು ಮರುನಾಮಕರಣ ಮಾಡಲಾಯಿತು.

  ಈ ಯೋಜನೆಯಲ್ಲಿ ಫಲಾನುಭವಿ ಆಗಲಿಚ್ಚಿಸುವವರು ಅಕುಶಲ ಕಾರ್ಮಿಕ ಕೆಲಸಕ್ಕಾಗಿ ಅರ್ಜಿಯನ್ನು ನಮೂನೆ-6 ರಲ್ಲಿ ಸಲ್ಲಿಸಬೇಕು. ಇದಕ್ಕಾಗಿ ಯಾವುದೇ ವಿದ್ಯಾರ್ಹತೆ ಅವಶ್ಯವಿಲ್ಲ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯ '23 ಫೆಬ್ರವರಿ 2013' ರ ತಿದ್ದುಪಡಿಯಂತೆ  1-4-2015 ರಿಂದ ಅಕುಶಲ ಕಾರ್ಮಿಕನಿಗೆ ನೀಡಲಾಗುತ್ತಿರುವ ಒಂದು ದಿನದ ಕೂಲಿ- 224

ವಾರ್ಡ್ ಸಭೆ ಮತ್ತು ಗ್ರಾಮ ಸಭೆಯಲ್ಲಿ ಜನರ ಸಮಕ್ಷಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳ ಆಯ್ಕೆ ಆಗುತ್ತದೆ. 

ಮಹಾತ್ಮ ಗಾಂಧಿ ರಾಷ್ಟ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಅಕುಶಲ ಕೂಲಿಗಾಗಿ ಮಾಡಬಹುದಾದ ಗರಿಷ್ಠ ಖರ್ಚು-
ಗ್ರಾಮ ಪಂಚಾಯಿತಿ ಅನುದಾನದ ಶೇ.50ಕ್ಕೆ ಮೀರದಂತೆ ಖರ್ಚು ಮಾಡಬಹುದು.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಗ್ರಾಮದ ಜನತೆಗೆ ವರ್ಷದಲ್ಲಿ 150 ದಿನ ಉದ್ಯೋಗ ಸೃಷ್ಟಿಸಿಸುತ್ತದೆ.

ಗ್ರಾಮೀಣ ಆಶ್ರಯ ವಸತಿ ಯೋಜನೆ ಅಡಿಯಲ್ಲಿ  ಪಡೆದ ಸಾಲವನ್ನು ಅಸಲು ಮತ್ತು ಬಡ್ಡಿ ಸೇರಿಸಿ ಮರುಪಾವತಿ ಮಾಡಲು ಗರಿಷ್ಠ
180 ಸಮಾನ ಮಾಸಿಕ ಕಂತುಗಳುನ್ನು ನೀಡಲಾಗುತ್ತದೆ. ರೂಪಾಯಿ 20,000 ಸಾಲಕ್ಕೆ ಮಾಸಿಕ ಸಮ ಕಂತು ರೂ. 230 ಆಗುತ್ತದೆ ಮತ್ತು ಸಾಲದ ಮೊತ್ತ ಹೆಚ್ಚಾದಂತೆಲ್ಲಾ ತಿಂಗಳ ಕಂತಿನ ಮೊತ್ತವು ಕೂಡ ಹೆಚ್ಚಾಗುತ್ತದೆ.

ಗ್ರಾಮೀಣ ಆಶ್ರಯ ವಸತಿ ಯೋಜನೆಯ ಅಡಿಯಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ  ರೂಪಾಯಿ 20,000 ವನ್ನು ಸಾಲವಾಗಿಯೂ  ರೂಪಾಯಿ 20,000 ವನ್ನು ಸಹಾಯಧನವಾಗಿ ನಿಡಲಾಗುತ್ತದೆ. ಪರಿಶಿಷ್ಟ ಜಾತಿ ಹಾಗೂ  ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಂಪೂರ್ಣ ಮೊತ್ತವಾದ   
40,000 ವನ್ನು ಸಹಾಯಧನವಾಗಿಯೆ ನೀಡಲಾಗುತ್ತದೆ.

ಗ್ರಾಮೀಣ ಆಶ್ರಯ ವಸತಿ ಯೋಜನೆ ಅಡಿಯಲ್ಲಿ ನಿವೇಶನದ ಹಕ್ಕು ಪತ್ರವನ್ನು ಹೆಂಡತಿಯ ಹೆಸರಿನಲ್ಲಿ ವಿತರಿಸಬೇಕು. ಒಂದುವೇಳೆ ಫಲಾನುಭವಿಗಳು ಅವಿವಾಹಿತರಾದಲ್ಲಿ ಅಥವಾ ವಿದುರರಾಗಿದ್ದಲ್ಲಿ ಅವರ ಹೆಸರಿನಲ್ಲಿ ನಿವೇಶನ ಪತ್ರವನ್ನು ವಿತರಿಸಬಹುದು.

ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಸಂಸ್ಥೆಯು 2000-2001, 2001-2002, 2002-2003 ಹಾಗೂ 2013-2014 ನೇ ಸಾಲಿನ ‘*ಹುಡ್ಕೊ(HUDCO) ಅತ್ಯುತ್ತಮ ಕಾರ್ಯಕ್ಷಮತೆ ಪ್ರಶಸ್ತಿ*' ಯನ್ನು ಪಡೆದಿದೆ.‌

https://shashiexambooks.blogspot.in

Post a Comment

0 Comments