🌕 ವಿಶ್ವಸಂಸ್ಥೆ 🌕
• ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ಅಕ್ಟೋಬರ್ 24, 1945.
• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.
• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.
• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.
• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.
• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.
• ಸಾರ್ಕ ಸ್ಥಾಪನೆಯಾದ ವರ್ಷ 1985.
• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).
• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.
• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.
• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.
• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948
• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.
• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.
• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.
• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.
ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.
2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?
1. ಸಾಮಾನ್ಯ ಸಭೆ
2. ಭದ್ರತಾ ಸಮಿತಿ
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ
4. ಧರ್ಮದರ್ಶಿ ಸಮಿತಿ
5. ಸಚಿವಾಲಯ
6. ಅಂತರಾಷ್ಟ್ರೀಯ ನ್ಯಾಯಾಲಯ
3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?
ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು
🌕
2 Comments
Tq
ReplyDeleteso nise
Delete