ಏಕದಿನದಲ್ಲಿ ಅತಿ ವೇಗದ 100 ವಿಕೆಟ್ ದಾಖಲೆ ನಿರ್ಮಿಸಿದ ರಾಶೀದ್

ಏಕದಿನದಲ್ಲಿ ಅತಿ ವೇಗದ 100 ವಿಕೆಟ್ ದಾಖಲೆ ನಿರ್ಮಿಸಿದ ರಾಶೀದ್
25 March 2018, 5:15 pm

ನವದೆಹಲಿ: ಅಪಘಾನಿಸ್ತಾನದ ಲೆಗ್ ಸ್ಪಿನ್ನರ್ ರಾಶೀದ್ ಖಾನ್, ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದಲ್ಲಿ 100 ವಿಕೆಟುಗಳನ್ನು ಪಡೆದುಕೊಳ್ಳುವುದರ ಮೂಲಕ ಹೊಸ ದಾಖಲೆಯನ್ನು ಬರೆದಿದ್ದಾರೆ. ರಾಶೀದ್ ಅವರು ತಮ್ಮ 44ನೇ ಪಂದ್ಯದಲ್ಲಿ 100 ವಿಕೆಟುಗಳ ಸಾಧನೆ ಮಾಡಿದ್ದಾರೆ. ಸದ್ಯ ಅವರು ಜಿಂಬಾಬ್ವೆಯ ಹರಾರೆಯಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಸಾಗುತ್ತಿರುವ 2019 ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಫೈನಲ್ ಪಂದ್ಯದಲ್ಲಿ ರಾಶೀದ್ ಈ ಸಾಧನೆಯನ್ನು ಮಾಡಿದ್ದಾರೆ.

ವಿಶ್ವ ನಂ.2 ರ‍್ಯಾಂಕ್‌ನ ಬೌಲರ್ ಆಗಿರುವ ರಾಶೀದ್, ವಿಂಡೀಸ್‌ನ ಶಾಯಿ ಹೋಪ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವ ಮೂಲಕ 100ನೇ ವಿಕೆಟ್ ಕಬಳಿಸಿದ್ದಾರೆ.

ಈ ಮುನ್ನ 26ನೇ ಪಂದ್ಯದಲ್ಲಿ 50 ವಿಕೆಟುಗಳನ್ನು ಕಬಳಿಸಿದ್ದರು. ಇದೀಗಷ್ಟೇ ಐರ್ಲೆಂಡ್ ಮಣಿಸಿರುವ ಅಪಘಾನಿಸ್ತಾನ 2019 ಏಕದಿನ ವಿಶ್ವಕಪ್‌ಗೆ ಅರ್ಹತೆಯನ್ನು ಪಡೆದಿದ್ದು, ಕೆಲವು ತಿಂಗಳುಗಳ ಹಿಂದೆಯಷ್ಟೇ ಟೆಸ್ಟ್ ಮಾನ್ಯತೆಯನ್ನು ಕೂಡ ಅಪಘಾನಿಸ್ತಾನ ಐಸಿಸಿ ನೀಡಿದೆ.

Dailyhunt


Post a Comment

0 Comments