ಆನೆಯಂತೆ ಇರೋಣ

ಆನೆಯಂತೆ_ಇರೋಣ


ಎಲ್ಲಾ ಸಂದರ್ಭದಲ್ಲೂ ಎಲ್ಲರಿಗೂ ಎಲ್ಲದಕ್ಕೂ ಪ್ರತಿಕ್ರಿಯಿಸುವ ಅಗತ್ಯ ಇರುವುದಿಲ್ಲ"...
ಆಗ ತಾನೇ ಶುಭ್ರಗೊಂಡು ಬರ್ತಿದ್ದ ಆನೆಗೆ ಮೈಯೆಲ್ಲಾ ಕೆಸರು ತುಂಬಿದ ಹಂದಿಯೊಂದು ಎದುರಾಯಿತು. ತಟ್ಟನೇ ಆನೆ ಪಕ್ಕಕ್ಕೆ ಸರಿದು, ಹಂದಿಗೆ ದಾರಿ ಮಾಡಿಕೊಟ್ಟಿತು.

ಆ ಹಂದಿಗೆ ಅಹಂ ನೆತ್ತಿಗೇರಿತು.
ಗೆಳೆಯರೊಡನೆ, 'ನೋಡಿ, ಆನೆಯೇ ನನಗೆ ಹೆದರಿ, ಪಕ್ಕಕ್ಕೆ ಸರಿಯಿತು.ಅದಕ್ಕಿಂತ ನಾನೇ ಶಕ್ತಿಶಾಲಿ' ಎಂದು ಹೇಳುತ್ತಾ ಬೀಗಿತು.

ಅದನ್ನು ಕೇಳಿಸಿಕೊಂಡ ಆನೆಯ ಗೆಳೆಯರು, 'ಆ ಸಣ್ಣ ಹಂದಿಗೆ ಹೆದರುವಷ್ಟು ಬಲಹೀನನಾ ನೀನು' ಎಂದು ಹತಾಶೆಯನ್ನು ಹೊರಹಾಕಿದವು.



ಅದಕ್ಕೆ ಆನೆ, 'ನಾನು ಮನಸ್ಸು ಮಾಡಿದ್ದರೆ ಆ ಹಂದಿಯನ್ನು ಕಾಲಿನಲ್ಲಿ ಹೊಸುಕಿ ಹಾಕಿಬಿಡುತ್ತಿದ್ದೆ. ಆದರೆ ನಾನು ನದಿಯಲ್ಲಿ ಶುಚಿಗೊಂಡು ಬಂದಿದ್ದೇನೆ. ಅದರ ಮೈಯೆಲ್ಲಾ ಕೆಸರು, ಮುಟ್ಟಿದರೆ ನನ್ನ ಕಾಲೇ ಗಲೀಜಾಗುವುದೆಂದು ದೂರ ಸರಿದೆ' ಎಂದು ಹೇಳುತ್ತಾ ಮುಗುಳುನಗೆ ಬೀರಿತು.

"ನಮ್ಮ ಬದುಕಿನಲ್ಲೂ ಸಾಕಷ್ಟು ಕೊಳಕುಮನಸ್ಸಿನವರು ಎದುರಾಗಬಹುದು, ನಮ್ಮ ಸಾಮರ್ಥ್ಯದ ಬಗ್ಗೆ ಗೇಲಿ ಮಾಡಬಹುದು, ಬೆನ್ನ ಹಿಂದೆ ಆಡಿಕೊಂಡು ಮುಸಿ ಮುಸಿ ನಗಬಹುದು, ಕಳಂಕದ ಪಟ್ಟವನ್ನೇ ಕಟ್ಟಬಹುದು..‌ ಆದರೆ ನಾವು ಎಲ್ಲಾ ಸಂದರ್ಭದಲ್ಲೂ, ಎಲ್ಲರಿಗೂ, ಎಲ್ಲದಕ್ಕೂ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ.. ನಾವೇನು ಎಂಬುದು ನಮಗೆ, ನಮ್ಮವರಿಗೆ ಗೊತ್ತಿರುತ್ತದೆ. ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ.. ನೀವು, ನೀವಾಗಿರಿ.. ಕೆಟ್ಟದ್ದಕ್ಕೆ ಕಿವಿಗೊಡಬೇಡಿ.."

Post a Comment

0 Comments