ಏಕದಿನ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಿಕೊಂಡ ಅಫ್ಘಾನಿಸ್ತಾನ

ಏಕದಿನ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಿಕೊಂಡ ಅಫ್ಘಾನಿಸ್ತಾನ
24 March 2018, 7:12 am
ಹರಾರೆ : ಸೂಪರ್ ಸಿಕ್ಸ್ ಹಂತದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ 5 ವಿಕೆಟ್ ಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿ 2 ಬಾರಿಗೆ ಏಕದಿನ ವಿಶ್ವಕಪ್ ಆಡುವ ಅವಕಾಶ ಪಡೆದುಕೊಂಡಿತು.

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ, ಅಫ್ಘಾನಿಸ್ತಾನ ತಂಡದ ಬಿಗಿ ಬೌಲಿಂಗ್ ದಾಳಿಗೆ 7 ವಿಕೆಟ್ ಕಳೆದುಕೊಂಡು 209 ರನ್ ಗಳಿಸಲಷ್ಟೇ ಶಕ್ತವಾಯಿತು.

ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಸಂಘಟಿತ ಬ್ಯಾಟಿಂಗ್ ಮಾಡುವ ಮೂಲಕ 49.1 ಓವರ್ ಗಳಲ್ಲಿ 5 ವಿಕೆಟ್ ಗೆ 213 ರನ್ ಬಾರಿಸಿ ಗೆಲುವು ಕಂಡಿತು. ಅದರೊಂದಿಗೆ ವಿಶ್ವಕಪ್ ಅರ್ಹತಾ ಟೂರ್ನಿಯ ಫೈನಲ್ ಸ್ಥಾನವನ್ನ ಖಚಿತ ಮಾಡಿಕೊಂಡಿತು.


Post a Comment

0 Comments