ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಫಕೀರ್ ಚಂದ್ ಕೊಹ್ಲಿ ವಿಧಿವಶ

ಭಾರತದ ಸಾಫ್ಟ್‌ವೇರ್‌ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅಥವಾ ಎಫ್‌ಸಿ ಕೊಹ್ಲಿ ಅವರು ಗುರುವಾರ ಇಹಲೋಹ ತ್ಯಜಿಸಿದ್ದಾರೆ. 96 ವರ್ಷ ವಯಸ್ಸಿನ ಎಫ್‌ಸಿ ಕೊಹ್ಲಿ ಹಾಗೂ ಟಾಟಾ ಸಮೂಹದ ನಡುವೆ ಅವಿನಾಭಾವ ಸಂಬಂಧವಿದೆ.



ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌) ಮೊದಲ ಸಿಇಒ ಆಗಿದ್ದ ಅವರು ಸಾಫ್ಟ್‌ವೇರ್ ಸೇವೆಗಳಿಗಾಗಿ ಭಾರತವನ್ನು ಜಾಗತಿಕ ಹಬ್ ಆಗಿಸುವ ದೂರದೃಷ್ಟಿಯನ್ನು ಹೊಂದಿದ್ದರು.

''ಎಫ್‌ಸಿ ಕೊಹ್ಲಿಯವರು ದೂರದೃಷ್ಟಿಯನ್ನು ಹೊಂದಿದ್ದ ವ್ಯಕ್ತಿಯಾಗಿದ್ದು, ಭಾರತದ ಪ್ರತಿಯೊಂದು ಉದ್ಯಮದ ಪರಿವರ್ತನೆಗೆ ಕಾರಣವಾದ ಉದ್ಯಮವನ್ನು ರಚಿಸಿದರು. ಲಕ್ಷಾಂತರ ಉನ್ನತ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸಿದ ಐಟಿ ಉದ್ಯಮವನ್ನು ಪೋಷಿಸಿದ ಅವರಿಗೆ ಭಾರತದಲ್ಲಿ ಅನೇಕ ತಲೆಮಾರುಗಳ ಪುರುಷರು ಮತ್ತು ಮಹಿಳಾ ಐಟಿ ಉದ್ಯೋಗಿಗಳು ಋಣಿಯಾಗಿದ್ದಾರೆ.

Post a Comment

0 Comments