ಭೂಮಿ


🌏ಭೂಮಿ

ಭೂಮಿಯು (ಸೂರ್ಯನಿಂದ 1 ಖ.ಮಾ. = ಸೂರ್ಯನಿಂದ 15ಕೋಟಿ ಕಿ.ಮೀ.(ಖಗೋಲಮಾನ) ದೂರದಲ್ಲಿದೆ.

ನಿಖರ ಸರಾಸರಿ ದೂರ 149,598,023 ಕಿಮೀ.(92,955,902 ಮೈಲಿ: ಸೌರ ದಿನಗಳ ಅವಧಿ ಭೂಮಿ ಯ ಉಪಸೌರ ಮತ್ತು ಅಪರವಿ ನಡುವಿನ ವ್ಯತ್ಯಾಸ 50 ಲಕ್ಷ ಕಿ.ಮೀ.

ಇದು ಭೂಮಿ ಸೂರ್ಯನನ್ನು ಸುತ್ತುವಾಗ ಹತ್ತಿರದ ಮತ್ತು ದೂರದ ಬಿಂದುಗಳ ವ್ಯತ್ಯಾಸ.

ಭೂಮಿಯ ದ್ರವ್ಯರಾಶಿಯು ಸುಮಾರು 5.98×10 24 ಕಿ.ಗ್ರಾಮ್.ಗಳಷ್ಟಿದೆ.
ಪರಿಭ್ರಮಣ ಕಕ್ಷೆ ಅಂಡಾಕಾರವಾಗಿದೆ).

ಸರಾಸರಿ ತ್ರಿಜ್ಯ 6,372.797 ಕಿ.ಮೀ. ಒಳ ನೈಸರ್ಗಿಕ ಗ್ರಹಗಳಲ್ಲಿ ಇದು ದೊಡ್ಡದು ಮತ್ತು ಹೆಚ್ಚಿನ ಸಾಂದ್ರತೆ (ದಟ್ಟಣೆ)ಯದು.

ಪ್ರಸ್ತುತ ತಿಳಿದಂತೆ ಭೂವೈಜ್ಞಾನಿಕ ಚಟುವಟಿಕೆಯುಳ್ಳ ಮತ್ತು ಜೀವ ಜಾಲ ಅಸ್ತಿತ್ವದಲ್ಲಿರುವ ಒಂದೇ ಗ್ರಹ.

ಭೂಮಿಯ ಜಲಗೋಳ ಗ್ರಹಗಳಲ್ಲಿ ವಿಶಿಷ್ಟವಾಗಿದೆ ಮತ್ತು ಇತರ ಗ್ರಹಗಳಲ್ಲಿ ಕಾಣದ ವಿಶಿಷ್ಟ ಗಮನಾರ್ಹವಾದ ಶಿಲಾಪದರ ರಚನೆಗಳನ್ನು ಹೊಂದಿರುವ ಏಕೈಕ ಗ್ರಹ.

ಭೂಮಿಯ ವಾತಾವರಣದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಬೇಕಾದ 21% ಆಮ್ಲಜನಕ ಹೊಂದಿರುವ ವಾತಾವರಣವಿದ್ದು ಇತರ ಗ್ರಹಗಳ ವಾತಾವರಣಕ್ಕೆ ಸಂಪೂರ್ಣವಾಗಿ ಭಿನ್ನವಾಗಿದೆ.

🌐ಚಂದ್ರ :

ಭೂಮಿಯು, 3,66,560 ಕಿ.ಮೀ.ಸರಾಸರಿ ದೂರದಲ್ಲಿರುವ ೧, 7.342×10 22 ಕೆ.ಜಿ.ತೂಕದ ನೈಸರ್ಗಿಕ ಉಪಗ್ರಹಗಳಲ್ಲಿಯೇ ದೊಡ್ಡ ನೈಸರ್ಗಿಕ
ಉಪಗ್ರಹ ವಾದ ಚಂದ್ರ ನನ್ನು ಹೊಂದಿದ ವ್ಯವಸ್ಥೆಯುಳ್ಳ ಸೌರ ಗ್ರಹ; ಭೂಮಿಯ ತೂಕದಲ್ಲಿ, ಸುಮಾರು 81 ರಲ್ಲಿ ಒಂದು ಪಾಲು ಇದೆ.

🌐ವಯಸ್ಸು

ಇದರ (ಭೂಮಿಯ) ವಯಸ್ಸು 454 ಕೋಟಿ ವರ್ಷ.

ಸರಾಸರಿ ತ್ರಿಜ್ಯ 6371 ಕಿಮೀ. ಭೂಮಧ್ಯರೇಖೆಯಲ್ಲಿ ಸುತ್ತಳತೆ 40,075. 017 ಕಿಮೀ. (24,901. 461 ಮೈಲಿ).

ಸೂರ್ಯನನ್ನು ಸುತ್ತಲು 365. 256363004 ದಿನ ಬೇಕು.

ಅದು ಸೂರ್ಯನನ್ನು ಸೆಕೆಂಡಿಗೆ 29.78 ಕಿಮೀ. / 18.50ಮೈಲಿ ವೇಗದಲ್ಲಿ ಸುತ್ತವುದು.

ಭೂಮಿಯು ಸೂರ್ಯನನ್ನು ಸುತ್ತುವ ವೇಗ ಗಂಟೆಗೆ 1,07,200ಕಿಮೀ./ 66,600 ಮೈಲಿ. ಭೂಮಿಯ ತೂಕ 5.97237X10 24 ಕೆಜಿ. ಭೂಮಿಯಿಂದ ಚಂದ್ರ 384,000ಕಿ.ಮೀ. ದೂರದಲ್ಲಿದೆ.

ಜೀವದ ಮೊದಲ ಪಳೆಯುಳಿಕೆ ಪುರಾವೆಗಳು,ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಬಂಡೆಗಳಲ್ಲಿ 4.1 ಶತಕೋಟಿ ವರ್ಷದ "ಜೈವಿಕ ಅವಶೇಷಗಳು" ಕಂಡು ಬಂದಿದೆ.

🌐 ಸೌರ ದಿನಗಳ ಅವಧಿ

ಭೂಮಿಯು ಸೂರ್ಯನನ್ನು 365.26 ಸೌರ ದಿನಗಳ ಅವಧಿಯಲ್ಲಿ ಒಂದು ಬಾರಿ ಸುತ್ತಿ ಬರುವಾಗ ತನ್ನದೇ ಸ್ವಂತ ಅಕ್ಷದ 366,26 ಪಟ್ಟು ತಿರುಗುತ್ತದೆ/ಸುತ್ತುತ್ತದೆ.

ಹೀಗೆ ಒಂದು ಸೌರ ವರ್ಷವನ್ನು ಸೃಷ್ಟಿಸುತ್ತದೆ ಅಥವಾ ಒಂದು ನಾಕ್ಷತ್ರಿಕ ವರ್ಷವನ್ನು ಸೃಷ್ಟಿಸುತ್ತದೆ.

ಹೀಗೆ ಸುತ್ತುತ್ತಾ ಭೂಮಿಯು ತನ್ನ ಅಕ್ಷದ ಅದರ ಕಕ್ಷೀಯ ಸಮತಳಗಳ ಲಂಬಕ್ಕೆ 23.4 ಡಿಗ್ರಿ ಬಾಗಿರುತ್ತದೆ.

ಭೂಗ್ರಹದ ಮೇಲೆ ಇದು ಋತುಗಳ ಪರಿವರ್ತನೆಗೆ ಕಾರಣವಾಗುತ್ತದೆ.

ಭೂಮಿ ತನ್ನ ಅಕ್ಷದ ಮೇಲೆ ತಿರುಗುವ ಸಮಭಾಜಕದ ವೇಗ 1,674.4 ಕಿಮೀ/ಗಂಟೆಗೆ ಅಥವಾ 1,040.4 ಮೈಲಿ ಗಂಟೆಗೆ.

Post a Comment

0 Comments