ಸೌದಿ ಮೂಲಕ ಇಸ್ರೇಲ್‌ಗೆ ಏರಿಂಡಿಯಾದ ಐತಿಹಾಸಿಕ ಹಾರಾಟ

ಸೌದಿ ಮೂಲಕ ಇಸ್ರೇಲ್‌ಗೆ ಏರಿಂಡಿಯಾದ ಐತಿಹಾಸಿಕ ಹಾರಾಟ
23 March 2018, 11:57 am
ಬೆನ್‌ ಗುರಿಯನ್‌ ವಿಮಾನ ನಿಲ್ದಾಣ, ಇಸ್ರೇಲ್‌ : ಹೊಸದಿಲ್ಲಿ ಮತ್ತು ಟೆಲ್‌ ಅವೀವ್‌ ನಡುವಿನ ಏರಿಂಡಿಯಾ ಹಾರಾಟ ಮಾರ್ಗ ನಿನ್ನೆ ಗುರುವಾರ ಉದ್ಘಾಟನೆಗೊಳ್ಳುವ ಮೂಲಕ ಸೌದಿ ಅರೇಬಿಯ ಇದೇ ಮೊದಲ ಬಾರಿಗೆ ತನ್ನ ವಾಯು ಪ್ರದೇಶವನ್ನು ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಮುಕ್ತಗೊಳಿಸಿದಂತಾಗಿದೆ.

ದಿಲ್ಲಿಯಿಂದ ಹೊರಟ ಏರಿಂಡಿಯಾ ವಿಮಾನ ಏಳೂವರೆ ತಾಸುಗಳ ಕಾಲದ ತನ್ನ ಸುದೀರ್ಘ‌ ಹಾರಾಟವನ್ನು ಮುಗಿಸಿ ಟೆಲ್‌ಅವೀವ್‌ನ ಬೆನ್‌ ಗುರಿಯನ್‌ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಇರಾನ್‌ ಪ್ರಭಾವದಲ್ಲಿನ ರಿಯಾದ್‌ ರಾಜತಾಂತ್ರಿಕ ಸ್ಥಿತ್ಯಂತರದ ದ್ಯೋತಕವಾಗಿ ಏರಿಂಡಿಯಾ ವಿಮಾನ ಹಾರಾಟ ಸಾಧ್ಯವಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಎರಡು ವರ್ಷಗಳ ಅತ್ಯಂತ ಕಠಿನ ಪರಿಶ್ರಮದ ಬಳಿಕ ಘಟಿಸಿರುವ ಐತಿಹಾಸಿಕ ದಿನ ಇದಾಗಿದೆ ಎಂದು ಇಸ್ರೇಲ್‌ ಪ್ರವಾಸೋದ್ಯಮ ಸಚಿವ ಯಾರಿವ್‌ ಲೆವಿನ್‌ ಅವರು ರೇಡಿಯೋ ಸಂದರ್ಶನದಲ್ಲಿ ಹೇಳಿದರು.


Post a Comment

0 Comments