ಭಾರತಕ್ಕೆ ಯುರೋಪಿಯನ್ನರ ಆಗಮನ

🌗ಪೋರ್ಚುಗೀಸರು:-

✴️ಕ್ರಿ.ಶ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್ ಟಾಂಟಿನೋಪಲ್ ನ್ನು ವಶಪಡಿಸಿಕೊಂಡರು. ಆದ್ದರಿಂದ ಇವರು ವ್ಯಾಪಾರಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕಬೇಕಾಯಿತು.

✴️ಪೋರ್ಚುಗೀಸರ ನಾವಿಕ ವಾಸ್ಕೋಡಿಗಾಮ ಕ್ರಿ.ಶ 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಪತ್ತೆಹಚ್ಚಿದನು. ಅವನು ಭಾರತದಲ್ಲಿ ಮೊದಲು ಬಂದು ತಲುಪಿದ ಸ್ಥಳ ಕಲ್ಲಿಕೋಟೆಯಾಗಿದೆ.

✴️ಕೇರಳದ ಕಲ್ಲಿಕೋಟೆಯ ದೊರೆ "ಜಾಮೂರಿನ್"ವಾಸ್ಕೋಡಿಗಾಮನನ್ನು ಸ್ವಾಗತಿಸಿ, ವ್ಯಾಪರಕ್ಕೆ ಅನುಮತಿಯನ್ನು ಕೊಟ್ಟನು.

✴️ಪೋರ್ಚುಗೀಸರು ಕ್ರಿ.ಶ 1500 ರಲ್ಲಿ ತಮ್ಮ ಮೊದಲ ವ್ಯಾಪಾರಿ ಕೇಂದ್ರವನ್ನು ಕೊಚ್ಚಿನ್ ನಲ್ಲಿ ಸ್ಥಾಪಿಸಿದರು. ಮುಂದೆ ಇದೆ ಇವರ ರಾಜಧಾನಿಯಾಯಿತು. ನಂತರ ಇದನ್ನು ಗೋವಾಕ್ಕೆ ಸ್ಥಳಾಂತರಿಸಿದರು. ಗೋವಾ ಇವರ ಪ್ರಸಿದ್ಧ ರಾಜಧಾನಿಯಾಗಿತ್ತು.

✴️ಪೋರ್ಚುಗೀಸರ ಮೊದಲ ಗವರ್ನರ್ ಫ್ರಾನ್ಸಿಸ್ಕೋ-ಡಿ-ಅಲ್ಮೇಡಾ ಆಗಿದ್ದಾನೆ.

✴️ಪೋರ್ಚುಗೀಸರ ಪ್ರಸಿದ್ಧ ಗವರ್ನರ್ - ಅಲ್ಫಾನ್ಸೋ-ಡಿ-ಅಲ್ಬುಕರ್ಕ್ ಆಗಿದ್ದಾನೆ.

✴️ಇವರು ಕ್ರಿ.ಶ 1961 ಡಿಸೆಂಬರ್ 19 ರವರೆಗೆ ಇವರು ಭಾರತದ ಗೋವಾದಲ್ಲಿ ನೆಲೆಸಿದ್ದರು.

🌗ಡಚ್ಚರು:-

✴️ಕ್ರಿ.ಶ 1602 ರಲ್ಲಿ ಸ್ಥಾಪನೆಯಾದ ಡಚ್ಚ ಈಸ್ಟ್ ಇಂಡಿಯಾ ಕಂಪೆನಿಯು ಹಾಲೆಂಡ್ ಅಥವಾ ನೆದರ್ ಲ್ಯಾಂಡ್ ದೇಶಕ್ಕೆ ಸೇರಿದ ಕಂಪನಿಯಾಗಿದೆ.

✴️ಕ್ರಿ.ಶ 1605 ರಲ್ಲಿ ಇವರು ಮೊದಲು ಭಾರತದ ಮಚಲಿಪಟ್ಟಣದಲ್ಲಿ ತಮ್ಮ ವ್ಯಾಪಾರಿ ಮಳಿಗೆಯೊಂದನ್ನು ಸ್ಥಾಪಿಸಿದರು. ಈ ಮಚಲಿಪಟ್ಟಣವು ಇವರ ರಾಜಧಾನಿಯೂ ಕೂಡ ಆಗಿತ್ತು.

✴️ಕ್ರಿ.ಶ 1759 ರಲ್ಲಿ ಡಚ್ಚರು ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಡಚ್ಚರು ಸೋತರು. ಸೋತ ಡಚ್ಚರು ಎಲ್ಲವನ್ನು ಬ್ರಿಟಿಷರಿಗೆ ಒಪ್ಪಿಸಬೇಕಾಯಿತ

🌗ಬ್ರಿಟಿಷರು:-

✴️ಕ್ರಿ.ಶ 1600 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಅಧಿಕಾರಕ್ಕೆ ತಂದರು. ಇದು ಒಂದು ಖಾಸಗಿ ಕಂಪನಿಯಾಗಿತ್ತು. 

✴️ಇದು ಕ್ರಿ.ಶ 1608 ರಲ್ಲಿ ಭಾರತಕ್ಕೆ ಬಂದು ಸೂರತ್ ನ್ನು ತಲುಪಿತು. ಇದು "ಕ್ಯಾಪ್ಟನ್ ಹಾಕಿನ್ಸ್" ನ ನಾಯಕತ್ವದಲ್ಲಿ ಬಂದು ತಲುಪಿತು.

✴️ಭಾರತಕ್ಕೆ ಭೇಟಿ ಕೊಟ್ಟ ಮೊದಲ ಬ್ರಿಟಿಷ್ ರಾಯಭಾರಿ ಕ್ಯಾಪ್ಟನ್ ಹಾಕಿನ್ಸ್ ಆಗಿದ್ದಾನೆ.

✴️ನಂತರ "ಸರ್ ಥಾಮಸ್ ರೋ" ಜಹಾಂಗಿರನ ಆಸ್ಥಾನಕ್ಕೆ ವ್ಯಾಪಾರದ ಅನುಮತಿಗಾಗಿ ಭೇಟಿ ಕೊಟ್ಟು ಅವನಿಂದ ಅನುಮತಿಯನ್ನು ಪಡೆದುಕೊಂಡನು.

✴️ಬ್ರಿಟಿಷರ ಮೊದಲ ವ್ಯಾಪಾರಿ ಕೇಂದ್ರವು ಸೂರತ್ ನಲ್ಲಿ ಸ್ಥಾಪಿತವಾಯಿತು. ಮೊದಲ ರಾಜಧಾನಿ-ಮುರ್ಷಿದಾಬಾದ್, ನಂತರ ಕಲ್ಕತ್ತಾ ಮತ್ತು ಕೊನೆಯ ರಾಜಧಾನಿ ದೆಹಲಿಯಾಗಿತ್ತು.

🌗ಫ್ರೆಂಚರು:-

✴️ ಕ್ರಿ.ಶ 1664 ರಲ್ಲಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆಯಾಯಿತು.

✴️ಇದು ಒಂದು ಸರ್ಕಾರಿ ಸ್ವಾಮ್ಯದ ಕಂಪನಿಯಾಗಿತ್ತು.

✴️ಇವರು ಕ್ರಿ.ಶ 1667 ರಲ್ಲಿ ಭಾರತದ ಸೂರತ್ ನಲ್ಲಿ ತಮ್ಮ ಮೊದಲ ವ್ಯಾಪಾರಿ ಕೋಟೆಯನ್ನು ಆರಂಭಿಸಿದರು.

✴️ ಪ್ರೆಂಚರ ರಾಜಧಾನಿ ಪಾಂಡಿಚೇರಿಯಾಗಿತ್ತು. ಕ್ರಿ.ಶ 1742 ರಲ್ಲಿ ಭಾರತಕ್ಕೆ ಬಂದ ಡೂಪ್ಲೆ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದನು. ಇವನು ಮೊದಲ ಗವರ್ನರ್ ಆಗಿದ್ದನು.

 

🌏ಅಂಗ್ಲೋ ಫ್ರೆಂಚ್ ಯುದ್ಧಗಳು ಅಥವಾ ಕರ್ನಾಟಿಕ್ ಯುದ್ಧಗಳು

🌗ಮೊದಲನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1746-48):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷರ ಮಧ್ಯ ನಡೆಯಿತು. ಇದರಲ್ಲಿ ಬ್ರಿಟಿಷರು ಸೋತರು.’ಏ ಲಾ ಚಾಪೆಲ್’ ಒಪ್ಪಂದ ಕ್ರಿ.ಶ 1748 ರ ಮೂಲಕ ಯುದ್ಧ ಕೊನೆಗೊಂಡಿತು.

🌗ಎರಡನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1749-1755):- ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷ್ ಗವರ್ನರ್ ರಾಬರ್ಟ್ ಕ್ಲೈವರ ನಡುವೆ ಈ ಯುದ್ಧ ನಡೆಯಿತು. ಇದರಲ್ಲಿ ಡೂಪ್ಲೆ ಸೋಲನ್ನನುಭವಿಸಿದನು. ಕ್ರಿ.ಶ 1755 ರಲ್ಲಿ ಪಾಂಡಿಚೇರಿ ಒಪ್ಪಂದದ ಮೂಲಕ ಈ ಯುದ್ಧ ಕೊನೆಗೊಂಡಿತು.

🌗ಮೂರನೇ ಕರ್ನಾಟಿಕ್ ಯುದ್ಧ (ಕ್ರಿ.ಶ 1756-1763):- ಈ ಯುದ್ಧವು ಫ್ರೆಂಚ್ ಗವರ್ನರ್ ಕೌಂಟ್ ಡಿ ಲಾಲಿ ಮತ್ತು ಬ್ರಿಟಿಷರ ರಾಬರ್ಟ್ ಕ್ಲೈವರ ನಡುವೆ ನಡೆಯಿತು. ಈ ಯುದ್ಧದಲ್ಲಿ ಫ್ರೆಂಚರು ಸೋತರು. ಮತ್ತು ಈ ವೇಳೆಗೆ ಕ್ರಿ.ಶ 1763 ರಲ್ಲಿ ಯುರೋಪಿನಲ್ಲಿ ಸಪ್ತವಾರ್ಷಿಕ ಯುದ್ಧಗಳು ಕೊನೆಗೊಂಡು ಪ್ಯಾರಿಸ್ ಶಾಂತಿ ಒಪ್ಪಂದವು ಏರ್ಪಟ್ಟಿತು.

ಈ ಯುದ್ಧಗಳ ಪರಿಣಾಮದಿಂದಾಗಿ ಫ್ರೆಂಚರು ಸೋಲನ್ನನುಭವಿಸಿ ಅವರ ಪ್ರಾಬಲ್ಯವನ್ನು ಕಳೆದುಕೊಂಡರು. ಈ ರೀತಿಯಾಗಿ ಫ್ರೆಂಚರ ಅವನತಿಯಾಯಿತು.

🌗ಅಶೊಕನ ಪ್ರಮುಖ ಅಧಿಕಾರಿಗಳು

ರಾಜುಕರು, ಯುಕ್ತರು, ಮಹಾಮಾತ್ರರು, ಪ್ರಾದೇಶಿಕರು ಇವರು ಅಶೊಕನ ಪ್ರಮುಖ ಅಧಿಕಾರಿಗಳಾಗಿದ್ದರು. ಇಲ್ಲಿ,

✴️ರಾಜುಕರೆಂದರೇ - ಭೂಮಿಯ ಸಮೀಕ್ಷೆ, ಬೆಲೆ ಕಟ್ಟುವುದು, ಗ್ರಾಮಗಳಲ್ಲಿ ನ್ಯಾಯಾಧಿಕಾರಿಯಾಗಿರುತ್ತಿದ್ದರು.

✴️ಯುಕ್ತರೆಂದರೇ - ಜಿಲ್ಲೆಯ ಕಂದಾಯಧಿಕಾರಿ.

✴️ಮಹಾಮಾತ್ರರೆಂದರೇ - ಇವರನ್ನು ಧರ್ಮದ ರಚಾರಕ್ಕಾಗಿ ಅಶೋಕನು ನೇಮಿಸಿದ್ದನು.

✴️ಪ್ರಾದೇಶಿಕರೆಂದರೇ - ವರದಿಗಾರರಾಗಿದ್ದರು.

🌗ಬಿಜಾಪುರದ ಆದಿಲ್ ಶಾಹಿ ( ಕ್ರಿ.ಶ.1489-168

✴️ಮೂಲ ಪುರುಷ
ಯೂಸುಫ್ ಆದಿಲ್ ಶಾ(1489 - 1510)

✴️ರಾಜಧಾನಿ : ಬಿಜಾಪುರ.
ಧಮ೯ : ಇಸ್ಲಾಂ ಶಿಯಾ ಮತ್ತು ಸುನ್ನಿ.
ಆಡಳಿತ ಭಾಷೆ : ಪಶಿ೯ಯನ್ ಮತ್ತು ಮರಾಠಿ

✴️ನಾಣ್ಯಗಳು : ಚಿನ್ನ ,ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು
ಚಲಾವಣೆಯಲ್ಲಿದ್ದವು.

✴️ಕೊನೆಯ ಅರಸ : ಸಿಕಂದರ್ ( 1672 - 86 )

✴️ಶಾಸನ \ ದಾಖಲೆಗಳು : ಇಬ್ರಾಹಿಂ ನಾಮ ,ಅಲಿನಾಮ,
ಕಿತಾಬಿ ನೌವ್ ರಸ್ ,ಪುತುಹಸ್
ಸುಲತನ್ ಮುಂತಾದವು.

✴️ಪ್ರಮುಖ ಅರಸರು :
ಯೂಸುಫ್ ಆದಿಲ್ ಶಾ(1489-1510) ,
ಇಬ್ರಾಹಿಂ ಆದಿಲ್ ಶಾ ( 1535 - 56) ,
ಅಲಿ ಆದಿಲ್ ಶಾ ( 1556 - 80 ),
ಇಬ್ರಾಹಿಂ ಆದಿಲ್ ಶಾ ।। (1580 - 1626 ) ,
ಮಹಮದ್ ಆದಿಲ್ ಶಾ ( 1626 -56 ).

✴️ಮುಖ್ಯ ಕೇಂದ್ರಗಳು : ರಾಯಚೂರು , ಬಾಗಲಕೋಟೆ , ಗೋವಾ , ಹುಬ್ಬಳ್ಳಿ , ಸೋಲಾಪುರ , ಶಿರಾ , ದಾಬೋಲ್ , ಅಥಣಿ.

✴️ಆಡಳಿತ : ಸುಲ್ತಾನನಿಗೆ ಆಡಳಿತದಲ್ಲಿ ನೆರವಾಗಲು ದಬೀರ್ ,ನಾಜಿರ್ ಕೊತ್ವಾಲ್ , ಸದರ್ ಜಹಾನ್ , ಮಲ್ಲಿಕ್ ಆಜ್೯ಗಳಿದ್ದರು.

✴️ರಾಜ್ಯವನ್ನು ತರಫ್ ಮತ್ತು ಪರಗಣ ಎಂದು ವಿಭಾಗಿಸಲಾಗಿತ್ತು. ಭೂಕಂದಾಯವು ಉತ್ಪಾದನೆಯ 1\8 ನೇ ಭಾಗಷ್ಟಿತ್ತು. ಅಲ್ಲದೆ ವೃತ್ತಿ ತೆರಿಗೆ , ಮನೆ ತೆರಿಗೆ , ಸಂತೆಗಳ ಮೇಲೆ ತೆರಿಗೆ ಮುಂತಾದ ವಿವಿಧ ಬಗೆಯ ಸುಂಕಗಳನ್ನು ಹೇರುತ್ತಿದ್ದರು.

✴️ವಕೀಲ್ ಪ್ರಧಾನ ಮಂತ್ರಿ ಅಮೀರ್ ಇ ಜುಮ್ಲಾ ಹಣಕಾಸು ಮಂತ್ರಿ ಅಲ್ಲದೆ ದಬೀರ್ , ನಾಜಿರ್ , ಕೊತ್ವಾಲ್ ಮುಂತಾದವರಿದ್ದರು. ಆಡಳಿತದಲ್ಲಿ ಅಧಿಕಾರಿಗಳಿಗೆ ಸಂಬಳ ನೀಡದೆ ಜಾಗೀರು ಇಕ್ತಾ ಗಳನ್ನು ನೀಡಲಾಗುತ್ತಿತ್ತು. ರಾಜ್ಯವನ್ನು ತರಫ್ ಪ್ರಾಂತ್ಯ ಗಳಾಗಿ ವಿಂಗಡಿಸಲಾಗಿತ್ತು. ಇದು ತರಫ್ ದಾರನ ನೇತೃತ್ವದಲ್ಲಿತ್ತು.

ಕೆ.ಎ.ಎಸ್ ಕನ್ನಡ:
🌗ದ್ವಾರಸಮುದ್ರದ ಹೊಯ್ಸಳರು  (ಕ್ರಿ.ಶ 985 - 1346) :

✴️ಈ ಸಂತತಿಯ ಮೂಲ ಪುರುಷ  : ಸಳ.

✴️ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.

✴️ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)

✴️ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.

🌗ಕಲ್ಯಾಣಿಯ ಕಲಚೂರಿಗಳು  (ಕ್ರಿ.ಶ 1156 - 1183)

✴️ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ  ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.

✴️ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.

🌗ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)

✴️ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ

✴️ಇವರ ರಾಜಧಾನಿ : ಕಲ್ಯಾಣ

✴️ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)

✴️1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.

🌗ಮಾನ್ಯಖೇಟದ ರಾಷ್ಟ್ರಕೂಟರು  (ಕ್ರಿ.ಶ 345 - 540) :

✴️ಈ ಸಂತತಿಯ ಸ್ಥಾಪಕ : ದಂತಿದುರ್ಗ

✴️ಇವರ ರಾಜಧಾನಿ :  ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.

✴️ಇವರ ಲಾಂಛನ : ಗರುಡ

✴️ಈ ಸಂತತಿಯ ಅತ್ಯಂತ ಹೆಸರಾಂತ   ದೊರೆ :ಅಮೋಘವರ್ಷ ನೃಪತುಂಗ (814-878)

✴️ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

🌗ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) :

✴️ಈ ಸಂತತಿಯ ಸ್ಥಾಪಕ  :  ಜಯಸಿಂಹ

✴️ಇವರ ರಾಜಧಾನಿ  : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)

✴️ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ :  ಇಮ್ಮಡಿ ಪುಲಕೇಶಿ (609-642)
✴️ಇವರ ರಾಜ ಲಾಂಛನ  : ವರಹ.

✴️ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ :  ಚೀನಾದ ಬೌದ್ಧ ಯಾತ್ರಿಕ  ಹ್ಯೂಯನ್ ತ್ಸಾಂಗ್.

🌗ತಲಕಾಡಿನ ಗಂಗರು  (ಕ್ರಿ.ಶ 350- 999)

✴️ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.

✴️ಈ ಸಂತತಿಯ ಮೊದಲ ದೊರೆ : ದಡಿಗ (350 -400)

✴️ಇವರ ಮೊದಲ ರಾಜಧಾನಿ :  ಕೋಲಾರ ಬಳಿಯ ಕುವಲಾಲ

✴️ಇವರ ಎರಡನೆಯ ರಾಜಧಾನಿ : ತಲಕಾಡು

✴️ತಲಕಾಡಿನ ಮತ್ತೊಂದು ಹೆಸರು  :  ತಲವನಪುರ.

✴️ಇವರ ಮೂರನೇ ರಾಜಧಾನಿ :  ಚೆನ್ನಪಟ್ಟಣ ಬಳಿಯ ಮಾಕುಂದ

✴️ಇವರ ಲಾಂಛನ : ಆನೆ(ಮದಗಜ)

✴️ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ : ದುರ್ವಿನೀತ (540-600)

✴️ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.

✴️ ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.

By ಸಾಗರ್ ಹೈರಿಗೆ

Post a Comment

0 Comments