5 ನೇ ಬಾರಿ IPL ಕಿರೀಟ ಮುಡಿಗೇರಿಸಿಕೊಂಡ ಮುಂಬೈ ಇಂಡಿಯನ್ಸ್

ತೀವ್ರ ಕುತೂಹಲ ಮೂಡಿಸಿದ್ದ ಐಪಿಎಲ್ 13ಕ್ಕೆ ತೆರೆ ಬಿದ್ದಿದ್ದು 2019ರ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತೊಮ್ಮೆ ಚಾಂಪಿಯನ್ ಆಗುವ ಮೂಲಕ ನಾಯಕ ರೋಹಿತ್ ಶರ್ಮಾ 5ನೆ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದ್ದಾರೆ.



ಐಪಿಎಲ್ ಆವೃತ್ತಿಯ ಆರಂಭದ ಋತುಗಳಲ್ಲೂ ಕಳಪೆ ಪ್ರದರ್ಶನ ತೋರಿದ್ದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಬಲಿಷ್ಠವಾಗಿ ಹರಳಿದ್ದು ಕಳೆದ ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್‍ನಲ್ಲಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ.

2013,2015, 2017, 2019 ಹೀಗೆ ಬೆಸ ಸಂಖ್ಯೆಯ ಋತುವಿನಲ್ಲಿ ಮಾತ್ರ ರೋಹಿತ್ ಬಳಗ ಪ್ರಶಸ್ತಿ ಜಯಿಸುತ್ತದೆ ಎಂಬ ಮಾತನ್ನು ಸುಳ್ಳಾಗಿಸುವ ಮೂಲಕ ಸತತ 2ನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಆಗುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ನಂತರ ಈ ಸಾಧನೆ ಮಾಡಿದ 2ನೇ ತಂಡವೆಂಬ ಖ್ಯಾತಿ ಗಳಿಸಿದೆ.

Post a Comment

0 Comments