ಇತಿಹಾಸ ಪಾಠ : ಶಿವಾಜಿ

Share this:

ಇತಿಹಾಸ@ಮಾಹಿತಿ ಕಣಜ:

ಈ ಕೆಳಗಿನವರಲ್ಲಿ ಶಿವಾಜಿಯ ತಂದೆ ಯಾರು?

a) ರಾಜಾರಾಮ
b) ಸಾಂಬಾಜಿ
c) ಷಹಜೀ ಬೋಂಸ್ಲೆ
d) ಮೇಲಿನ ಯಾರು ಅಲ್ಲ
C✅✅
ಷಹಜೀ ಬೋಂಸ್ಲೆ

# ಷಹಜೀ ಬೋಂಸ್ಲೆ ಇವರು ಅಹಮದ್ ನಗರದ ನಿಜಾಂಷಾಹಿ ಸುಲ್ತಾನನ ಬಳಿ ದಂಡನಾಯಕನಾಗಿದ್ದನು.

# ಷಹಜೀ ಬೋಂಸ್ಲೆ  ಮತ್ತು ಜೀಜಾಬಾಯಿಯವರ ಪುತ್ರನಾಗಿ  ಶಿವಾಜಿಯು ಶಿವನೇರುದುಗ೯ದಲ್ಲಿ  ಜನಿಸಿದನು.
ಶಿವಾಜಿಯು ಯಾವ ವಷ೯ ಸಿಂಹಾಸನವನ್ನು ಏರಿದನು?

a) 1665
b) 1666
c) 1660
d) 1674
D✅✅✅
1674

# ಶಿವಾಜಿಯು ಕ್ರಿ.ಶ 1670 ರಲ್ಲಿ ಸೂರತ್ ನ್ನು ಎರಡನೇ ಬಾರಿಗೆ ಲೂಟಿ ಮಾಡಿದನು.

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ ಮಹಾರಾಜ ಛತ್ರಪತಿ ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.

# ಶಿವಾಜಿಯು ಕ್ರಿ.ಶ 1680 ರಲ್ಲಿ ತನ್ನ 53 ನೇ ವಯಸ್ಸಿನಲ್ಲಿ ಮರಣಹೊಂದಿದನು.
Q). ಈ ಕೆಳಗಿನ ಯಾವ ಮರಾಠ ದೊರೆಯು "ಮಹಾರಾಜ ಛತ್ರಪತಿ" ಎಂಬ ಬಿರುದನ್ನು ಹೊಂದಿರುವನು?

a) ಷಹಜೀ ಬೋಂಸ್ಲೆ
b) ಶಿವಾಜಿ
c) ಸಾಂಬಾಜಿ
d) ರಾಜಾರಾಮ
B✅✅ಶಿವಾಜಿ

# ಶಿವಾಜಿಯು ಕ್ರಿ.ಶ 1627 ರಲ್ಲಿ ಶಿವನೇರುದುಗ೯ದಲ್ಲಿ ಜನಿಸಿದನು.

# ಶಿವಾಜಿಯ ತಂದೆ : ಷಹಜೀ ಬೋಂಸ್ಲೆ ತಾಯಿ : ಜೀಜಾಬಾಯಿ

# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
Q). ಶಿವಾಜಿಯು ಯಾರೊಂದಿಗೆ ಪುರಂದರ ಒಪ್ಪಂದವನ್ನು ಮಾಡಿಕೊಂಡನು?

a) ಜಯಸಿಂಗ
b) ಇಮ್ಮಡಿ ಪುಲಕೇಶಿ
c) ಹಷ೯ವಧ೯ನ
d) ಅಕ್ಬರ್
A✅✅✅ಜಯಸಿಂಗ

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.
Q). ಶಿವಾಜಿಯನ್ನು ಕ್ರಿ.ಶ 1666 ರಲ್ಲಿ ಯಾವ ಮೊಘಲ್ ದೊರೆಯು ಬಂಧಿಸಿದನು.

a) ಅಕ್ಬರ್
b) ಷಹಜಹಾನ್
c) ಔರಂಗಜೇಬ್
d) ಹುಮಾಯೂನ್
C✅✅✅ಔರಂಗಜೇಬ್

# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.

# "ಪುರಂದರ  ಒಪ್ಪಂದದ" ಪ್ರಕಾರ ಶಿವಾಜಿಯು ಆಗ್ರಾಕ್ಕೆ ಬೇಟಿ ನೀಡಿದಾಗ ಔರಂಗಜೇಬ್ ನು ಶಿವಾಜಿ ಮತ್ತು ಅವನ ಮಗ ಸಾಂಬಾಜಿಯನ್ನು ಬಂಧಿಸಿದನು. ಆದರೆ ಶಿವಾಜಿ ಮತ್ತು ಸಾಂಬಾಜಿ ಚಾಣಾಕ್ಷತನದಿಂದ ಬಂಧನದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಹಿಂದಿರುಗಿದರು.
Q).  ಈ ಕೆಳಗಿನವರಲ್ಲಿ ಯಾವ ದೊರೆಯು ಆಡಳಿತದಲ್ಲಿ "ಅಷ್ಟಪ್ರಧಾನ ವ್ಯವಸ್ಥೆ" ಹೊಂದಿರುವನು?

a) ವಿಷ್ಣು ವಧ೯ನ
b) ಮಯೂರವಮ೯
c) ಇಮ್ಮಡಿ ಪುಲಕೇಶಿ
d) ಶಿವಾಜಿ
D✅✅✅ಶಿವಾಜಿ

# ಮರಾಠ ದೊರೆಯಾದ ಶಿವಾಜಿಯ ಆಳ್ವಿಕೆಯ ಕಾಲ ಕ್ರಿ.ಶ 1627 - 1680

# ಶಿವಾಜಿಯು ಎಂಟು ಮಂತ್ರಿಗಳನ್ನುಳ್ಳ "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ" ಯನ್ನು ರೂಪಿಸಿದನು

#  "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ"ಯ ಎಂಟು ಮಂತ್ರಿಗಳು

1) ಪೇಶ್ವೆ ಅಥವಾ ಮುಖ್ಯ ಪ್ರಧಾನ : ಇವನು ಪ್ರಧಾನಮಂತ್ರಿ ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನು.

2) ಮಜುಮ್ ದಾರ್ ಅಥವಾ ಅಮಾತ್ಯ : ಹಣಕಾಸು ಮಂತ್ರಿ

3) ಮಂತ್ರಿ ಅಥವಾ ವಖಿಯಾ ನಾವಿಸ್ : ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನು ಆಗಿದ್ದನು.

4) ಸಚಿವ ಅಥವಾ ಸುನ೯ವಿಸ್ : ಇವನು ಮುಖ್ಯ ಕಾಯ೯ದಶಿ೯ಯಾಗಿದ್ದು, ರಾಜನ ಸಂಪಕಾ೯ಧಿಕಾರಿಯಾಗಿದ್ದನು.

5) ಸುಮಂತ ಅಥವಾ ದಾಭಿರ್ : ವಿದೇಶಾಂಗ ಸಚಿವನಾಗಿದ್ದನು.

6) ಸೇನಾಪತಿ ಅಥವಾ ಸಾರ್ - ಇ - ನೌಬತ್ : ಮುಖ್ಯ ಸೇನಾನಿಯಾಗಿದ್ದನು.

7) ಪಂಡಿತ್ ರಾವ್ ಅಥವಾ ದಂಡಾಧ್ಯಕ್ಷ : ಧಾಮಿ೯ಕ ಸಲಹೆಗಾರ, ದಾನ ದತ್ತಿಗಳ ಮೇಲ್ವಿಚಾರಕನಾಗಿದ್ದನು.

8) ನ್ಯಾಯಾಧೀಶ : ಮುಖ್ಯ ನ್ಯಾಯಾಧೀಶನಾಗಿದ್ದನು.
Q). ಶಿವಾಜಿ  ಆಡಳಿತದಲ್ಲಿ ಸರ್ನೋಬತ್ ಎಂದರೆ..........

a) ಗ್ರಾಮ ಮುಖಂಡ
b) ಗುಮಾಸ್ತ
c) ಸೈನೈಧಿಕಾರಿ
d) ಭೂ ದಾಖಲೆ ಇಡುವವ
C✅✅✅
ಸೈನೈಧಿಕಾರಿ

# ಶಿವಾಜಿ ಆಡಳಿತದಲ್ಲಿ ಸೇನಾಪತಿಗೆ (ಸರ್ನೋಬತ್) - ಸೈನ್ಯದ ಮಹಾದಂಡನಾಯಕ. ಸೈನಿಕರು ನೇಮಕ, ಶಿಸ್ತು, ದಕ್ಷತೆ ಇವನಿಗೆ ಸೇರಿದ್ದಿತು. ಶಿವಾಜಿಯ ಸೇನಾಪತಿ "ಹಂಬಿರರಾವ ಮೋಹಿತೆ" ನಾಗಿದ್ದನು.
ಶಿವಾಜಿ ಆರಂಭದಲ್ಲಿ ನಿಗದಿಪಡಿಸಿದ್ದ  ಭೂ ಕಂದಾಯ ಪ್ರಮಾಣವು ಶೇ .............

a) 33
b) 60
c) 44
d) 70
A✅✅✅# ಶಿವಾಜಿ ಆರಂಭದಲ್ಲಿ ಶಿವಾಜಿ ಕತಿ ಎಂಬ ಕಟ್ಟಿಗೆ ಮಾಪನ ಬಳಸಿ, ಭೂ ಸವೇಕ್ಷಣೆ ಮಾಡಿಸಿ ಫಲವತ್ತೆಗೆ ತಕ್ಕಂತೆ ಭೂ ಕಂದಾಯವನ್ನು ನಿಗದಿಪಡಿಸಿದನು ಒಟ್ಟು ಉತ್ಪನ್ನದ ಶೇ 33% ಭಾಗವನ್ನು ಭೂ ಕಂದಾಯವಾಗಿ ನಿಗದಿಪಡಿಸಿದನು.
Q). ಶಿವಾಜಿ ನಂತರದ ಕಾಲದಲ್ಲಿ ಭೂ ಕಂದಾಯ ಶೇ 33 ರಿಂದ......ಗೆ ಹೆಚ್ಚಾಯಿತು?

a) 40%
b) 37%
c) 35%
d) 55%
A✅✅✅40%

# ಶಿವಾಜಿ ನಂತರದ ಕಾಲದಲ್ಲಿ ಇತರ ತೆರಿಗೆಗಳನ್ನು ರದ್ದುಪಡಿಸಿ ಅದನ್ನು ಶೇ .40%  ಕ್ಕೆ ಹೆಚ್ಚಿಸಲಾಯಿತು ಭೂ ಕಂದಾಯವನ್ನು ಹಣ ಇಲ್ಲವೆ ಧ್ಯಾನವನ್ನು ಕಂತುಗಳ ರೂಪದಲ್ಲಿ ಕೊಡಲು ಆರಂಭ ಮಾಡಿದನು.
Q).  ಶಿವಾಜಿಯ ಮುಖ್ಯ ಸೇನಾ ವಿಭಾಗಗಳಾವುವು?

1) ಅಶ್ವಪಡೆ
2)ಫಿರಂಗಿ ಪಡೆ
3)ಕಾಲು ಪಡೆ
4) ಗಜಪಡೆ

a) 1 ಮತ್ತು 2
b) 2 ಮತ್ತು 3
c) 1.2. ಮತ್ತು 3
d) 1.2.3.4
D✅✅✅
# ಶಿವಾಜಿಯ ಸೈನ್ಯವು ಮುಖ್ಯ ಶಿವಾಜಿಯ ಸೈನ್ಯವು ಕಾಲ್ದಳ, ಅಶ್ವಪಡೆ, ಗಜಪಡೆ, ಒಂಟೆಪಡೆ, ನೌಕಪಡೆ, ಮತ್ತು ಫಿರಿಂಗಿಪಡೆಗಳಿಂದ ಕೂಡಿತ್ತು. ಅವನ ಬಳಿ 1 ಲಕ್ಷ ಮಾವಳಿಗಳು, 60,000  ಶಿಲಾಹ್ದಾದರು, 45,000 ಅಶ್ವಪಡೆ, 1260 ಆನೆಗಳು, 3000 ಒಂಟೆಗಳು ಮತ್ತು 80 ಫಿರಂಗಿಗಳಿದ್ದವು, ಸೈನ್ಯದ ಮೇಲ್ವಿಚಾರಣೆ ಮಹಾದಂಡ ನಾಯಕನಿಗೆ ಸೇರಿತ್ತು.
ಶಿವಾಜಿಯ ಕೋಟೆಯ ಅಧಿಕಾರಿ............

a) ಸಬ್ನೀಸ್
b) ಹವಾಲ್ದಾರ್
c) ದುರ್ಗಪಾಲಿ
d) ಸರ್ನೋಬತ್
D✅✅ಶಿವಾಜಿ ಕೋಟೆಯಲ್ಲಿ ಹಜಾರಿಗಳ ಮೇಲೆ ಒಬ್ಬ ಸರ್ನೋಬತ್ ಅಧಿಕಾರ ಅಥವಾ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಸೇನಾಪತಿ ಕಾಲ್ದಳದ ಮುಖ್ಯಸ್ಥನಾಗಿದ್ದ

ನು. ಯುದ್ದದ್ದಲಿ ಶಿವಾ

ಜಿಯೇ ಸರ್ವೋಚ್ಛ ಸೇನಾಪತಿಯಾಗಿ ಸ್ವತ: ನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.
Q). ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............

a) ದೇಶಪಾಂಡೆ
b) ಪಟೇಲ
c) ಕನಕಲ್
d) ದೇಶಮುಖ್
B✅✅ಪಟೇಲ

#ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.
Q). ಶಿವಾಜಿ ಯಾವಾಗ ಜನಿಸಿದನು?

a) ಕ್ರಿ.ಶ.1625
b) ಕ್ರಿ.ಶ.1627
c) ಕ್ರಿ.ಶ.1647
d) ಕ್ರಿ.ಶ.1628
್ರಿ.ಶ.1627

ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
Q). ಶಿವಾಜಿಯ ನೌಕ ನೆಲೆ ಎಲ್ಲಿತ್ತು ?

a) ಕೊಲಾಬಾ
b) ಕಲ್ಯಾಣ
c) ಬೆಸ್ಸಿನ್
d) ಸಾಲ್ಸಿಟಿ
A✅✅✅# ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.
Q). ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _________ರಲ್ಲಿ

a) 1712
b) 1713
c) 1715
d) 1718
B✅✅# ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.
Q). ಶಿವಾಜಿಯ ಆಧ್ಯಾತ್ಮಕ ಗುರು ಯಾರು?

a) ರಾಮದಾಸ
b) ರೈದಾಸ
c) ದಾದಾಜಿಕೊಂಡದೇವ
d) ಶಂಕರದೇವ
A✅✅✅
#ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
Q). ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.

a) 1664 ಮತ್ತು 1670
b) 1665 ಮತ್ತು 1871
c) 1666 ಮತ್ತು 1672
d) 1667 ಮತ್ತು 1675
A✅✅1664 ಮತ್ತು 1670

#1664-1670  ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.
Q). ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?

a) ಸಚಿವ
b) ಅಮಾತ್ಯ
c) ಸುಮುಂತ
d) ಪೇಶ್ವ
B✅✅✅ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.
Q). ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಾಡುವಂತೆ ಮಾಡೋಣ ಹೀಗೆಂದು ಹೇಳಿದವರು...

a) 1 ನೇ ಬಾಜಿರಾಯ
b) ಬಾಲಾಜಿರಾವ
c) ಬಾಲಾಜಿ ವಿಶ್ವನಾಥ
d) ಶಿವಾಜಿ
A✅✅✅1 ನೇ ಬಾಜಿರಾಯ

ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.
Q). ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?

a) ದಿಲವಾರಖಾನ್
b) ಜೈಸಿಂಗ್
c) ಬಹದ್ದೂರ್ ಖಾನ್
d) ಜಸ್ವಂತ್ ಸಿಂಗ್
B✅✅✅ಜೈಸಿಂಗ್

#ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.
Q). ಶಿವಾಜಿಗೆ ಕಿರೀಟ ಧಾರಣೆಯಾದ ವರ್ಷ........

a) ಕ್ರಿ.ಶ.1774
b) ಕ್ರಿ.ಶ.1778
c) ಕ್ರಿ.ಶ.1672
d) ಕ್ರಿ.ಶ.1674
#ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.
D✅✅✅
Q). ಶಿವಾಜಿ ಮರಣ ಹೊಂದಿದ ವರ್ಷ..........

a) ಕ್ರಿ.ಶ.1680
b) ಕ್ರಿ.ಶ.1984
c) ಕ್ರಿ.ಶ.1686
d) ಕ್ರಿ.ಶ.1690
A✅✅✅ಕ್ರಿ.ಶ.1680

#ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.
Q). ಶಿವಾಜಿ ತನ್ನ ರಾಜ್ಯವನನು .......... ಭಾಗಗಳಾಗಿ ವಿಭಾಗಿಸಿದ್ದನು?

a) 2
b) 3
c) 4
d) 5
C✅✅✅#ಶಿವಾಜಿ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು.

No comments:

Disclamer

All the information published in this web page is submitted by users or free to download on the internet. I make no representations as to accuracy, completeness, currentness, suitability, or validity of any information on this page and will not be liable for any errors, omissions, or delays in this information or any losses, injuries, or damages arising from its display or use. All information is provided on an as-is basis. All the other pages you visit through the hyper links may have different privacy policies. If anybody feels that his/her data has been illegally put in this web page, or if you are the rightful owner of any material and want it removed please email me at"shashikumarjr@gmail.com" and I will remove it immediately on demand. All the other standard disclaimers also apply.