ಟಿ–20 ಕ್ರಿಕೆಟ್‍: ‘ಹಿಟ್‌ ವಿಕೆಟ್‌’ ಮೂಲಕ ಔಟಾದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಕೆ.ಎಲ್ ರಾಹುಲ್

ಟಿ–20 ಕ್ರಿಕೆಟ್‍: ‘ಹಿಟ್‌ ವಿಕೆಟ್‌’ ಮೂಲಕ ಔಟಾದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಕೆ.ಎಲ್ ರಾಹುಲ್

13 Mar, 2018ಪ್ರಜಾವಾಣಿ ವಾರ್ತೆ
ಕೊಲಂಬೊ: ಕನ್ನಡಿಗ ಕೆ.ಎಲ್. ರಾಹುಲ್ ಅಂತರರಾಷ್ಟ್ರೀಯ ಟ್ವಿಂಟಿ–20 ಕ್ರಿಕೆಟ್‌ನಲ್ಲಿ ‘ಹಿಟ್‌ ವಿಕೆಟ್‌’ ಮೂಲಕ ಔಟಾದ ಭಾರತ ತಂಡದ ಮೊದಲ ಆಟಗಾರ ಎನಿಸಿದ್ದಾರೆ.

ನಿದಾಸ್‌ ಟ್ವಿಂಟಿ–20 ತ್ರಿಕೋನ ಕ್ರಿಕೆಟ್‌ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಜೀವನ್‌ ಮೆಂಡಿಸ್‌ ಬೌಲಿಂಗ್‌ನಲ್ಲಿ ರಾಹುಲ್‌ ಹಿಟ್‌ ವಿಕೆಟ್‌ ಆದರು. ಈ ಹಿಂದೆ ಚುಟುಕು ಕ್ರಿಕೆಟ್‌ ಮಾದರಿಯಲ್ಲಿ ವಿವಿಧ ದೇಶಗಳ ಒಟ್ಟು ಒಂಬತ್ತು ಬ್ಯಾಟ್ಸ್‌ಮನ್‌ಗಳು ಈ ರೀತಿಯಲ್ಲಿ ಔಟ್‌ ಆಗಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ 19 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಭಾರತ 17.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಸೇರಿತ್ತು.

Post a Comment

0 Comments