ಖ್ಯಾತ ಸೂಫಿ ಗಾಯಕ ಉಸ್ತಾದ್ ಪ್ಯಾರೆ ಲಾಲ್ ವಡಾಲಿ ನಿಧನ

ಖಾಸಗಿ ಆಸ್ಪತ್ರೆಯಲ್ಲಿ ಹೃದಯಸ್ತಂಭನದಿಂದ ಗಾಯಗ ಪ್ಯಾರೇ ಲಾಲ್ ನಿಧನ

Published: 09 Mar 2018 04:21 PM IST


ಅಮೃತ್ ಸರ: ಖ್ಯಾತ ಸೂಫಿ ಗಾಯಕ ಉಸ್ತಾದ್ ಪ್ಯಾರೇ ಲಾಲ್ ವಡಾಲಿ ಅವರು ನಿಧನರಾಗಿದ್ದು, ಅವರಿಗೆ 75 ವರ್ಷ ವಯಸ್ಸಾಗಿತ್ತು.
ಖ್ಯಾತ ಗಾಯಕ ಪೂರಣ್ ಚಂದ್ ವಡಾಲಿ ಅವರ ಕಿರಿಯ ಸಹೋದರರಾಗಿರುವ ಪ್ಯಾರೇಲಾಲ್ ವಡಾಲಿ ಅವರು ಹೃದಯಸ್ಥಂಭನಕ್ಕೊಳಗಾಗಿ ಶುಕ್ರವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅನಾರೋಗ್ಯದ ಕಾರಣದಿಂದಾಗಿ ಇತ್ತೀಚೆಗಷ್ಟೇ ಪ್ಯಾರೇಲಾಲ್ ವಡಾಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಸ್ಪತ್ರೆಯಲ್ಲಿಯೇ ಪ್ಯಾರೇಲಾಲ್ ಅವರು ಹೃದಯಸ್ಥಂಭನದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೂಫಿ ಗಾಯನದಲ್ಲಿ ವಡಾಲಿ ಬ್ರದರ್ಸ್ ಎಂದೇ ಖ್ಯಾತಿ ಗಳಿಸಿದ್ದ ಪ್ಯಾರೇಲಾಲ್ ವಡಾಲಿ  ಹಾಗೂ ಪೂರಣ್ ಚಂದ್ ವಡಾಲಿ ಅವರು, ನೂರಾರು ಸೂಫಿ ಗಾಯನಗಳನ್ನು ಹಾಡಿದ್ದಾರೆ. ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ತಮ್ಮ ಗಾಯನಸುಧೆ ಹರಿಸುವ ಮೂಲಕ ವಡಾಲಿ ಸಹೋದರರು ಖ್ಯಾತಿ ಗಳಿಸಿದ್ದರು. ಬಾಲಿವುಡ್ ಪಿಂಜರ್ ಚಿತ್ರಕ್ಕೂ ವಡಾಲಿ ಸಹೋದರರು ಹಿನ್ನಲೆ ಗಾಯನ ನೀಡಿದ್ದರು.

Post a Comment

0 Comments