ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೇರಿದಂತೆ ಒಂಬತ್ತು ಅಂತಾರಾಷ್ಟ್ರೀಯ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹನ (ಪಿಎಸ್ ಎಲ್ ವಿ)-ಸಿ49 ಉಪಗ್ರಹವನ್ನ ಶನಿವಾರ ಮಧ್ಯಾಹ್ನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (ಎಸ್ ಡಿಎಸ್ ಸಿ) ಎಸ್ ಆರ್ ಎಚ್ ಆರ್ ನಿಂದ 9 ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಭಾರತದ ಧ್ರುವ ಉಪಗ್ರಹ ಉಡಾವಣಾ ವಾಹಕವು ತನ್ನ 51ನೇ ಮಿಷನ್ (ಪಿಎಸ್ ಎಲ್ ವಿ-ಸಿ49) ಇಓಎಸ್-01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಉಡಾವಣೆ ಮಾಡಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ 2020ರ ನವೆಂಬರ್ 7ರಂದು ಉಡಾವಣೆಯನ್ನ ತಾತ್ಕಾಲಿಕವಾಗಿ 1502 Hrs IST ನಲ್ಲಿ ನಿಗದಿಮಾಡಲಾಗಿದೆ' ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ
ಭಾರತದ ಪಿಎಸ್ ಎಲ್ ವಿ-ಸಿ49 ಹಯು EOS-01 ಅನ್ನ ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತಾರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಉಡಾವಣೆ ಮಾಡಿದೆ.
0 Comments