ಚಂದ್ರಯಾನ-2 ಉಡಾವಣೆ ಅಕ್ಟೋಬರ್ ಗೆ : ಇಸ್ರೋ

ಚಂದ್ರಯಾನ-2 ಉಡಾವಣೆ ಅಕ್ಟೋಬರ್ ಗೆ : ಇಸ್ರೋ
24 March 2018, 8:49 am
ಚೆನ್ನೈ : ಮುಂದಿನ ತಿಂಗಳು ಉಡಾವಣೆಯಾಗಬೇಕಿದ್ದ ಚಂದ್ರಯಾನ-2 ಯೋಜನೆಯನ್ನು ಅಕ್ಟೋಬರ್ ತಿಂಗಳಿಗೆ ಮುಂದೂಡಲಾಗಿದೆ ಎಂದು ಇಸ್ರೋ ತಿಳಿಸಿದೆ.

ಚಂದ್ರಯಾನ 2 ನೌಕೆಯ ಉಡಾವಣೆಯನ್ನು ಏಪ್ರಿಲ್ ತಿಂಗಳ ಬದಲು ಅಕ್ಟೋಬರ್ ನಲ್ಲಿ ನಡೆಸಲಾಗುವುದು ಎಂದು ಇಸ್ರೋದ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.

ಸುಮಾರು 800 ಕೋಟಿ ರೂ ವೆಚ್ಚದ ಚಂದ್ರಯಾನ 2 ಯೋಜನೆ ಸಂಪೂರ್ಣವಾಗಿ ಸ್ವದೇಶಿಯವಾಗಿದ್ದು, ಈ ಯೋಜನೆಗಾಗಿ 3,290 ಕೆಜಿ ತೂಕದ ನೌಕೆಯನ್ನು ಸಿದ್ದಪಡಿಸಲಾಗಿದೆ. ಈ ನೌಕೆಯ ಚಂದ್ರನ ಮೇಲ್ಮೈ ರಚನೆ, ಖನಿಜಗಳ ಮಾಹಿತಿ, ಚಂದ್ರನಲ್ಲಿ ನೀರಿರುವ ಕುರಿತು ಮಾಹಿತಿಯನ್ನು ಸಂಗ್ರಹಿಸಲಿದೆ.

ಮೂಲ: ಕನ್ನಡ ನ್ಯೂಸ್ ನೌ


Post a Comment

0 Comments