ಬೆಂಗಳೂರು ವಿ.ವಿ ಕುಲಪತಿ ಹುದ್ದೆಗೆ ಪ್ರೊ.ಸಂಗಮೇಶ ಹೆಸರು ಅಂತಿಮಗೊಳಿಸಿದ ಸರ್ಕಾರ

ಬೆಂಗಳೂರು ವಿ.ವಿ ಕುಲಪತಿ ಹುದ್ದೆಗೆ ಪ್ರೊ.ಸಂಗಮೇಶ ಹೆಸರು ಅಂತಿಮಗೊಳಿಸಿದ ಸರ್ಕಾರ
Published: 23 Mar 2018 01:24 PM IST

ಬೆಂಗಳೂರು ವಿವಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಅಂತಿಮಗೊಳಿಸಿದೆ.
ಈ ವಿಷಯವನ್ನು ಮುಖ್ಯಮಂತ್ರಿ ಕಚೇರಿಯ ಮೂಲಗಳು ದೃಢಪಡಿಸಿದ್ದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರು ಖುದ್ದಾಗಿ ಉಪ ಕುಲಪತಿಗಳ ಹೆಸರಿನ ದಾಖಲೆಗಳನ್ನು ತಂದಿದ್ದಾರೆ ಮತ್ತು ಅದನ್ನು ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ.

ಇದೀಗ ಕುಲಪತಿ ಹೆಸರಿನ ದಾಖಲೆಗಳು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಸಂಗಮೇಶ ಪಾಟೀಲ್ ಅವರ ಹೆಸರಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ರಾಜ್ಯಪಾಲರು ದಾಖಲೆಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿ ಹೊಸ ಹೆಸರುಗಳ ಪಟ್ಟಿ ಕಳುಹಿಸಿಕೊಡುವಂತೆ ಸೂಚಿಸಿದ್ದರು.
ಇದರಿಂದಾಗಿ ಶೋಧನಾ ಸಮಿತಿ ಮತ್ತೊಂದು ಸುತ್ತಿನ ಸಭೆ ನಡೆಸಿ ಹೊಸ ಕುಲಪತಿಗಳ ಹೆಸರಿನ ಶಿಫಾರಸ್ಸಿನ ಪಟ್ಟಿಯನ್ನು ಕಳುಹಿಸಿತ್ತು. ಆ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರೊ.ಕೆ.ಆರ್.ವೇಣುಗೋಪಾಲ್ ಅವರ ಹೆಸರು ಕೂಡ ಇತ್ತು.
ಕಳೆದ ವರ್ಷ ಫೆಬ್ರವರಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿ ಉಳಿದುಕೊಂಡಿದೆ.


Post a Comment

0 Comments