ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

'ಸ್ಪರ್ಧಾಲೋಕ'-'IAS/KAS..in ಕನ್ನಡ':
ಪ್ರಶ್ನೋತ್ತರಗಳು :

1. ಕೃತಕವಾಗಿ ಹಣ್ಣು ಮಾಡಲು ಉಪಯೋಗಿಸುವ ರಾಸಾಯನಿಕದ
ಹೆಸರೇನು?
ಉತ್ತರ:- ಇಥೈಲಿನ್.

2. ನಾಣ್ಯಗಳ ಸಂಗ್ರಹ ಮತ್ತು ಅಧ್ಯಯನ ಶಾಸ್ತ್ರವನ್ನು ಏನೆಂದು ಕರೆಯುವರು ?
ಉತ್ತರ:- ನ್ಯೂಮಿಸ್ ಮ್ಯಾಟಿಕ್ಸ್.

3. ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗವನ್ನು ಕಲ್ಪಿಸುವ ಯೋಜನೆ ಯಾವುದು ?
ಉತ್ತರ:- SJGSY

4.ಯಾವ ವಾರ್ಷಿಕ ಬಜೆಟ್ ನಲ್ಲಿ ಯಶಸ್ವಿನಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಯಿತು ?
ಉತ್ತರ :- 2003-2004.

5. ಯಾವ ದೊರೆಯ ಅವಧಿಯಲ್ಲಿ ಗಾಂಧಾರ ಕಲಾಶೈಲಿಯಲ್ಲಿ ಪ್ರಥಮವಾಗಿ ಬುದ್ಧನ ಪ್ರತಿಮೆ
ರಚನೆಯಾಯಿತು ?
ಉತ್ತರ :- ಕಾನಿಷ್ಕ.

6. ಕರ್ಕಾಟಕ ಸಂಕ್ರಾಂತಿ ವೃತ್ತವು ಕೆಳಗಿನ ಯಾವ ರಾಜ್ಯದಲ್ಲಿ ಹಾದು ಹೋಗುವುದಿಲ್ಲ ?
ಉತ್ತರ:- ಉತ್ತರ ಪ್ರದೇಶ.

7. ಅತಿ ಹೆಚ್ಚಿನ ವಜ್ರದ ನಿಕ್ಷೇಪದ ಗಣಿಗಳು ಎಲ್ಲಿ ಕಂಡುಬರುತ್ತವೆ?
ಉತ್ತರ:- ದ.ಆಫ್ರಿಕಾದ ಕಿಂಬರ್ಲಿ.

8. ಕೂಲಿಗಾಗಿ ಕಾಳು ಯಾವ ಪಂಚವಾರ್ಷಿಕ ಯೋಜನೆಯ
ಘೋಷಣೆಯಾಗಿದೆ.?
ಉತ್ತರ. :- 5 ಪಂಚವಾರ್ಷಿಕ ಯೋಜನೆ

9.ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೇರಿಕ ಸರ್ಕಾರ ನೀಡುವ ಗ್ರಾಮ್ಮಿ ಪುರಸ್ಕಾರವನ್ನು ಹೆಚ್ಚು ಬಾರಿ ಪಡೆದವರು ಯಾರು ?
ಉತ್ತರ:-ಬ್ರಿಯಾನ್ ಆಡಮ್ಸ್.

10. A NEW DEAL FOR ASIA ಗ್ರಂಥದ ಕರ್ತೃ ಯಾರು?
ಉತ್ತರ:-ಮಹತ್ತೀರ್ ಮೊಹ್ಮದ್.

Post a Comment

0 Comments