ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್, ಥರ್ಮೋಕೋಲ್ ಸಂಪೂರ್ಣ ನಿಷೇಧ

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್, ಥರ್ಮೋಕೋಲ್ ಸಂಪೂರ್ಣ ನಿಷೇಧ
Published: 25 Mar 2018 04:05 PM IST

ಸಾಂದರ್ಭಿಕ ಚಿತ್ರ
ಮುಂಬೈ : ಮಹಾರಾಷ್ಟ್ರ ಸರ್ಕಾರ ರಾಜ್ಯಾದ್ಯಂತ ಪ್ಲಾಸ್ಟಿಕ್ ಮತ್ತು ಥರ್ಮೋಕೋಲ್ ಕಟ್ಲರಿ ಬಳಕೆ, ಮಾರಾಟ ಮತ್ತು ಉತ್ಸಾದನೆಯನ್ನು ಸಂಪುರ್ಣ ನಿಷೇಧಿಸಿದೆ. ಈ ಮೂಲಕ ಪ್ಲಾಸ್ಟಿಕ್ ನಿಷೇಧಿಸಿದ ದೇಶದ 18ನೇ ರಾಜ್ಯವಾಗಿದೆ.
ಕಾಯಿಲೆಗಳಿಗೆ ಪ್ಲಾಸ್ಟಿಕ್ ಬಳಕೆ ಪ್ರಮುಖ ಕಾರಣವಾಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗುತ್ತಿದೆ ಎಂದು ಮಹಾರಾಷ್ಟ್ರ ಪರಿಸರ ಸಚಿವ ರಾಮದಾಸ್‌ ಕದಮ್‌ ಅವರು ಹೇಳಿದ್ದಾರೆ.
ಪ್ಲಾಸ್ಟಿಕ್‌ ಉತ್ಪಾದನೆ, ಬಳಕೆ, ಶೇಖರಣೆ, ಮಾರಾಟ, ವಿತರಣೆ, ಆಮದು ಮತ್ತು ಸಾಗಣೆಯನ್ನು ಈ ನಿಷೇಧವು ಒಳಗೊಂಡಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ ಪ್ಲಾಸ್ಟಿಕ್‌ ನಿಷೇಧ ಉಲ್ಲಂಘನೆ ಮಾಡುವವರಿಗೆ 25,000 ರು. ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಿತ್ಯ 1,100 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದೆಯಾಗುತ್ತಿದೆ. ನಿಷೇಧದಿಂದಾಗಿ ಇಂದು ಯಾವುದೇ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗಿಲ್ಲ ಎಂದು ಕದಮ್ ತಿಳಿಸಿದ್ದಾರೆ.
ದೇಶಾದ್ಯಂತ ಈಗಾಗಲೇ 17 ರಾಜ್ಯಗಳು ಪ್ಲಾಸ್ಟಿಕ್ ಅನ್ನು ನಿಷೇಧಿಸಿವೆ. ಮಹಾರಾಷ್ಟ್ರ ಪ್ಲಾಸ್ಟಿಕ್ ನಿಷೇಧಿಸುತ್ತಿರುವ 18ನೇ ರಾಜ್ಯ ಎಂದು ಕದಮ್ ಎಎನ್ಐಗೆ ಹೇಳಿದ್ದಾರೆ.
ಪ್ಲಾಸ್ಟಿಕ್‌ ಚೀಲಗಳು, ಥರ್ಮೋಕೋಲ್‌, ವಿಲೇವಾರಿಯಾಗಬಲ್ಲ ಕಪ್‌ ಮತ್ತು ಪ್ಲೇಟ್‌ಗಳು, ಕಟ್ಲೆರಿ, ಹೆಣೆಯಲ್ಪಡದ ಪಾಲಿಪ್ರಾಪಲೀನ್‌ ಬ್ಯಾಗ್‌ಗಳು, ಪ್ಲಾಸ್ಟಿಕ್‌ ಪೌಚ್‌ಗಳು ಮತ್ತು ಪ್ಯಾಕೇಜಿಂಗ್‌ ಈ ನಿಷೇಧಕ್ಕೆ ಒಳಪಡುತ್ತವೆ.
Posted by: LSB | Source: ANI


Post a Comment

0 Comments