ಸಾಮಾನ್ಯ ವಿಜ್ಞಾನ

ಜ್ಞಾನಸೌರಭ:

1) ಧರೆಯಲ್ಲಿ ದೊರಕುವ ಖನಿಜಗಳಲ್ಲೆಲ್ಲ
`ಗಟ್ಟಿತನ ~ ದಲ್ಲಿ ಪ್ರಪ್ರಥಮ ಸ್ಥಾನದಲ್ಲಿರುವ ಖನಿಜದ
ಹರಳುಗಳು (ಚಿತ್ರ - 1) ರಲ್ಲಿವೆ . ಈ ಖನಿಜ
ಯಾವುದು ಗೊತ್ತೇ ?

ಅ) ಕ್ವಾರ್ಟ್ಜ್ ಬ) ಕೋಕಂಡಂ
ಕ) ವಜ್ರ ಡ ) ಟೋಪಾಜ್

2) ಶರೀರ ಗಾತ್ರಕ್ಕೆ ಹೋಲಿಸಿದರೆ ಬೃಹದಾಕಾರ
ಎನಿಸುವ ಹಕ್ಕಿಯೊಂದು (ಚಿತ್ರ - 2 ) ರಲ್ಲಿದೆ . ಈ
ಹಕ್ಕಿಯ ಹೆಸರೇನು?

ಅ) ಟೌಕಾನ್ ಬ ) ಹಾರ್ನ್ಬಿಲ್
ಕ) ಪೆಲಿಕನ್ ಡ) ಸ್ಪೂನ್ ಬಿಲ್

3) ` ದಕ್ಷಿಣ ಅಮೆರಿಕ~ ಖಂಡದ ಭೂಪಟ ( ಚಿತ್ರ - 3 )
ಇಲ್ಲಿದೆ . ಕೆಳಗಿನ ಪಟ್ಟಿಯಲ್ಲಿ ಯಾವುದು ಈ
ಭೂಖಂಡದಲ್ಲಿಲ್ಲ? ಗುರುತಿಸಿ .

ಅ) ಆ್ಯಂಡಿಸ್ ಪರ್ವತ ಪಂಕ್ತಿ
ಬ) ಇಗುವಾಜು ಜಲಪಾತ
ಕ) ಅಮೆಜಾನ್ ನದಿ
ಡ) ಕಲಹಾರಿ ಮರುಭೂಮಿ
ಇ) ಪಾಂಪಾಸ್ ಹುಲ್ಲು ಬಯಲು

4) ನಮ್ಮ ಸೌರವ್ಯೂಹದ್ದೇ ಒಂದು ಗ್ರಹವಾದ
`ಶುಕ್ರ~ ದ ಮೇಲ್ಮೈನ ಒಂದು ದೃಶ್ಯ (ಚಿತ್ರ -
4) ರಲ್ಲಿದೆ . ಶುಕ್ರಗ್ರಹವನ್ನು ಕುರಿತ ಈ
ಹೇಳಿಕೆಗಳಲ್ಲಿ ಯಾವುದು ಸರಿ ಅಲ್ಲ ?

ಅ) ಸೌರವ್ಯೆಹದ ಅತ್ಯಂತ ಬಿಸಿ ಗ್ರಹ
ಬ) ಸೌರವ್ಯೆಹದ ಅತ್ಯಂತ ಉಜ್ವಲ ಗ್ರಹ
ಕ) ಭೂಮಿಯನ್ನೇ ಹೋಲುವ ಗಾತ್ರ
ಡ) ಅದರ `ಒಂದು ವರ್ಷ ~ ಭೂ ವರ್ಷಕ್ಕಿಂತ ದೀರ್ಘ

5) ಭೂ ವಾತಾವರಣದಲ್ಲಿ ಬೆಳ್ಳಗೆ ಬಿಸಿಯಾಗಿ
ನೆಲದತ್ತ ಬೀಳುತ್ತಿರುವ `ಉಲ್ಕೆ ~ ಯೊಂದರ
ದೃಶ್ಯ (ಚಿತ್ರ - 5 ) ರಲ್ಲಿದೆ . ಉಲ್ಕೆಗಳು ಹೀಗೆ
ಉರಿಯುವಷ್ಟು ಬಿಸಿಯಾಗಲು ಕಾರಣವಾದ ಎರಡು
ಅಂಶಗಳು ಯಾವುವು ?

ಅ) ಅವುಗಳ ಗಾತ್ರ ಬ) ಅವುಗಳ ವೇಗ
ಕ) ಅವುಗಳ ದ್ರವ್ಯ ಸಂಯೋಜನೆ
ಡ) ವಾಯುಮಂಡಲದೊಡನೆ ಘರ್ಷಣೆ

6) ( ಚಿತ್ರ - 6 ) ರಲ್ಲಿರುವ ಆನೆಯನ್ನು ನೋಡಿ
ಗಮನಿಸಿದೊಡನೆಯೇ ಇದು ` ಏಷಿಯನ್ ಆನೆ ~ ಎಂದು
ನಿರ್ಧರಿಸಬಹುದು. ಅದಕ್ಕೆ ಆಧಾರವಾಗುವ
ನಿರ್ಣಾಯಕ ಲಕ್ಷಣ ಯಾವುದು?

ಅ) ಕಿವಿಯ ವೈಶಾಲ್ಯ
ಬ) ಸೊಂಡಿಲಿನ ಉದ್ದ
ಕ) ಶರೀರ ಗಾತ್ರ
ಡ) ದೇಹದ ಬಣ್ಣ

7) ಚಲಿಸುತ್ತಿರುವ ವಾಹನವೊಂದು ಸಮೀಪ
ಬಂದಂತೆ ಶಬ್ದ ಹೆಚ್ಚಾಗುವ , ದೂರ ಹೋದಂತೆ
ಕಡಿಮೆಯಾಗುವ ವಿದ್ಯಮಾನ ಗೊತ್ತಲ್ಲ? (ಚಿತ್ರ -
7) ಈ ಪ್ರಸಿದ್ಧ ವಿದ್ಯಮಾನದ ಹೆಸರೇನು?
ಅ) ರಾಮನ್ ಪರಿಣಾಮ
ಬ) ಡಾಪ್ಲರ್ ಪರಿಣಾಮ
ಕ) ಕಾಂಪ್ಟನ್ ಪರಿಣಾಮ
ಡ) ಜೀಮ್ಯಾನ್ ಪರಿಣಾಮ
8) ನಕ್ಷತ್ರಗಳ ಜನ್ಮ ನೆಲೆಯಾದ `ಆಂತರಿಕ್ಷ
ಕಾಯ~ ವೊಂದು (ಚಿತ್ರ - 8 ) ರಲ್ಲಿದೆ . ಈ ಕಾಯ
ಯಾವುದು?
ಅ) ನಕ್ಷತ್ರ ಪುಂಜ ಬ ) ನೀಹಾರಿಕೆ
ಕ) ತಾರಾ ಗುಚ್ಛ ಡ ) ಗ್ಯಾಲಕ್ಸಿ
9) ಪ್ರಾಚೀನ ಕಾಲದ , ಪುರಾತನ ನಾಗರಿಕತೆಗೆ
ಸೇರಿದ, ವಿಶಿಷ್ಟ ವಿನ್ಯಾಸದ , ಬಹುಮಹಡಿ ಎತ್ತರದ
`ಪಿರಮಿಡ್~ (ಚಿತ್ರ - 9) ರಲ್ಲಿದೆ . ಇಂತಹ ಗೋಪುರ
ಶಿಲ್ಪಗಳನ್ನು ಈ ಕೆಳಗೆ ಹೆಸರಿಸಿರುವ ಯಾವ
ರಾಷ್ಟ್ರಗಳಲ್ಲಿ ನೇರ ನೋಡಬಹುದು ?
ಅ) ಕಾಂಬೋಡಿಯಾ ಬ ) ಇರಾಕ್
ಕ) ಗ್ವಾಟೆಮಾಲಾ ಡ ) ಹಾಂಡುರಾಸ್
ಇ) ಚಿಲಿ ಈ) ಈಜಿಪ್ಟ್
ಉ) ಮೆಕ್ಸಿಕೋ
10) ಪರಮಾಣುವಿನೊಳಗಿನ ಕೆಲ ಕಣಗಳ ಪಥಗಳ
ಒಂದು ಚಿತ್ರಣ ಇಲ್ಲಿದೆ ( ಚಿತ್ರ - 10)
ಪರಮಾಣುಗಳೊಳಗಿನ `ಎಲೆಕ್ಟ್ರಾನ್ ~ ನಂತಹದೇ
ಆದ, ಆದರೆ ತದ್ವಿರುದ್ಧ ಗುಣದ ಕಣ ಯಾವುದು
ಗೊತ್ತೇ ?
ಅ) ಪ್ರೋಟಾನ್ ಬ ) ಪಾಸಿಟ್ರಾನ್
ಕ) ನ್ಯೂಟ್ರಿನೋ ಡ ) ಗ್ರಾವಿಟಾನ್
11) (ಚಿತ್ರ - 11) ರಲ್ಲಿರುವ ಹಕ್ಕಿಗಳನ್ನು
ನೋಡಿದಿರಾ?
ಅ) ಈ ಹಕ್ಕಿಯ ಹೆಸರೇನು?
ಬ) ಲಕ್ಷಾಂತರ ಸಂಖ್ಯೆಯ ಈ ಹಕ್ಕಿ
ಗುಂಪುಗಳನ್ನು ಯಾವ ಭೂಖಂಡದಲ್ಲಿ
ನೋಡಬಹುದು?

12) ಶನಿಗ್ರಹ ಮತ್ತು ಅದರ ಕೆಲ ಚಂದ್ರದ ಚಿತ್ರ ಇಲ್ಲಿದೆ
(ಚಿತ್ರ - 13) . ಕೆಲವು ಗ್ರಹಗಳ ಮತ್ತು ಅವುಗಳ
ಒಂದೊಂದು ಚಂದ್ರದ ಈ ಪಟ್ಟಿಗಳನ್ನು ಸರಿ ಹೊಂದಿಸಿ :

ಅ) ಶನಿ 1 ) ಫೋಬೋಸ್
ಬ) ಮಂಗಳ 2 ) ಕ್ಯಾಲಿಸ್ಟೋ
ಕ) ಯುರೇನಸ್ 3 ) ಟೈಟಾನ್
ಡ) ಗುರು 4 ) ಮಿರಾಂಡಾ

ಉತ್ತರಗಳು:

1) ಕ - ವಜ್ರ 2 ) ಬ - ಹಾರ್ನ್ಬಿಲ್
3) ಡ - ಕಲಹಾರೀ ಮರುಭೂಮಿ (ಇದು
ಆಫ್ರಿಕಾದಲ್ಲಿದೆ)
4) ಡ - ತಪ್ಪು ಹೇಳಿಕೆ 5 ) ಬ ಮತ್ತು ಡ
6) ಅ - ಕಿವಿಯ ವೈಶಾಲ್ಯ (ಆಫ್ರಿಕನ್ ಆನೆಗಿಂತ
ಕಡಿಮೆ)
7) ಬ - ಡಾಪ್ಲರ್ ಪರಿಣಾಮ
8) ಬ - ನೀಹಾರಿಕೆ
9) ಕ , ಡ , ಮತ್ತು ಉ 10) ಬ - ಪಾಸಿಟ್ರಾನ್
11) ಅ - ಪೆಂಗ್ವಿನ್; ಬ - ಅಂಟಾರ್ಕ್ಟಿಕಾ
12) ಅ - 3 ; ಬ - 1 ; ಕ - 4 ; ಡ - 2

Post a Comment

0 Comments