ಹಲಸು ಕೇರಳ ರಾಜ್ಯ ಫಲ, ಮಾರ್ಚ್ 21ಕ್ಕೆ ಘೋಷಣೆ

ಹಲಸು ಕೇರಳ ರಾಜ್ಯ ಫಲ, ಮಾರ್ಚ್ 21ಕ್ಕೆ ಘೋಷಣೆ
Published: 17 Mar 2018 07:35 PM IST | Updated: 17 Mar 2018 08:56 PM IST

ಹಲಸಿನ ಹಣ್ಣು
ತಿರುವನಂತಪುರ: ರಾಜ್ಯ ಪ್ರಾಣಿ, ಪಕ್ಷಿ, ಹೂವು, ಮೀನಿನ ಬಳಿಕ ಕೇರಳ ಇದೀಗ” ’ರಾಜ್ಯ ಫಲ’ ಘೋಷಣೆಗೆ ಮುಂದಾಗಿದೆ.  ವಿಶಿಷ್ಟವಾದ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾದ ಹಲಸಿನ ಹಣ್ಣನ್ನು ಕೇರಳ ರಾಜ್ಯ ಫಲ ಎಂದು ಘೋಷಿಸಲು ಸಿದ್ದತೆ ನಡೆದಿದೆ.
ರಾಜ್ಯ ಕೃಷಿ ಇಲಾಖೆಯ ಪ್ರಸ್ತಾಪದ ಆಧಾರದ ಮೇಲೆ ಈ ಸಂಬಂಧ ಮಾರ್ಚ್ 21 ರಂದು ಕೇರಳ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ. ದೇಶ ವಿದೇಶಗಳಲ್ಲಿ ಕೇರಳ ಹಲಸನ್ನು ಬ್ರಾಂಡ್ ಸ್ವರೂಪ ನೀಡಿ ಉತ್ತೇಜಿಸಿಅಲು ಸರ್ಕಾರವು ಯೋಜಿಸಿದೆ, ಈ ಮೂಲಕ ಹಲಸಿನ ಜೈವಿಕ ಮತ್ತು ಪೌಷ್ಟಿಕ ಗುಣಗಳನ್ನು ಎತ್ತಿ ತೋರುವುದು, ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟಕ್ಕೆ  ಅನುಕೂಲ ಕಲ್ಪಿಸಿಕೊಡುವುದು ಸರ್ಕಾರದ ಪ್ರಮುಖ ಉದ್ದೇಶ ಎಂದು ಕೇರಳ ಕೃಷಿ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಹಲಸಿನ ಹಣ್ಣನ್ನು ಬ್ರಾಂಡಿಂಗ್ ಮಾಡುವ ಮೂಲಕ ಹಣ್ಣು ಹಾಗೂ ಅದರ ಉತ್ಪನ್ನವನ್ನು ಹೆಚ್ಚಿಸುವುದು. ಇದರ ಮೂಲಕ ರಾಜ್ಯಕ್ಕೆ 15 ಸಾವಿರ ಕೋಟಿ ರೂ. ಆದಾಯ ಸಿಗಲಿದೆ ಎನ್ನುವ ನಿರೀಕ್ಷೆ ಇದೆ. . "ಮಾರ್ಚ್ 21 ರಂದು ಹಲಸಿನ ಹಣ್ಣನ್ನು ರಾಜ್ಯಫಲವಾಗಿ ಘೋಷಿಸಲು ನಾವು ಯೋಜಿಸುತ್ತಿದ್ದೇವೆ.  ಆ ದಿನ ನಾವು ರಾಜ್ಯ ವಿಧಾನಸಭೆಯಲ್ಲಿ ಇದನ್ನು ಪ್ರಕಟಿಸಲಿದ್ದೇವೆ ಸುನೀಲ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ

Post a Comment

0 Comments