ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ.

ಕೆ.ಎ.ಎಸ್. ಪರೀಕ್ಷೆಗೆ ಅಗತ್ಯವಾದ ಅತ್ಯುಪಯುಕ್ತ ಪುಸ್ತಕಗಳ ಪಟ್ಟಿ.

ಪ್ರಾಚೀನ ಭಾರತದ ಇತಿಹಾಸ – ಭಾರತ ಸರ್ಕಾರದ ಪ್ರಚಾರ ವಿಭಾಗ
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಸಮಗ್ರ ಇತಿಹಾಸ – ಎಚ್.ಎನ್.ಬಸವರಾಜ
ಸಮಗ್ರ ಭಾರತದ ಇತಿಹಾಸ – ಡಾ|| ಕೆ.ಸದಾಶಿವ
ಕರ್ನಾಟಕ ಪರಂಪರೆ ಭಾಗ -೧
ಕರ್ನಾಟಕ ಪರಂಪರೆ ಭಾಗ -೨ ಕನ್ನಡ ಅಭಿವೃದ್ಧಿ ಪ್ರಾಧಿಕಾರ (ಪ್ರಕಟಿತ)
ಸ್ವತಂತ್ರ ಭಾರತ -1942 ರಿಂದ 2010 – ಪಾಲಾಕ್ಷ
ಆಧುನಿಕ ಭಾರತದ ಇತಿಹಾಸ – ಲೇ : ಕೆ.ನಾರಾಯಣ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)
ಕರ್ನಾಟಕ ಇತಿಹಾಸ – ಕೆ.ನಾರಾಯಣ
ಸ್ವತಂತ್ರ ಭಾರತ – ಕೆ.ನಾರಾಯಣ
ಕರ್ನಾಟಕ ಇತಿಹಾಸ – ಕ್ರಿ.ಶ. 1800-1956
ನಮ್ಮ ನಾಡು ಕರ್ನಾಟಕ – ಎಚ್.ಎಸ್.ಗೋಪಾಲರಾವ್
ಸಮಗ್ರ ಕರ್ನಾಟಕ – ಪಾಲಾಕ್ಷ
ಕರ್ನಾಟಕ ಪ್ರವಾಸಿ ತಾಣಗಳು – ಶೇಷುನಾಥನ್ (ಸಾಧನಾ ಪ್ರಕಾಶನ ಬೆಂಗಳೂರು)
ಕರ್ನಾಟಕ ಕೈಗನ್ನಡಿ – ಸೂರ್ಯನಾಥ ಕಾಮತ್
ಪೂರ್ವ ಇತಿಹಾಸ – ಇರ್ಫಾನ್ ಹಬೀಬ್ (ಚಿಂತನ ಪ್ರಕಾಶನ, ಶಿರಸಿ)
ಸಾಮಾನ್ಯ ಭಾರತದ ಅರ್ಥಶಾಸ್ತ್ರ – ನೇ.ತಿ. ಸೋಮಶೇಖರ (ಬೆಂಗಳೂರು ವಿಶ್ವವಿದ್ಯಾಲಯದ ಸೆಮಿಸ್ಟರ್ ಪುಸ್ತಕ)
ಭಾರತ ಸಂವಿಧಾನ – ಯಡಿಯೂರಪ್ಪ ತುಮಕೂರು
ಭಾರತ ಸಂವಿಧಾನ ಮತ್ತು ರಾಜಕೀಯ – ಎಚ್.ಎಮ್. ರಾಜಶೇಖರ
ನಮ್ಮ ನ್ಯಾಯಾಂಗ – ಬಿ.ಆರ್.ಅಗರವಾಲ್
ನಮ್ಮ ಸಂಸತ್ತು – ಸುಭಾಶ ಕಶ್ಯಪ್
ಭಾರತದ ಆರ್ಥಿಕ ಭೂಗೋಳಶಾಸ್ತ್ರ – ಪಿ.ಮಲ್ಲಪ್ಪ
ಭಾರತದ ಪ್ರಾದೇಶಿಕ ಮತ್ತು ಆರ್ಥಿಕ ಭೂಗೋಳಶಾಸ್ತ್ರ – ರಂಗನಾಥ
ಭೂಗೋಳ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ
ಇತಿಹಾಸ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವಕೋಶ ಭಾಗ -೧
ಕರ್ನಾಟಕ ವಿಶ್ವಕೋಶ ಭಾಗ -೨ ಮೈಸೂರು ವಿಶ್ವವಿದ್ಯಾಲಯ
ಭಾರತದ ಆರ್ಥಿಕ ವ್ಯವಸ್ಥೆ – ಎಚ್.ಆರ್. ಕೃಷ್ಣೇಗೌಡ
ಕರ್ನಾಟಕದ ಆರ್ಥಿಕತೆ – ನೀ.ತಿ.ಸೋಮಶೇಖರ
ಕರ್ನಾಟಕ ಭೂಗೋಳ – ಪಿ.ಮಲ್ಲಪ್ಪ
ವಿಜ್ಞಾನ ಕಲಿಯೋಣ ಭಾಗ -1,2,3,4 – ಸಿ.ಎನ್.ಆರ್.ರಾವ್ ಮತ್ತು ಇಂದುಮತಿ ರಾವ್ – ನ್ಯಾಷನಲ್ ಬುಕ್ ಟ್ರಸ್ಟ್
ಜ್ಞಾನ ವಿಜ್ಞಾನ ಕೋಶ – ನವಕರ್ನಾಟಕ ಪ್ರಕಾಶನ
ನವಕರ್ನಾಟಕ ವಿಜ್ಞಾನ ಮಾಲಿಕೆಗಳು – ೧೪ ಸರಣಿ
ಇದು ನಮ್ಮ ಕರ್ನಾಟಕ – ಚಾಣಕ್ಯ ಪ್ರಕಾಶನ
ಕನ್ನಡ ಕನ್ನಡಿಗ ಕರ್ನಾಟಕ – ಎಂ.ಚಿದಾನಂದ ಮೂರ್ತಿ
(dont buy all books, see the syllabus and according to that buy which ever you want)
Also refer:
NCRET and DCRET text books
internet/webportals,
kannada &english news papers,
Manorama, Indian year books, etc…
yojana, chronicle like magzines,
some notes prepared by coaching institues
KAS ಪರೀಕ್ಷೆಯ ತಯಾರಿಗಾಗಿ ಅಭ್ಯರ್ಥಿಯಲ್ಲಿ ಈ ಕೆಳಗಿನ ಗುಣಗಳು ಇರಬೇಕು.

ಕೆ.ಎ.ಎಸ್. ಅಧಿಕಾರಿಯಾಬೇಕೆಂಬ ಬಲವಾದ ಆಸಕ್ತಿ ಇರಬೇಕು. ಏನೋ ಒಂದು ಕೈ ನೋಡುತ್ತೇನೆಂಬ ಭಾವನೆ ಇರಬಾರದು. ನೂರಕ್ಕೆ ನೂರರಷ್ಟು ಉತ್ಸಾಹ ಹಾಗೂ ಛಲ ಇರಬೇಕು.
ಪರೀಕ್ಷೆ ತಯಾರಿ ಮಾಡುವುದು ಬೇರೆ. ಅದರಲ್ಲಿ ಇಳಿಯುವುದು ಬೇರೆ. ಇಲ್ಲಿ ಪರೀಕ್ಷೆಗಾಗಿ ಆಳವಾದ ಅಧ್ಯಯನ ಮಾಡಬೇಕು. ಸಮುದ್ರ ಮೇಲ್ಗಡೆ ತೆರೆಗಳು ಹೆಚ್ಚಾಗಿ ಇರುವುವು. ಆದರೆ ಒಳಗೆ ಹೋದಂತೆ ಅಲ್ಲಿ ಪ್ರಶಾಂತತೆ ಇರುವುದು. ಅದೇ ರೀತಿ ಮೇಲ್ನೋಟಕ್ಕೆ ತಯಾರಿ ನಡೆಸಿದಾಗ ಮೈಂಡ್ ಡಿಸ್ಟರ್ಬ್ ಜಾಸ್ತಿ ಇರುವುದು. ಅದರಲ್ಲಿ ಆಳವಾಗಿ ತೊಡಗಿದಾಗ ನಮ್ಮ ಓದಿಗೆ ಡಿಸ್ಟರ್ಬ್ ಕಡಿಮೆಯಾಗುವುದು.
ಪರೀಕ್ಷೆಗಾಗಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಾಗ, ಅದರಿಂದ ಹೊರಗೆ ಬರಬಾರದು. ಅದನ್ನು ದೃಢತೆ ಎನ್ನುವರು. ದೃಢವಾದ ಮನಸ್ಸು ಇಟ್ಟು ತಯಾರಿ ನಡೆಸಬೇಕು. ಕೆಲವರು ಕೆ.ಎ.ಎಸ್. ಪರೀಕ್ಷೆಗಾಗಿ ಪೂರ್ಣ ತಯಾರಿ ನಡೆಸಿದ್ದಾಗ, ಇನ್ನೊಂದು ಪರೀಕ್ಷೆ ಕಾಲ್ ಫಾರ್ಂ ಆದ ಕೂಡಲೇ ಕೆ.ಎ.ಎಸ್. ಅಲ್ಲೇ ಬಿಟ್ಟು ಇನ್ನೊಂದು ಪರೀಕ್ಷೆಗೂ ತಯಾರಿ ನಡೆಸುತ್ತಾರೆ. ಅದನ್ನು ಪೂರ್ಣಗೊಳಿಸದೆ, ಮತ್ತೊಂದು ಪರೀಕ್ಷೆಗೆ ಜಿಗಿಯುತ್ತಾರೆ. ಇಂಥವರು ಯಾವ ಪರೀಕ್ಷೆಯಲ್ಲಿಯೂ ಯಶಸ್ವಿಯಾಗುವುದಿಲ್ಲ.
ಇಂಥ ಪರೀಕ್ಷೆ ತಯಾರಿ ನಡೆಸಿದಾಗ ನಿಮ್ಮ ಮನಸ್ಸನ್ನು ಆಕರ್ಷಣೆಯಿಂದ ದೂರ ಇಡಬೇಕು. ಆಕರ್ಷಣೆಗೆ ಒಳಗಾಗಿ ಓದುತ್ತಾ ಇದ್ದಾಗ ಅಭ್ಯಾಸ ಪರಿಪೂರ್ಣವಾಗುವುದಿಲ್ಲ. ಮುಗ್ಧ ಮನಸ್ಸು ಏಕಾಗ್ರತೆಗೊಳ್ಳುವುದಿಲ್ಲ. ಯಾವುದೋ ಭಾವಲೋಕದಲ್ಲಿ ಓದುತ್ತಾ ಇರುವುವರು ಅವರು ಎಷ್ಟೇ ಗಂಟೆ ಓದಿದರೂ ಕೂಡಾ, ತಾವು ಯಾವುದು ಓದಿದ್ದು ಎಂಬುದು ಗೊತ್ತಿರುವುದಿಲ್ಲ.
ಈ ಪರೀಕ್ಷೆಗೆ ಏಷ್ಟು ಗಂಟೆ ತಯಾರಿ ನಡೆಸಬೇಕು ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆಯಾಗಿದೆ. ನನ್ನ ಪ್ರಕಾರ ಕನಿಷ್ಠ ೧೨ ರಿಂದ ೧೪ ತಾಸು ಓದಬೇಕು. ಕೆಲವರಿಗೆ ಗಾಬರಿಯಾಗಬಹುದು. ಇದಕ್ಕಿಂತ ಕಡಿಮೆ ಅವಧಿಯನ್ನು ತೆಗೆದುಕೊಂಡರೆ, ವಿಷಯವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲವೆನೋ ಎಂದು ಕೆಲವರು ಹೇಳುವ ಪ್ರಕಾರ ಎಷ್ಟು ಗಂಟೆ ಓದುವುದು ಮುಖ್ಯವಲ್ಲ ಎಷ್ಟು ವಿಷಯ ತಿಳಿದುಕೊಂಡೆವು ಎಂಬುವುದು ಮುಖ್ಯವಾಗುತ್ತದೆ. ಆದರೆ, ಅಧ್ಯಯನಕ್ಕೆ ಕೂಡುವ ಅವಧಿ ಹೆಚ್ಚಿದಂತೆ, ಸಹಜವಾಗಿ ಏಕಾಗ್ರತೆ ಹಾಗೂ ಅರ್ಥ ಮಾಡಿಕೊಳ್ಳುವುದು.
ಸಾಮಾನ್ಯವಾಗಿ ಯಾವ ಸಮಯದಲ್ಲಿ ಓದಬೇಕು ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಇಲ್ಲಿ ಯಾವ ಸಮಯದಲ್ಲಿ ಓದುತ್ತೇನೆ ಎಂಬುದು ಮುಖ್ಯವಲ್ಲ. ಯಾವುದೇ ಸಮಯದಲ್ಲಿ ಓದಿ ಆದರೆ, ಮನಸ್ಸು ಕೊಟ್ಟು ಅಧ್ಯಯನ ಮಾಡಿ. ಸಾಮಾನ್ಯವಾಗಿ ಇಂಥ ಪರೀಕ್ಷೆಗೆ ತಯಾರಿ ನಡೆಸುವವರು ರಾತ್ರಿಯೇ ಹೆಚ್ಚು ಅಧ್ಯಯನ ಮಾಡುತ್ತಾರೆ.
ಈ ಪರೀಕ್ಷೆಗೆ ವಿಶೇಷ ತಯಾರಿ ಹಾಗೂ ಪರಿಶ್ರಮ ಬೇಕಾಗುವುದು. ಅದಕ್ಕಾಗಿ ಸಹನೆ ಇರಬೇಕು. ನಿರಂತರ ಓದುತ್ತಾ ಇದ್ದಾಗ, ಅದನ್ನು ಬಿಟ್ಟು ಓಡಿಹೋಗೋಣ ಎಂಬ ಮನಸ್ಸು ಬರುತ್ತದೆ. ಕೆಲವರು ೧೧ನೇ ಹೆಜ್ಜೆವರೆಗೆ ಬಂದಿರುತ್ತಾರೆ. ಇನ್ನೊಂದು ಹೆಜ್ಜೆ ಇಟ್ಟರೆ, ಗುರಿ ಮುಟ್ಟಲು ಸಾಧ್ಯವಿರುತ್ತದೆ. ಅದನ್ನು ಗುರ್ತಿಸದೆ, ಸಹನೆ ಕಳೆದುಕೊಂಡು ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಾರೆ. ಓಡಿ ಹೋಗುತ್ತಾರೆ.
ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗೆ ತಯಾರಿ ಮಾಡುವಾಗ ನಮ್ಮ ಓದು ಎಷ್ಟು ಮುಖ್ಯವಾಗಿರುತ್ತದೆ. ಅಷ್ಟೇ ಮುಖ್ಯ ನಮಗೆ ಪ್ರೇರ

Post a Comment

0 Comments