ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಮಾನದಂಡಗಳೇನು?

Share this:

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆ ಮಾನದಂಡಗಳೇನು?

Updated: Thursday, March 8, 2018, 11:59 [IST]
ಪ್ರಧಾನಿ ನರೇಂದ್ರ ಮೋದಿಯವರು ಹಲವು ಜನಕಲ್ಯಾಣ ಯೋಜನೆಗಳನ್ನು ಜಾರಿ ತಂದಿದ್ದು, ಈ ಯೋಜನೆಗಳು ಬಹುತೇಕ ಭಾರತೀಯರಿಗೆ ಪ್ರಯೋಜನಕಾರಿ ಎನಿಸಿವೆ. ಭಾರತವು ತನ್ನ ರಾಷ್ಟ್ರೀಯ ಆದಾಯಕ್ಕಾಗಿ ಪ್ರಾಥಮಿಕ ವಲಯವನ್ನು ಅವಲಂಬಿಸಿದೆ ಮತ್ತು ಹೆಚ್ಚಿನ ಗಮನ ಕೃಷಿಯ ಕಡೆಗೆ ಇದೆ. ಇತ್ತೀಚಿನ ವರ್ಷಗಳಲ್ಲಿ ಇದರ ಗಮನ ದ್ವಿತೀಯ ಮತ್ತು ತೃತೀಯ ವಲಯಗಳ ಕಡೆಗೂ ಹರಿಯುತ್ತಿದೆ. ಹವಾಮಾನ ವೈಪರೀತ್ಯಗಳ ಕಾರಣದಿಂದ ರೈತರು ಸಂಕಷ್ಟಕರ ಜೀವನ ನಡೆಸುತ್ತಿದ್ದಾರೆ. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಅಪಾಯ ಸಂಭಾವ್ಯತೆಯನ್ನು ಕಡಿಮೆ ಮಾಡಲು ಪ್ರಧಾನ ಮಂತ್ರಿಯವರು ಫಸಲ್ ಬಿಮಾ ಯೋಜನೆಯನ್ನು ಮಂಡಿಸಿದರು.

ಈ ಯೋಜನೆಯು ರೈತರಿಗೆ ಕಡಿಮೆ ಪ್ರೀಮಿಯಂ ಬೆಲೆಗೆ ಬೆಳೆ ವಿಮೆಯನ್ನು ಒದಗಿಸುತ್ತದೆ. ಭಾರತದಲ್ಲಿ ರೈತರ ಆತ್ಮಹತ್ಯಾ ಪ್ರಮಾಣವು ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿದೆ. ಈ ಯೋಜನೆಯು ಅಂತಹ ದುರಂತಗಳನ್ನು ನಿರ್ಮೂಲನಗೊಳಿಸಲು ನೆರವಾಗಲಿದೆ. ಮೋದಿ ಆರೋಗ್ಯ ವಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಯ ವಿವರ
2016 ಜನವರಿ 13 ರಂದು ಈ ಯೋಜನೆಯು ಘೋಷಿತವಾಯಿತು ಮತ್ತು ಈ ಯೋಜನೆಯು ಕೃಷಿ ಮತ್ತು ಕಲ್ಯಾಣ ಸಚಿವಾಲಯದ ಬೆಂಬಲವನ್ನು ಹೊಂದಿದೆ. ಇದನ್ನು ಭಾರತದ ಪ್ರಾಂತ್ಯದಡಿಯಲ್ಲಿ ಬರುವ ಎಲ್ಲಾ ರಾಜ್ಯಗಳಿಗಳಲ್ಲಿಯೂ ಜಾರಿಗೊಳಿಸಲಾಗಿದೆ. ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದೇ ಈ ಯೋಜನೆಯ ಉದ್ದೇಶ. ಇಲ್ಲಿಯವರೆಗೂ ಬೆಳೆ ವಿಮೆಯ ಪ್ರೀಮಿಯಂ ತುಂಬಾ ಹೆಚ್ಚಿತ್ತು ಮತ್ತು ನಿಜವಾಗಿಯೂ ದೇಶೀಯ ರೈತರು ಈ ವಿಮೆಯ ಪ್ರಯೋಜನಗಳನ್ನು ಪಡೆಯುವಲ್ಲಿ ವಿಫಲರಾಗಿದ್ದರು. ಈ ಸಮಸ್ಯೆ ಪರಿಹರಿಸಲು ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಬೆಳೆ ವಿಮೆಯ ಪ್ರೀಮಿಯಂ ಕೇವಲ 1.5 ರಿಂದ 2 ಶೇಕಡಾದಷ್ಟಿರುತ್ತದೆ. ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳಿಗೆ ಪ್ರೀಮಿಯಂ ಒಟ್ಟು ವಿಮಾ ಮೌಲ್ಯದ ಶೇಕಡಾ 5 ರಷ್ಟಿರುತ್ತದೆ. ಕೇವಲ 5 ನಿಮಿಷದಲ್ಲಿ ಮೊಬೈಲ್/ಆನ್ಲೈನ್ ಮೂಲಕ ಜಾತಿ, ಆದಾಯ ಪ್ರಮಾಣ ಪತ್ರ ಪಡೆಯೋದು ಹೇಗೆ?
  

ಈ ಯೋಜನೆಯ ಪ್ರಮುಖ ಉದ್ದೇಶಗಳು
- ಬೆಳೆ ಹಾನಿ ಸಂಭವಿಸಿದಲ್ಲಿ ರೈತರಿಗೆ ವಿಮೆ ಮತ್ತು ಅಪಾಯದ ರಕ್ಷಣೆ ಒದಗಿಸುವುದು
- ರೈತರ ಆದಾಯವನ್ನು ಸ್ಥಿರಗೊಳಿಸುವುದು ಮತ್ತು ಕೃಷಿ ಕ್ಷೇತ್ರಕ್ಕೆ ನಿರಂತರ ಸಾಲದ ಹರಿವನ್ನು ಖ‌ಚಿತಪಡಿಸಿಕೊಳ್ಳುವುದು.
- ನವೀನ ಮತ್ತು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುವುದು.

  

ಈ ಯೋಜನೆ ಹೇಗೆ ಕೆಲಸ ಮಾಡುತ್ತದೆ?
ಈ ಯೋಜನೆ ಅಡಿಯಲ್ಲಿ ರೈತರು ಬೆಳೆ ವಿಮೆ ಖರೀದಿಸಿ ನಿಗದಿತ ಪ್ರೀಮಿಯಂ ಕಟ್ಟಬೇಕು. ಪ್ರೀಮಿಯಂ ಬೆಳೆ ಆಧರಿಸಿ ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆ ಕಾರ್ಯ ಪ್ರಾರಂಭ ಮೊದಲೇ ಮುನ್ನವೇ ಮಾಡಬೇಕು. ವಿಮೆ ಖರೀದಿಯ ನಂತರ ತಮ್ಮ ಹೊಲ ಗದ್ದೆಗಳಲ್ಲಿ ರೈತರು ಎಂದಿನಂತೆ ತಮ್ಮ ಕೆಲಸ ಮುಂದುವರಿಸಬಹುದು. ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ತಮ್ಮ ಕೈಮೀರಿದ ಯಾವುದೇ ಘಟನೆಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತನು ವಿಮೆಯ ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆಯುತ್ತಾನೆ. ಭಾರತದ ಬಹಳಷ್ಟು ರೈತರು ತಮ್ಮ ಅವಶ್ಯಕತೆಗಳಾದ ಬಿತ್ತನೆ ಬೀಜ, ಗೊಬ್ಬರ ಅಥವಾ ಇತರ ಕೃಷಿ ಉಪಕರಣಗಳನ್ನು ಖರೀದಿಸಲು ಸಾಲದ ಮೊರೆ ಹೋಗಿರುತ್ತಾರೆ. ಒಂದೊಮ್ಮೆ ಬೆಳೆ ನಾಶವಾದರೆ ಆತ ತನ್ನ ಸಾಲವನ್ನು ತೀರಿಸಲಾಗದೇ, ಒತ್ತಡದಿಂದಾಗಿ, ಆತ್ಮಹತ್ಯೆ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಾನೆ. ಈ ಯೋಜನೆಯಡಿಯಲ್ಲಿ ರೈತನು ಬೆಳೆ ಹಾನಿಯಾದರೆ ನಿಗದಿತ ವಿಮೆಮಾಡಿದ ಮೊತ್ತವನ್ನು ಪಡೆಯುತ್ತಾನೆ ಮತ್ತು ಇದನ್ನು ಆತ ತನ್ನ ಸಾಲವನ್ನು ತೀರಿಸಲು ಉಪಯೋಗಿಸಬಹುದಲ್ಲದೇ, ಇದು ಆತನ ಸಂಸಾರದ ಉಳಿವಿಗೂ ಕಾರಣವಾಗುತ್ತದೆ. ಈ ರೀತಿಯಲ್ಲಿ ರೈತನಿಗೆ ಬೆಳೆ ಹಾನಿಯಿಂದಾಗುವ ನಷ್ಟದ ಪ್ರಮಾಣ ಇಳಿಮುಖವಾಗುತ್ತದೆ ಮತ್ತು ಆತ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ.
  

ಈ ಯೋಜನೆಗೆ ಬೇಕಾಗಿರುವ ಅರ್ಹತಾ ಮಾನದಂಡಗಳೇನು?
ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದ ನಿಯಮಗಳು ಮತ್ತು ಅರ್ಹತೆಗಳು ಈ ಕೆಳಗಿನಂತಿವೆ:
- ರೈತನು ಭಾರತೀಯ ಪ್ರಜೆ ಮತ್ತು ಭಾರತೀಯ ನಿವಾಸಿಯಾಗಿರಬೇಕು.
- ರೈತನು ರಾವಿ, ಮುಂಗಾರು ಬೆಳೆ ಅಥವ ಇನ್ನಿತರ ವಾಣಿಜ್ಯ ಬೆಳೆಗಳನ್ನು ಅಥವಾ ತೋಟಗಾರಿಕಾ ಬೆಳೆಯನ್ನು ಬೆಳೆಸಬೇಕು.
- ರೈತನು ಆಯಾ ಪ್ರಾಂತ್ಯದ ಕೃಷಿ ಸಚಿವಾಲಯ ಸೂಚಿಸಿರುವ ಬೆಳೆಗಳನ್ನೇ ಬೆಳೆಸಬೇಕು. ಆ ಪ್ರದೇಶದ ಭೂಮಿ ಹಾಗೂ ಹವಾಮಾನವನ್ನು ಅವಲಂಬಿಸಿ ಬೆಳೆ ಸೂಚಿಸಿರಲಾಗುತ್ತದೆ. ಇದರಿಂದ ಬೆಳೆ ಹಾನಿ ಸಂಭವ ಕಡಿಮೆಯಿರುತ್ತದೆ.
- ಫಸಲ್ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಯಾವುದೇ ರೀತಿಯ ಧನ ಸಹಾಯ ನೀಡಲಾಗುವುದು.
- ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಯಿಂದಾದ ಹಾನಿಗೊಳಗಾದ ಬೆಳೆ ನಷ್ಟಕ್ಕೆ ರೈತನು ವಿಮಾ ಹಕ್ಕು ಪಡೆಯಬಹುದು.
- ಇನ್ನಿತರ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.
- ಕೇಂದ್ರ ಸರ್ಕಾರದ ಕೃಷಿಸಾಲದ ಖಾತೆ ಹೊಂದಿರುವಂತಹ ರೈತರು, ಯಾವುದೇ ಪರಿಶೀಲನೆಯಿಲ್ಲದೆ ಈ ಯೋಜನೆಯಲ್ಲಿ ವಿಮೆ ಪಡೆಯಲು ಅರ್ಹರಾಗಿರುತ್ತಾರೆ.
  

ಈ ಯೋಜನೆಗೆ ಅನರ್ಹತೆಗೆ ಸಂಬಂಧಿಸಿದ ನಿಯಮಗಳೇನು?
ಮೇಲ್ಕಾಣಿಸಿದ ಅರ್ಹತಾ ಮಾನದಂಡದ ಅಡಿಯಲ್ಲಿ ಒಳಗೊಳ್ಳದ ಏನಾದರೂ ಅಥವಾ ಯಾರಾದರೂ ಈ ಯೋಜನೆಗೆ ಅರ್ಹತೆ ಹೊಂದಲಾರರು. ಅದಲ್ಲದೇ ಈ ಕೆಳಗಿನ ಸಂದರ್ಭಗಳೂ ಅನರ್ಹತೆಗೆ ಕಾರಣವಾಗುತ್ತದೆ:
- ಯುದ್ಧ ಅಥವಾ ಪರಮಾಣು ವಿಕಿರಣಗಳ
- ಅಪಾಯದಿಂದಾಗುವ ಬೆಳೆ ಹಾನಿ
- ಗಲಭೆಗಳಿಂದಾಗುವ ಬೆಳೆ ಹಾನಿ
- ಕಳ್ಳತನ ಅಥವಾ ಪ್ರಾಣಿಗಳ ಮೇಯುವಿಕೆಯಿಂದಾಗುವ ಬೆಳೆ ಹಾನಿ
  
ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಹಳ ಸರಳವಾಗಿದೆ ಮತ್ತು ರೈತರು ಈ ಕೆಳಕಾಣಿಸಿದ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ವೆಬ್ಸೈಟ್ ಲೋಡ್ ಅದ ನಂತರ ರೈತರ ಅರ್ಜಿ ಸಲ್ಲಿಸುವ ವಿಭಾಗಕ್ಕೆ ಹೋಗಬೇಕು. ಅದು ನಿಮ್ಮನ್ನು ಅರ್ಜಿಸಲ್ಲಿಕಾ ಪುಟಕ್ಕೆ ನಿರ್ದೇಶಿಸುತ್ತದೆ.
ಮುಂದಿನ ಪುಟದಲ್ಲಿ ಬರುವ ಅಪ್ಲಿಕೇಶನ್ ನಲ್ಲಿ ವಿವರಗಳನ್ನು ತುಂಬಬೇಕು. ಮೂಲತಃ ಈ ಪುಟದಲ್ಲಿ ತಮ್ಮ ವೈಯುಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ. ನಂತರ ಪುಟದ ಕೆಳಭಾಗದಲ್ಲಿರುವ ಉಳಿಸಿ ಹಾಗೂ ಮುಂದುವರಿಯಿರಿ (click and save) ಗುಂಡಿಯನ್ನು ಒತ್ತಿ ವಿವರಗಳನ್ನು ನಮೂದಿಸಬೇಕು.
ಜಮೀನಿನ ವಿವರಗಳನ್ನು ಭರ್ತಿ ಮಾಡಿ, ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಿದ ನಂತರ ನಿಮ್ಮ ಅರ್ಜಿಗಾಗಿ ಒಂದು ಜಾಡು ಸಂಖ್ಯೆ (tracking no.) ಕಂಪ್ಯೂಟರ್ ಉತ್ಪಾದಿಸಿ ನೀಡುತ್ತದೆ ಮತ್ತು ಇದನ್ನು ನಿಮ್ಮ ಅರ್ಜಿಯ ಸ್ಥಿತಿ ಅರಿಯಲು ಉಪಯೋಗಿಸಬಹುದು.
ಯಾವುದಾರರೂ ತಪ್ಪುಗಳು ಅಥವಾ ಬದಲಾವಣೆಗಳು ಮಾಡಬೇಕಾದ ಸಂದರ್ಭವಿದ್ದರೆ ಅರ್ಜಿಯನ್ನು ನಂತರವೂ ಮಾರ್ಪಡಿಸಬಹುದು.
  

ಈ ಯೋಜನೆಯ ಲಾಭಗಳೇನು?
ಈ ಫಸಲ್ ಭೀಮಾ ಯೋಜನೆಯಡಿ ಕೆಳಕಾಣಿಸಿದ ಲಾಭಗಳನ್ನು ಪಡೆಯಬಹುದು:
- ಈ ಯೋಜನೆಯು ಬೇರೆ ವಿಮಾ ಕಂಪನಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರೀಮಿಯಂ ದರದಲ್ಲಿ ವಿಮಾ ಸೌಲಭ್ಯ ಒದಗಿಸುತ್ತದೆ.
- ಬೆಳೆ ಕೊಯ್ಲು ಮಾಡಿದ ನಂತರ ಬೆಳೆಗಳಿಗೆ ಏನಾದರೂ ಹಾನಿಯುಂಟಾದರೆ ಅದಕ್ಕೆ ಪರಿಹಾರ ಒದಗಿಸುತ್ತದೆ.
- ಯೋಜನೆಯು ಕೃಷಿ ವಲಯದಲ್ಲಿ ಹಣದ ಹರಿವನ್ನು ಒದಗಿಸುವ ಭರವಸೆ ನೀಡುತ್ತದೆ.
- ಈ ಯೋಜನೆಯು ಲಾಭದ ವರ್ಗಾವಣೆಯನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸುವ ಭರವಸೆ ನೀಡಿರುವುದರಿಂದ ದಾಖಲೆ ಪತ್ರಗಳ ವ್ಯವಹಾರ ಮತ್ತು ಭ್ರಷ್ಟಾಚಾರದ ಮಟ್ಟ ತುಂಬಾ ಕಡೆಮೆಯಿರುತ್ತದೆ.
- ಸಹಾಯ ಧನ ಅಥವಾ ವಿಮೆಯ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ಆಗಬಹುದಾದ ಯಾವುದೇ ರೀತಿಯ ಸೋರಿಕೆಯನ್ನು ತಡೆಗಟ್ಟಿ ಸಾರ್ವಜನಿಕರಿಗೆ ನೇರವಾಗಿ ಯೋಜನೆಯ ಲಾಭ ತಲುಪಿಸಲು ಇದು ಸರ್ಕಾರವನ್ನು ಶಕ್ತಗೊಳಿಸುತ್ತದೆ.
  

ಈ ಯೋಜನೆಗೆ ಯಾರು ಬೆನ್ನೆಲುಬಾಗಿರುತ್ತಾರೆ?
ಈ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಳಿಸಲಾಗಿದೆ ಮತ್ತು ಇದರ ಕಾರ್ಯಾಚರಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೃಷಿ ಮತ್ತು ಕಲ್ಯಾಣ ಸಚಿವಾಲಯ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಅಗತ್ಯ ನಿಧಿಯನ್ನು ಒದಗಿಸುತ್ತದೆ ಮತ್ತು ಇದು ರೈತರು ಪಾವತಿ ಮಾಡಿದ ಪ್ರೀಮಿಯಂ ಮೊತ್ತದ ಪ್ರಯೋಜನವನ್ನೂ ಪಡೆಯುತ್ತದೆ. ಈ ಪ್ರೀಮಿಯಂ ಅನ್ನು ಹಕ್ಕಿನ ವಿಮಾ ಮೊತ್ತದ ಪರಿಹಾರ ವಿತರಣೆಯ ಸಂದರ್ಭದಲ್ಲಿ ಬಳಸಲಾಗುತ್ತದೆ.
  

ನಾಗರಿಕರ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?
ಈ ಯೋಜನೆ ನೇರ ಮತ್ತು ಪರೋಕ್ಷವಾಗಿ ನಾಗರಿಕರ ಮೇಲೆ ಅತ್ಯಂತ ಧನಾತ್ಮಕ ಪರಿಣಾಮ ಬೀರುತ್ತದೆ. ಕೆಟ್ಟ ಸಾಲವು ಕ್ಷೀಣಿಸುತ್ತದೆ ಮತ್ತು ಇದು ಸಾರ್ವಜನಿಕ ನಿಧಿಗಳ ಉತ್ತಮ ಬಳಕೆಯನ್ನು ಸಾಧ್ಯಗೊಳಿಸುತ್ತದೆ. ಇದಲ್ಲದೇ ಆತ್ಮಹತ್ಯಾ ಪ್ರಕರಣಗಳು ಕಡಿಮೆಯಾಗುವುದರಲ್ಲೂ ಸಹಕರಿಸುವುದರಿಂದ ಸಂಸಾರಗಳು ಚೂರಾಗುವುದು ತಪ್ಪಿಸುತ್ತದೆ. ಮುಖ್ಯವಾಗಿ ರೈತರಿಗೆ ರಕ್ಷಣೆ ನೀಡಿದರೆ, ಅವರು ಬೆಳೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಸಾಧ್ಯವಾಗುತ್ತದೆ ಮತ್ತು ಉತ್ಪಾದನೆಯ ಪ್ರಮಾಣವೂ ಹೆಚ್ಚುತ್ತದೆ.
  

ಯೋಜನೆಯ ವಿವರಗಳು
ಯೋಜನೆಯ ಹೆಸರು: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ
ಯೋಜನೆಯ ವೆಚ್ಚ: 17,600 ಕೋಟಿ
ಯೋಜನೆ ಪ್ರಾರಂಭಿಸಿದವರು: ಶ್ರೀ ನರೇಂದ್ರ ಮೋದಿ
  

ಇದು ಭಾರತ ಅಭಿವೃದ್ಧಿಯ ಮುಂದಿನ ಹೆಜ್ಜೆಯೆ?
ಯಾವುದೇ ರಾಷ್ಟ್ರವು ತನ್ನ ರೈತರನ್ನು ಕಡೆಗಣಿಸಿ ಅಭಿವೃದ್ಧಿ ಹೊಂದಲಾರದೆಂದು ಹೇಳಲಾಗುತ್ತದೆ. ಈ ರೀತಿಯ ಹೆಜ್ಜೆಯಿಂದ ಸರ್ಕಾರವು ದೇಶರ ಅನ್ನದಾತರಾದ ರೈತರಿಗೆ ಎಲ್ಲಾ ಸ್ತರಗಳಲ್ಲೂ ರಕ್ಷಣೆಯ ಭರವಸೆ ನೀಡುತ್ತಿರುವ ಉತ್ತಮ ರಾಷ್ಟ್ರವಾಗಿಸುವತ್ತ ಭಾರತವನ್ನು ಮುನ್ನಡೆಸುತ್ತಿದೆ. ಈ ಯೋಜನೆಯ ಅಡಿಯಲ್ಲಿ ಬರುವ ಜನರ ಜೀವನಶೈಲಿ ಸುಧಾರಿಸುವಲ್ಲಿ ಈ ಯೋಜನೆ ಸಹಕಾರಿಯಾಗುವುದರಿಂದ ವಿವಿಧ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕವು ಉತ್ತಮಗೊಳ್ಳುತ್ತದೆ. ಅಂತಿಮವಾಗಿ ರೈತರು ಬಡತನವೆಂಬ ವಿಷವರ್ತುಲದಿಂದ ಹೊರಬರುತ್ತಾರೆ.
ಇದು ಖಂಡಿತವಾಗಿಯೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುವುದಲ್ಲದೇ, ಜನಕಲ್ಯಾಣ ಮತ್ತು ಇತರ ಎಲ್ಲಾ ಅಂಶಗಳಲ್ಲಿ ರಾಷ್ಟ್ರವು ಹೊಸ ಮಾನದಂಡವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ.

No comments:

Disclamer

All the information published in this web page is submitted by users or free to download on the internet. I make no representations as to accuracy, completeness, currentness, suitability, or validity of any information on this page and will not be liable for any errors, omissions, or delays in this information or any losses, injuries, or damages arising from its display or use. All information is provided on an as-is basis. All the other pages you visit through the hyper links may have different privacy policies. If anybody feels that his/her data has been illegally put in this web page, or if you are the rightful owner of any material and want it removed please email me at"shashikumarjr@gmail.com" and I will remove it immediately on demand. All the other standard disclaimers also apply.