ಕೆನಡಾದ ಖ್ಯಾತ ಗಣಿತಶಾಸ್ತ್ರಜ್ಞ ರಾಬರ್ಟ್ ಲಾಂಗ್ಲ್ಯಾಂಡ್ಸ್ ಗೆ 2018 ನೇ ಸಾಲಿನ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ ಲಭಿಸಿದೆ.

ಕೆನಡಾದ ಖ್ಯಾತ ಗಣಿತಶಾಸ್ತ್ರಜ್ಞ ರಾಬರ್ಟ್ ಲಾಂಗ್ಲ್ಯಾಂಡ್ಸ್ ಗೆ 2018 ನೇ ಸಾಲಿನ ಪ್ರತಿಷ್ಠಿತ ಅಬೆಲ್ ಪ್ರಶಸ್ತಿ ಲಭಿಸಿದೆ.
Published: 21 Mar 2018 12:24 PM IST

ರಾಬರ್ಟ್ ಲಾಂಗ್ಲ್ಯಾಂಡ್ಸ್
ಓಸ್ಲೋ: ಪ್ರಾತಿನಿಧ್ಯ ಸಿದ್ಧಾಂತವನ್ನು ಸಂಖ್ಯೆಯ ಸಿದ್ಧಾಂತಕ್ಕೆ ಸಂಪರ್ಕಿಸುವ ನಿಟ್ಟಿನಲ್ಲಿ ರಾಬರ್ಟ್ ಲಾಂಗ್ಲ್ಯಾಂಡ್ಸ್ ಮಾಡಿರುವ ಕೆಲಸವನ್ನು ಗುರುತಿಸಿ 2018 ನೇ ಸಾಲಿನ ಪ್ರತಿಷ್ಠಿತ ಅಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಗಣಿತದ ಎರಡು ಕ್ಷೇತ್ರಗಳ ನಡುವೆ ಸಂಪರ್ಕ ಕಲ್ಪಿಸುವ ಯೋಜನೆಗೆ ಲಾಂಗ್ಲ್ಯಾಂಡ್ಸ್ ಪ್ರೋಗ್ರಾಮ್ ಎಂದೇ ಹೆಸರು ನೀಡಲಾಗಿದ್ದು, 81 ವರ್ಷದ ಗಣಿತ  ಗಣಿತಶಾಸ್ತ್ರಜ್ಞನಿಗೆ ಆರು ದಶಲಕ್ಷ ನಾರ್ವೇಜಿಯನ್ ಕ್ರೋನರ್ ($776,000) ಮೊತ್ತದ ಬಹುಮಾನವನ್ನು ಮೇ.22 ರಂದು ಪ್ರದಾನ ಮಾಡಲಾಗುತ್ತದೆ.
1936 ರಲ್ಲಿ ಕೆನಡಾದಲ್ಲಿ ಜನಿಸಿದ್ದ ರಾಬರ್ಟ್ ಲಾಂಗ್ಲ್ಯಾಂಡ್ಸ್, ಎಂಎಸ್ ಸಿ ಪದವೀಧರರಾಗಿದ್ದು, 1960 ರಲ್ಲಿ ಪಿಹೆಚ್ ಡಿಯನ್ನೂ ಪಡೆದಿದ್ದಾರೆ.  ಶ್ರೇಷ್ಠ ಗಣಿತ ಶಾಸ್ತ್ರಜ್ಞರನ್ನು ಗುರುತಿಸಿ 2003 ರಿಂದ ಅಬೆಲ್ ಪ್ರಶಸ್ತಿ ನೀಡಲಾಗುತ್ತಿದೆ.

Post a Comment

0 Comments