ಜೂ. ವಿಶ್ವಕಪ್‌ ಶೂಟಿಂಗ್‌: ಅನೀಶ್‌ ಭಾನ್ವಾಲಗೆ ಚಿನ್ನ

ಜೂ. ವಿಶ್ವಕಪ್‌ ಶೂಟಿಂಗ್‌: ಅನೀಶ್‌ ಭಾನ್ವಾಲಗೆ ಚಿನ್ನ
27 March 2018, 7:30 am
ಹೊಸದಿಲ್ಲಿ: ಉದಯೋನ್ಮುಖ ಆಟಗಾರ 15ರ ಹರೆಯದ ಅನೀಶ್‌ ಭಾನ್ವಾಲ ಅವರು ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯ ಪುರುಷರ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಚಿನ್ನದ ಪದಕವಾಗಿದೆ.

ಅನೀಶ್‌ ಆ ಬಳಿಕ ಅನ್‌ಹಾದ್‌ ಜವಾಂಡ ಮತ್ತು ಆದರ್ಶ್‌ ಸಿಂಗ್‌ ಜತೆಗೂಡಿ ತಂಡ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರು. ಈ ವಿಭಾಗದ ಚಿನ್ನವನ್ನು ಚೀನ ಗೆದ್ದರೆ ಭಾರತದ ಇನ್ನೊಂದು ತಂಡ ಕಂಚು ಜಯಿಸಿತು.


Post a Comment

0 Comments