ಚೀನಾದಿಂದ ಪಾಕ್​ಗೆ ಕ್ಷಿಪಣಿ ಟ್ರ್ಯಾಕಿಂಗ್​

ಚೀನಾದಿಂದ ಪಾಕ್​ಗೆ ಕ್ಷಿಪಣಿ ಟ್ರ್ಯಾಕಿಂಗ್​
Friday, 23.03.2018, 3:04 AM 

ವಿಜಯವಾಣಿ ಸುದ್ದಿಜಾಲ    

ನವದೆಹಲಿ: ಒನ್ ಬೆಲ್ಟ್ ಒನ್ ರೋಡ್ ಮತ್ತು ಆರ್ಥಿಕ ಕಾರಿಡಾರ್ ಯೋಜನೆಗಳಿಗೆ ಪಾಕಿಸ್ತಾನಕ್ಕೆ ಪಾಲುದಾರಿಕೆ ನೀಡಿ ಪೋಷಿಸುತ್ತಿರುವ ಚೀನಾ, ಈಗ ಪಾಕ್ ಸೇನೆಯ ಬಲ ಹೆಚ್ಚಿಸುವ ಕ್ರಮಕ್ಕೆ ಮುಂದಾಗಿದೆ. ಅತ್ಯಾಧುನಿಕ ಮತ್ತು ಶಕ್ತಿಶಾಲಿ ಕ್ಷಿಪಣಿ ಜಾಡು ಪತ್ತೆ ವ್ಯವಸ್ಥೆ (ಟ್ರಾ್ಯಕಿಂಗ್)ಯೊಂದನ್ನು ಪಾಕಿಸ್ತಾನಕ್ಕೆ ಚೀನಾ ಮಾರಾಟ ಮಾಡಿದೆ ಎಂದು ಹಾಂಗ್​ಕಾಂಗ್​ನ ದೈನಿಕವೊಂದು ವರದಿ ಮಾಡಿದೆ. ಈಗಾಗಲೇ ಹೊಸ ಕ್ಷಿಪಣಿಗಳ ಪರೀಕ್ಷೆ ಮತ್ತು ಅಭಿವೃದ್ಧಿಯಲ್ಲಿ ಈ ವ್ಯವಸ್ಥೆಯನ್ನು ಪಾಕಿಸ್ತಾನ ಬಳಕೆ ಮಾಡಲು ಆರಂಭಿಸಿದ್ದು, ಎಷ್ಟು ಮೊತ್ತಕ್ಕೆ ಟ್ರಾ್ಯಕಿಂಗ್ ವ್ಯವಸ್ಥೆ ಮಾರಾಟವಾಗಿದೆ ಎಂಬ ವಿವರಗಳು ಲಭ್ಯವಿಲ್ಲ. ಚೀನಾ ವಿಜ್ಞಾನ ಅಕಾಡೆಮಿಯಲ್ಲಿನ (ಸಿಎಎಸ್) ಆಪ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧಕ ಝೆಂಗ್ ಮೆಂಗ್ವೆಯಿ ಕ್ಷಿಪಣಿ ವ್ಯವಸ್ಥೆ ಮಾರಾಟದ ವಿಚಾರವನ್ನು ತಿಳಿಸಿದ್ದಾಗಿ ದೈನಿಕ ಹೇಳಿಕೊಂಡಿದೆ. ಬೆಳಕಿನ ಮೂಲಕ ಕ್ಷಿಪಣಿ ಮಾರ್ಗ ಪತ್ತೆ ಮಾಡುವ ಅತಿ ಸೂಕ್ಷ್ಮ ತಂತ್ರಜ್ಞಾನದ ಸಾಧನವನ್ನು ಪಾಕಿಸ್ತಾನಕ್ಕೆ ರಫ್ತು ಮಾಡಿರುವ ಮೊದಲ ರಾಷ್ಟ್ರ ಚೀನಾ ಎಂದು ಸಿಎಎಸ್ ವೆಬ್​ಸೈಟ್ ತಿಳಿಸಿದೆ.

ಈ ವ್ಯವಸ್ಥೆ ಪಾಕಿಸ್ತಾನ ಅಭಿವೃದ್ಧಿಪಡಿಸಿರುವ ಕ್ಷಿಪಣಿ ಮಾರ್ಗ ಪತ್ತೆ ಸಾಧನಗಳಿಗಿಂತ ಸಂಕೀರ್ಣವಾಗಿದ್ದು, ಇದರಿಂದಾಗಿ ಬಹು ಸಿಡಿತಲೆ ವ್ಯವಸ್ಥೆ ಹೊಂದಲು ಉತ್ಸುಕವಾಗಿರುವ ಪಾಕ್​ಗೆ ಆನೆಬಲ ಬಂದಂತಾಗಿದೆ ಎಂದು ಸಿಎಎಸ್ ಹೇಳಿದೆ.

ಕ್ಷಿಪಣಿ ಜಾಡು ಪತ್ತೆ ವ್ಯವಸ್ಥೆ ವೈಶಿಷ್ಟ್ಯ

ಕ್ಷಿಪಣಿ ಪರೀಕ್ಷೆಯಲ್ಲಿ ಅತೀ ಪ್ರಮುಖ ಸಾಧನ. ಉಡಾವಣೆಯಿಂದ ಗುರಿ ಮುಟ್ಟುವವರೆಗೂ ಕ್ಷಿಪಣಿ ಪಥ ಪರಿಶೀಲನೆಗೆ ಸಹಕಾರಿ. ಸಾಮಾನ್ಯವಾಗಿ ಎರಡು ಟೆಲಿಸ್ಕೋಪ್​ಗಳನ್ನು (ದೂರದರ್ಶಕ)ವ್ಯವಸ್ಥೆ ಹೊಂದಿರುತ್ತದೆ. ಆದರೆ ಚೀನಾ ನಿರ್ವಿುತ ವ್ಯವಸ್ಥೆಯಲ್ಲಿ 4 ಟೆಲಿಸ್ಕೋಪ್ ಇವೆ. ಹೆಚ್ಚು ದೂರದರ್ಶಕ ಇರುವುದರಿಂದ ಒಂದೇ ಬಾರಿ ಉಡಾವಣೆಯಾದ ವಿವಿಧ ದಿಕ್ಕುಗಳಲ್ಲಿನ ಸಿಡಿತಲೆಗಳ ಜಾಡು ಹಿಡಿಯುವುದು ಸುಲಭ ಮತ್ತು ಗುರಿ ತಪು್ಪವ ಸಾಧ್ಯತೆ ಕಡಿಮೆ.

ನಾವು ಅವರಿಗೆ ಒಂದು ಜೊತೆ ಕಣ್ಣುಗಳನ್ನು ಕೊಟ್ಟಂತೆ ಆಗಿದೆ. ಅವರಿಗೆ ಬೇಕಾದ್ದನ್ನು ಇನ್ಮೇಲೆ ನೋಡಲು ಅನುಕೂಲವಾಗುತ್ತದೆ. ಬೇಕಿದ್ದರೆ ಚಂದ್ರನನ್ನು ಕೂಡ ಅವರು ನೋಡಬಹುದು.

| ಝೆಂಗ್ ಮೆಂಗ್ವೆಯಿ ಚೀನಾ ವಿಜ್ಞಾನ ಅಕಾಡೆಮಿಯ ಆಪ್ಟಿಕ್ಸ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧಕ

ಪಾಕ್ ಸಂಸತ್​ಗೆ ಮೊದಲ ಮಹಿಳಾ ವಿಪಕ್ಷ ನಾಯಕಿ

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖ್ಯಸ್ಥೆ ಶೆರ್ರಿ ರೆಹಮಾನ್​ರನ್ನು ಪಾಕ್ ಸೆನೆಟ್​ಗೆ ವಿಪಕ್ಷ ನಾಯಕಿ ಯಾಗಿ ಗುರುವಾರ ನೇಮಿಸ ಲಾಗಿದೆ. ಆ ಹುದ್ದೆಗೆ ನೇಮಕ ವಾಗುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದ್ದು. 2002ರಲ್ಲಿ ಪಾಕ್ ಸಂಸತ್​ಗೆ ಮೊದಲ ಬಾರಿ ಆಯ್ಕೆಯಾದ ಶೆರ್ರಿ, ದಶಕಗಳ ಕಾಲ ಪಾಕ್​ನ ಹೆರಾಲ್ಡ್ ನಿಯತಕಾಲಿಕೆಯ ಸಂಪಾದಕಿಯಾಗಿದ್ದರು.


Post a Comment

0 Comments