ವಿಶ್ವಕಪ್ ಶೂಟಿಂಗ್: ಮಿಶ್ರ ಡಬಲ್ಸ್ ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡ ಮನು ಭಾಕರ್

ವಿಶ್ವಕಪ್ ಶೂಟಿಂಗ್: ಮಿಶ್ರ ಡಬಲ್ಸ್ ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡ ಮನು ಭಾಕರ್
Published: 06 Mar 2018 01:09 PM IST | Updated: 06 Mar 2018 01:15 PM IST

ಮನು ಭಾಕರ್ ಮತ್ತು ಓಂ ಪ್ರಕಾಶ್ ಮಿತರ್ವಾಲ್
ಮೆಕ್ಸಿಕೋ: ಇಲ್ಲಿ ನಡೆಯುತ್ತಿರುವ  ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಯುವ ಮಹಿಳಾ ಶೂಟರ್ ಮನು ಭಾಕರ್ ಮಿಶ್ರ ಡಬಲ್ಸ್ ನಲ್ಲಿ ಮತ್ತೊಂದು ಚಿನ್ನದ ಪದಕ ಗಳಿಸಿದ್ದಾರೆ.
ಸಹ ಆಟಗಾರ ಓಂ ಪ್ರಕಾಶ್ ಮಿತರ್ವಾಲ್ ಅವರೊಂದಿಗೆ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಇಂದು ಚಿನ್ನದ ಪದಕ ಗಳಿಸಿದ್ದಾರೆ.
ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್ಎಸ್ಎಫ್) ಆಯೋಜಿಸಿರುವ ಈ ವಿಶ್ವಕಪ್ ನಲ್ಲಿ  ಮಹಿಳೆಯರ 10 ಮೀ.ಏರ್ ಪಿಸ್ತೂಲ್ ವಿಭಾಗದಲ್ಲಿ ಮನು ನಿನ್ನೆ ಚಿನ್ನದ ಪದಕ ಗಳಿಸಿದ್ದರು.
ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ಮೂಲಕ ಹೋದ ಆಟಗಾರರಲ್ಲಿ ಹಿರಿಯರ ವಿಶ್ವಕಪ್ ಗೆದ್ದ ಅತ್ಯಂತ ಕಿರಿಯ ಆಟಗಾರ್ತಿ ಮನು ಭಾಕರ್ ಆಗಿರಬಹುದು. ಆದರೆ ಅಸೋಸಿಯೇಷನ್ ಆ ಬಗ್ಗೆ ಇನ್ನೂ ದೃಢಪಡಿಸಿಲ್ಲ. ಹರ್ಯಾಣ ಮೂಲದ ಮನು ಭಾಕರ್ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇವರ ಜೊತೆ ದೀಪಕ್ ಕುಮಾರ್ ಮತ್ತು ಮೆಹುಲಿ ಘೋಷ್ 10 ಮೀಟರ್ ಏರ್ ರೈಫಲ್ಸ್ ಮಿಶ್ರ ಡಬಲ್ಸ್ ನಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

Post a Comment

0 Comments