ವಿಯೆಟ್ನಾಂನ ತೃತೀಯಲಿಂಗಿಗೆ ‘ಮಿಸ್ ಇಂಟರ್‌ನ್ಯಾಷನಲ್ ಕ್ವೀನ್’ ಪ್ರಶಸ್ತಿ

ವಿಯೆಟ್ನಾಂನ ತೃತೀಯಲಿಂಗಿಗೆ ‘ಮಿಸ್ ಇಂಟರ್‌ನ್ಯಾಷನಲ್ ಕ್ವೀನ್’ ಪ್ರಶಸ್ತಿ

11 Mar, 2018ಏಜೆನ್ಸಿಸ್‌
ಪಟ್ಟಾಯ (ಥಾಯ್ಲೆಂಡ್): ತೃತೀಯಲಿಂಗಿಗಳು ಸ್ಪರ್ಧಿಸುವ ಜಗತ್ತಿನ ಹೆಸರಾಂತ ಸೌಂದರ್ಯ ಸ್ಪರ್ಧೆಯಲ್ಲಿ ವಿಯೆಟ್ನಾಂನ ನ್ಯುಯೇನ್ ಹೂಂಗ್ ಜಿಯಾಂಗ್ ‘ಮಿಸ್ ಇಂಟರ್‌ನ್ಯಾಷನಲ್ ಕ್ವೀನ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

2004ರಿಂದ ಆಯೋಜನೆಗೊಳ್ಳುತ್ತಿರುವ ಈ ಪ್ರದರ್ಶನದಲ್ಲಿ ಈ ಬಾರಿ ನ್ಯೂಯೇನ್ ಅವರು ವಿವಿಧ ದೇಶಗಳ 26 ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಭಾರತದಿಂದ ನಿತಾಶಾ ಬಿಸ್ವಾಸ್ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

Post a Comment

0 Comments