ರಾಜ್ಯ ಬಜೆಟ್ 2018’ ಮಂಡನೆ, ಬಜೆಟ್ ನ ಮುಖ್ಯಾಂಶ ಹೀಗಿದೆ.

‘ರಾಜ್ಯ ಬಜೆಟ್ 2018’ ಬಜೆಟ್ ನ ಮುಖ್ಯಾಂಶ ಹೀಗಿದೆ.

►ರೇಷ್ಮೆ ಇಲಾಖೆಗೆ 429 ಕೋಟಿ ಅನುದಾನ, ಶೇಂಗಾ ಬೆಳೆಗಾರರಿಗೆ 50 ಕೋಟಿ ವಿಶೇಷ ಅನುದಾನ

►ರೈತರ ಒಂದು ಲಕ್ಷದವರೆಗಿನ ಸಾಲಮನ್ನಾ, ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ ಅನುದಾನ

►ರೈತರಿಗೆ ಶೇಕಡಾ 3ರ ಬಡ್ಡಿದರದಲ್ಲಿ 10 ಲಕ್ಷ ರೂ ಸಾಲ ಬಿಡುಗಡೆ

►ಸಣ್ಣ ನೀರಾವರಿಗೆ 2,090 ಕೋಟಿ ರೂಪಾಯಿ

►ಮೀನುಗಾರಿಕೆಗೆ 337 ಕೋಟಿ ರೂಪಾಯಿ

►ಕ್ರೈಸ್ತರ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ, 30 ಲಕ್ಷ ಫಲಾನುಭವಿಗಳಿಗೆ ಅನಿಲಾಭಾಗ್ಯ, ತೋಟಗಾರಿಕೆಗೆ 1091 ಕೋಟಿ ಅನುದಾನ,ರೇಷ್ಮೆ ಇಲಾಖೆಗೆ 429 ಕೋಟಿ, ರೈತರಿಗೆ ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂಪಾಯಿ ಸಾಲ. ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ. ಅನುದಾನ,ಮೀನುಗಾರಿಕೆಗೆ 337 ಕೋಟಿ ಅನುದಾನ.

►ಸಾಲಮನ್ನಾ, ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಿದ್ದರೂ ರಾಜ್ಯದ ಹಣಕಾಸು ಪರಿಸ್ಥಿತಿ ಉತ್ತಮವಾಗಿದೆ.

►ಜಲ ಸಂಪನ್ಮೂಲ ಇಲಾಖೆಗೆ 15,929 ಕೋಟಿ ರೂ ಮೀನುಗಾರಿಕೆಗೆ 337 ಕೋಟಿ ರೂಪಾಯಿ

ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ

►ಈ ಬಾರಿ ಕೃಷಿ ವಲಯದಲ್ಲಿ ಶೇ. 4.9 ರಷ್ಟು ಬೆಳವಣಿಗೆ ದರ ಸಾಧಿಸುವ ಗುರಿ ಹೊಂದಲಾಗಿದೆ.

►ಪಶುಸಂಗೋಪನೆಗೆ 2245 ಕೋಟಿ ರೂಪಾಯಿ ಅನುದಾನ

►ಕೃಷಿಗೆ 5080 ಕೋಟಿ ರೂಪಾಯಿ ಅನುದಾನ

►ಹೊಸ ಸ್ಟಾರ್ಟ್ ಅಪ್ ನೀತಿ ಜಾರಿ ಮಾಡಿ ಬೆಂಗಳೂರನ್ನು ಸ್ಟಾರ್ಟ್ ಅಪ್ ರಾಜಧಾನಿಯನ್ನಾಗಿ ರೂಪಿಸಲಾಗಿದೆ.

►ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ. ಮೈಸೂರು ವಿವಿಯಲ್ಲಿ ಬಸವ ಅಧ್ಯಯನ ಕೇಂದ್ರ ಸ್ಥಾಪನೆ. ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ 2 ಕೋಟಿ ಅನುದಾನ, ನೀರಾವರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ವೇತನ ಆಯೋಗವು ಶೇ. 30 ರಷ್ಟು ವೇತನ ಹೆಚ್ಚಿಸಲು ಶಿಫಾಸರು ಮಾಡಿದ್ದು, ಇದರಿಂದ 5.96 ಲಕ್ಷ ನೌಕರರು ಹಾಗೂ 5.73 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಿದೆ.

►ರಾಜ್ಯ ಸರ್ಕಾರವು 8165 ಕೋಟಿ ರೂ. ಸಾಲ ಮನ್ನಾ ಮಾಡಿತ್ತು. ಇದರಿಂದ ರಾಜ್ಯದ 22.27,506 ರೈತರಿಗೆ ಅನುಕೂಲವಾಗಿದೆ. ಈ ಸಾಲಿನಲ್ಲಿ ಕೃಷಿ ವಲಯ ಶೇ. 4.9 ರಷ್ಟು, ಕೈಗಾರಿಕಾ ವಲಯ ಶೇ. 4.9 ರಷ್ಟು ಹಾಗೂ ಸೇವಾ ವಲಯ ಶೇ. 10.4 ರಷ್ಟು ಬೆಳವಣಿಗೆ ಹೊಂದುವ ನಿರೀಕ್ಷೆಯಿದೆ. ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು (ಜಿ.ಎಸ್​.ಡಿ.ಪಿ) 2016-17ರಲ್ಲಿ ಶೇ. 7.5 ಇತ್ತು. 2017-18ರಲ್ಲಿ ಶೇ. 8.5 ರಷ್ಟು ಬೆಳವಣಿಗೆಯಾಗಿದೆ.

►ಕಬ್ಬು ಕಟಾವು ಯಂತ್ರಗಳಿಗೆ ಸಹಾಯಧನ. ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ಅನುದಾನ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ. ಸಿರಿಧಾನ್ಯ ಬೆಳೆಗಾರರಿಗೆ 24 ಕೋಟಿ ಪ್ಯಾಕೇಜ್.

►ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದ ರೈತರ 1 ಲಕ್ಷದವರೆಗಿನ ಸಾಲ ಮನ್ನಾ, ವಿಜಯಪುರ ಜಿಲ್ಲೆ ಮುದ್ದೆಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ, ಜಿಕೆವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಕೇಂದ್ರ ಸ್ಥಾಪನೆ,ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ

►ಮಣ್ಣಿನ ಸಾವಯವ ಪೋಷಕಾಂಶ ಹೆಚ್ಚಳಕ್ಕಾಗಿ 13,359 ಟನ್‌ ಕಂಪೋಸ್ಟ್‌ ಗೊಬ್ಬರವನ್ನು ಕೇವಲ 800 ರೂ.ಗಳಂತೆ ರೈತರಿಗೆ ಒದಗಿಸಲಾಗಿದೆ. ಜಿಕೆವಿಕೆಯಲ್ಲಿ ನಂಜುಡ ಸ್ವಾಮಿ ಸಂಶೋಧನಾ ಕೇಂದ್ರ ಸ್ಥಾಪನೆ. ಸಿರಿಧಾನ್ಯ ಬೆಳೆಗಾರರಿಗೆ 24 ಕೋಟಿ ಪ್ಯಾಕೇಜ್. ಕೃಷಿ ಭಾಗ್ಯ ಯೋಜನೆಗೆ 600 ಕೋಟಿ ಅನುದಾನ, ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ. ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.

►ರೈತರ ಒಂದು ಲಕ್ಷದವರೆಗಿನ ಸಾಲಮನ್ನಾ, ಸಹಕಾರ ಕ್ಷೇತ್ರಕ್ಕೆ 1,663 ಕೋಟಿ ರೂ ಅನುದಾನ

►ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕುಗಳಲ್ಲಿ ನಿಧನ ಹೊಂದಿದ ರೈತರ 1 ಲಕ್ಷದವರೆಗಿನ ಸಾಲ ಮನ್ನಾ, ವಿಜಯಪುರ ಜಿಲ್ಲೆ ಮುದ್ದೆಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ, ಜಿಕೆವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಕೇಂದ್ರ ಸ್ಥಾಪನೆ,ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ.

►ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್

► ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ಥಾಪನೆ

►35 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಆಧಾರ್ ಸಂಗ್ರಹಣೆಗೆ 5 ಹೊಸ ಆಪ್ ಗಳು. ಕೆಂಪೇಗೌಡ ವಿಮಾನ ನಿಲ್ದಾಣದಿಂದ 7 ಸ್ಥಳಗಳಿಗೆ ಫ್ಲೈಬಸ್ ಸೇವೆ.

►ಕಂದಾಯ ಇಲಾಖೆಗೆ ರೂ. 6642 ಕೋಟಿ ಅನುದಾನ. ಮದ್ಯದ ಮೇಲಿನ ಅಬಕಾರಿ ಸುಂಕ ಶೇ.8ರಷ್ಟು ಹೆಚ್ಚಳ, 35 ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಆಧಾರ್ ಸಂಗ್ರಹಣೆಗೆ 5 ಹೊಸ ಆ್ಯಪ್ ಗಳು.

►ಮಹಿಳಾ ಸುರಕ್ಷತೆಗಾಗಿ 1000 ಬಸ್ ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ.

►ರೂ.5 ಕೋಟಿ ವೆಚ್ಚದಲ್ಲಿ ಪತ್ರಕರ್ತರ ಭವನ ನಿರ್ಮಾಣ, ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತರ ಕುಟುಂಬಕ್ಕೆ ಪರಿಹಾರ.

►ಡ್ರೆಸ್ಸಿಂಗ್ ಕೊಠಡಿಗಳ ನಿರ್ಮಾಣಕ್ಕೆ ಕ್ರಮ. ಎಲ್ಲ ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯ ನಿರ್ಮಾಣ. 2018-19ನೇ ಸಾಲಿನಲ್ಲಿ 2,500 ಗ್ರಾಮ ಪೋಡಿ ಮುಕ್ತ.

►100 ಪೂರೈಸಿದ ಸರ್ಕಾರಿ ಶಾಲೆಗಳ ನವೀಕರಣಕ್ಕೆ ಆದ್ಯತೆ. 100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ. ಪ್ರತಿ ಶಾಳೆಗೆ 5ಲಕ್ಷದಂತೆ 5 ಕೋಟಿ ರೂ. ವೆಚ್ಚ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಂತಹಂತವಾಗಿ ಸಿಸಿಟಿವಿ ಅಳವಡಿಕೆ.

►ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೆಂಗಳೂರು-ಮೈಸೂರು ರಸ್ತೆಯಲ್ಲಿ ರೇಷ್ಮೆ ಟೂರಿಸಂಗೆ ಆದ್ಯತೆ. ಚನ್ನಪಟ್ಟಣದಲ್ಲಿ ಅಂತರಾಷ್ಟ್ರೀಯ ಮಟ್ಟದ ಲೈವ್ ಮ್ಯೂಸಿಯಂ ನಿರ್ಮಾಣ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

0 Comments