16 ಕೋಟಿ ಭಾರತೀಯರಿಗೆ ಶುದ್ಧನೀರು ಇಲ್ಲ

16 ಕೋಟಿ ಭಾರತೀಯರಿಗೆ ಶುದ್ಧನೀರು ಇಲ್ಲ

22 Mar, 2018
ದೇಶದ ಎಲ್ಲರಿಗೂ ಶುದ್ಧನೀರನ್ನು ಒದಗಿಸುವ ನಿಟ್ಟಿನಲ್ಲಿ 2000ದಿಂದ ಈಚೆಗೆ ಭಾರತವು ಭಾರಿ ಪ್ರಗತಿ ಸಾಧಿಸಿದೆ. ಈ ಅವಧಿಯಲ್ಲಿ ಸುಮಾರು 30 ಕೋಟಿ ಜನರಿಗೆ ಶುದ್ಧನೀರು ಒದಗಿಸಿರುವ ಭಾರತವು, ಹೆಚ್ಚು ಜನರಿಗೆ ನೀರು ಒದಗಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಜತೆಗೆ ಹೆಚ್ಚು ಜನರಿಗೆ ಶುದ್ಧನೀರಿನ ಲಭ್ಯತೆ ಇಲ್ಲದ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ‘ವಾಟರ್‌ಏಡ್’ ಹೇಳಿದೆ.

30 ಕೋಟಿ ಜನರಿಗೆ

2000ದಿಂದ ಈಚೆಗೆ ಶುದ್ಧ ನೀರು ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಲಾಗಿದೆ

16.3 ಕೋಟಿ ಜನರಿಗೆ ಈಗಲೂ ಶುದ್ಧ ನೀರು ಲಭ್ಯವಿಲ್ಲ

87.8% ಭಾರತೀಯರಿಗೆ ಕುಡಿಯುವ ಶುದ್ಧನೀರು ಲಭ್ಯವಿದೆ

30 ನಿಮಿಷ

ಈ ಸಮಯ 30 ನಿಮಿಷಕ್ಕೂ ಹೆಚ್ಚಿದ್ದರೆ, ಆ ಪ್ರದೇಶದಲ್ಲಿ ಶುದ್ಧ ನೀರು ಲಭ್ಯತೆ ಇಲ್ಲ ಎಂದು ಪರಿಗಣಿಸಲಾಗುತ್ತದೆ

ಯಾವುದೇ ಮೂಲದಿಂದ ನೀರು ಲಭ್ಯವಿದ್ದರೂ, ತಕ್ಷಣವೇ ಕುಡಿಯಲು ಅದನ್ನು ಬಳಸುವಂತಿರಬೇಕು. ಆಗ ಮಾತ್ರ ಅದನ್ನು ಶುದ್ಧ ನೀರು ಎಂದು ಪರಿಗಣಿಸಲಾಗುತ್ತದೆ

ಭಾರತದ ಬಗ್ಗೆ ವರದಿ ಹೇಳಿದ್ದು...

2022ರ ವೇಳೆಗೆ ದೇಶದ ಗ್ರಾಮೀಣ ಭಾಗದ ಶೇ 90ರಷ್ಟು ಜನರಿಗೆ ಕೊಳವೆ ಮೂಲಕ ಶುದ್ಧ ನೀರು ಒದಗಿಸುವ ಗುರಿಯನ್ನು ಭಾರತ ಹೊಂದಿದೆ

ದೇಶದ ಬಹುತೇಕ ಎಲ್ಲೆಡೆ ಅಂತರ್ಜಲದ ಮಟ್ಟ ಕುಸಿಯುತ್ತಿದೆ

ನೀರಿನ ಮಾಲಿನ್ಯ ನಿಯಂತ್ರಣ ಈಗಲೂ ಸವಾಲಿನ ಕೆಲಸ

ನೀರಿನ ಶುದ್ಧೀಕರಣವನ್ನು ಕಡೆಗಣಿಸಲಾಗಿದೆ

=======

ನೀರ ನೆಮ್ಮದಿಯ ನಾಳೆ

ಕಳೆದ ವರ್ಷದ ಜಲದಿನದಂದು ‘ಪ್ರಜಾವಾಣಿ’ಯು ‘ನೀರ ನೆಮ್ಮದಿಯ ನಾಳೆ’ ಎಂಬ ಅಭಿಯಾನ ಆರಂಭಿಸಿತು. ಜಲತಜ್ಞ ಶ್ರೀಪಡ್ರೆ ಅವರ ಅತಿಥಿ ಸಂಪಾದಕತ್ವದಲ್ಲಿ ವಿಶೇಷ ಸಂಚಿಕೆಯನ್ನು ಅಂದು ರೂಪಿಸಲಾಗಿತ್ತು. ಅಂದಿನಿಂದ ಒಂದು ವರ್ಷ ಜಲಜಾಗೃತಿ ಮೂಡಿಸುವ ಹಲವಾರು ಲೇಖನಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ನೀರ ನೆಮ್ಮದಿಯ ನಾಳೆಗಳಿಗಾಗಿ ಪ್ರಜಾವಾಣಿಯ ಬದ್ಧತೆ ಮುಂದುವರಿಯಲಿದೆ.

Post a Comment

0 Comments