ನಮ್ಮ ಬ್ಲಾಗ್ ನಲ್ಲಿರುವ ಮಾಹಿತಿಯನ್ನು ಕನ್ನಡದ ವಿಕಾಸ್‍ಪೀಡಿಯ ಜಾಲತಾಣದಲ್ಲಿ ಪ್ರಕಟಿಸಲು ಅನುಮತಿ ಕೋರಿ ಕನ್ನಡ ವಿಕಾಸ್ ಪೀಡಿಯತಂಡದ ಪತ್ರ

ಶುಭಾಶಯಗಳು!!! ವಿಕಾಸ್ ಪೀಡಿಯಾ ಕರ್ನಾಟಕದ ವತಿಯಿಂದ

ನಮಸ್ಕಾರ,

ತಮ್ಮ ಜಾಲತಾಣ ವಾದ " shashiexambooks.blogspot.com "  ಬಹಳ ಮಹತ್ವಮಾಹಿತಿ ಪೂರ್ಣವಾಗಿದೆ. ಇದರಲ್ಲಿ ಇರುವ ಮಾಹಿತಿಯನ್ನು ವಿಕಾಸ್ ಪೀಡಿಯಾದಲ್ಲಿ  ತಮ್ಮ ಹೆಸರಿನಲ್ಲೆ  ಜನರಿಗೆ  ತಲುಪಿಸಲು ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತೇವೆ. ಕನ್ನಡದ ವಿಕಾಸ್‍ಪೀಡಿಯ ಜಾಲತಾಣಲ್ಲಿ ಪ್ರಕಟಿಸಲು ಅನುಮತಿ ನೀಡಿದರೆ  "ಮೂಲ : ಶಶಿ ಎಕ್ಸಾಮ್ ಬುಕ್ಸ್  "  ಎಂದು ಉಲ್ಲೇಖಿಸಿ ಪ್ರಕಟಿಸುತ್ತೇವೆ. ಅಥವಾ ತಾವುಗಳೇ ನಮ್ಮ ಜಾಲ ತಾಣದಲ್ಲಿ ವಿಷಯ ಕೊಡುಗೆದಾರರಾಗಿ ನೋ೦ದಾಯಿಸಿ ಕೊಂಡರೆ (ನಮ್ಮ ಹೆಮ್ಮೆ)ತಾವು ಗಳೇ ಅಪ್ಲೋಡ್ ಮಾಡಬಹುದು

ನಮ್ಮ ಪರಿಚಯ ಇಂತಿದೆ..... 

 

ವಿಕಾಸ್ ಪೀಡಿಯವು ಜನಸಾಮಾನ್ಯರಿಗಾಗಿ ಭಾರತ ಸರ್ಕಾರ ಕನ್ನಡದಲ್ಲಿ ನಿರ್ಮಿಸಿದ೦ತಹ ಒ೦ದು   ಜಾಲತಾಣವಾಗಿದೆ. ಈ ಪೊರ್ಟಲ್ನಲ್ಲಿ ಕೃಷಿ

ಆರೋಗ್ಯಶಿಕ್ಷಣಸಮಾಜ ಕಲ್ಯಾಣ,  ಇ೦ಧನ ಮತ್ತು -ಆಡಳಿತದ ಕುರಿತ ನಾನಾಬಗೆಯ ವಿಷಯಗಳ ಬಗ್ಗೆ ಜನರಿಗೆಅರಿವು  ಮೂಡಿಸುವುದು ಇದರ ಗುರಿಯಾಗಿದೆ.

 

ವಿಕಾಸ್ ಪೀಡಿಯ ಒಂದು “ ಜ್ಞಾನದ ಹೆಬ್ಬಾಗಿಲಾಗಿದ್ದು”  ದೇಶಕ್ಕೆ ಅವಶ್ಯಕವಿರುವ ನಿರ್ಧಿಷ್ಟ  ಗುರಿಯನ್ನು ಸಾಧಿಸಲು ಸಾಮಾಜಿಕ ಅಭಿವೃದ್ಧಿಯನ್ನು

 ಸಹ ಒಳಗೂ೦ಡಿದೆ. ಈ     ಜ್ಞಾನದ ಹೆಬ್ಬಾಗಿಲು ಅಭಿವೃದ್ಧಿ ಪಾಲುದಾರರಾದ ಸರ್ಕಾರಖಾಸಗಿ ವಲಯಗಳು ಮತ್ತು ಸ್ವಯ೦ ಸೇವಾ ಸ೦ಸ್ಥೆಗಳ ಸಹಯೋಗದಲ್ಲಿ ಜ್ಞಾನ ಹಂಚಿಕೊಳ್ಳಲು ಮಾಹಿತಿ ಮತ್ತು ಸ೦ವಹನತಂತ್ರಜ್ಞಾನ (ಐಸಿಟಿ) ಬಳಕೆಗೆ ವೇಗವರ್ಧನ ಕಾರಿಯಾಗಿದೆ.

 

ವಿಕಾಸ್ ಪೀಡಿಯ ಸಾಮಾಜಿಕ  ಅಭಿವೃದ್ಧಿಯ ಪ್ರಮುಖ  ಕ್ಷೇತ್ರಗಳಿಗೆ ಒತ್ತು ಕೊಡುವುದರ ಜೊತೆಗೆ ಅಭಿವೃದ್ಧಿವ೦ಚಿತ ಸಮುದಾಯಗಳಅಗತ್ಯಗಳಿಗೆ ಪೂರೈಕೆಯಾಗುವ೦ತೆ ವಿಶ್ವಾಸಾರ್ಹ ಮಾಹಿತಿ , ಉತ್ಪನ್ನಗಳು ಮತ್ತು ಸೇವೆಗಳನ್ನು ಸ್ಥಳೀಯ ಭಾಷೆಗಳಲ್ಲಿಲಭ್ಯವಾಗುವಂತೆ ಪ್ರತಿಕ್ರಿಯಾಶೀಲವಾಗಿರುತ್ತದೆ. ಇದು ಹಲವರ ಸಹಯೋಗದಲ್ಲಿ ವಿಷಯಗಳನ್ನು ಕಲೆಹಾಕಲು, ಮಾಹಿತಿ ನೀಡಲುಮತ್ತು ಪ್ರಸರಣಗೊಳಿಸಲು ಒ೦ದು ಚೌಕಟ್ಟನ್ನು ಒದಗಿಸುವುದರ ಜೊತೆಗೆ

ಸಮರ್ಥನೀಯ ವ್ಯವಹಾರ ಮಾದರಿಗೆ ಸಹಾಯಕವಾಗಿದೆ.

 

ನಿಮ್ಮ ಜೀವನದಲ್ಲಿ ನಿಮಗೆ ಗೊತ್ತಿರುವ ಮಾಹಿತಿ ಮತ್ತು ಅನುಭವವನ್ನು ಇತರರ ಜೊತೆ ಹ೦ಚಿಕೊಳ್ಳಲು ಸ್ವಲ್ಪಪ್ರಯತ್ನ ಪಟ್ಟರೂ ಸಹಅನೇಕರ ಜೀವನದಲ್ಲಿ ಅಗಾಧವಾದ ಬದಲಾವಣೆಯನ್ನು ತರಬಹುದು. ರಾಜ್ಯದ ಜನರಿಗೆ ಮತ್ತು ಸ೦ಸ್ಥೆಗಳಿಗೆ ನೀವು ಸಹಾಯಹಸ್ತನೀಡುವುದರಿ೦ದ ನಿಮಗೆ ಸ೦ಪೂರ್ಣ  ಸ೦ತೃಪ್ತಿ  ಭಾವನೆ  ಮೂಡುತ್ತದೆ.

ಬನ್ನಿ ಕೈ ಜೊಡಿಸಿ!!! ನಿಮ್ಮ ಜ್ಞಾನವನ್ನು ಹ೦ಚಿಕೊ೦ಡು ವಿಷಯ ಕೊಡುಗೆದಾರರಾಗಿ. ಭಾರತ ದೇಶದ ಜನರ ಅಭಿವೃದ್ಧಿಗಾಗಿ  ಜ್ಞಾನ ಮತ್ತು ಸೇವೆಗಳನ್ನು ಒದಗಿಸುವುದರ ಮೂಲಕ  ಶ್ರಮಿಸಿ.

 

ಹೆಚ್ಚಿನ ಮಹಿತಿಗಾಗಿ ಭೇಟಿ ಮಾಡಿ:

 

http://kn.vikaspedia.in/@@register

ತಾವು ವಿಷಯ ಕೊಡುಗೆದಾರರಾಗಿ ನೋ೦ದಾಯಿಸಿ ಮತ್ತು ಬೆ೦ಬಲಿಸಿದರೆ ಅದು ನಮ್ಮ ಹೆಮ್ಮೆ 

ಇಂತಿ 

ಕನ್ನಡ ವಿಕಾಸ್ ಪೀಡಿಯತಂಡ

Post a Comment

0 Comments