*🌷 ಕೇಂದ್ರ ಸರ್ಕಾರಿ ನೌಕರಿ: ಮುಂದಿನ ವರ್ಷದಿಂದ ಸಿಇಟಿ*
*==================*
*ಕೇಂದ್ರ ಸರ್ಕಾರಿ ನೌಕರಿ ಆಯ್ಕೆಗಾಗಿ ಮುಂದಿನ ವರ್ಷದಿಂದ ದೇಶದಾದ್ಯಂತ ಆನ್ಲೈನ್ ಮುಖಾಂತರ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋಮವಾರ ಹೇಳಿದರು.*
*========*
*ಸರ್ಕಾರಿ ನೌಕರಿಗೆ ಸೇರಲು ಬಯಸುವ ಯುವ ಜನರಿಗೆ ಈ ಪರೀಕ್ಷೆ ವರವಾಗಲಿದೆ ಎಂದು ಅವರು ಹೇಳಿದರು.*
*=======*
*‘ಸಿಇಟಿ ನಡೆಸಲು ಕೇಂದ್ರ ಸಚಿವ ಸಂಪುಟದ ಅನುಮತಿ ಪಡೆದು ರಾಷ್ಟ್ರೀಯ ನೇಮಕಾತಿ ಏಜೆನ್ಸಿಯನ್ನು(ಎನ್ಆರ್ಎ) ರಚಿಸಲಾಗಿದೆ. ಗ್ರೂಪ್–ಬಿ ಮತ್ತು ಗ್ರೂಪ್–ಸಿ (ತಾಂತ್ರಿಕೇತರ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎನ್ಆರ್ಎ ಈ ಪರೀಕ್ಷೆ ನಡೆಸಲಿದೆ. ಸಿಇಟಿಯು, ಉದ್ಯೋಗಕ್ಕಾಗಿ ಪ್ರಾಥಮಿಕ ಹಂತದ ಆಯ್ಕೆ ಪ್ರಕ್ರಿಯೆ ಆಗಿರಲಿದೆ’ ಎಂದರು.*
=======
*‘ಈ ಸುಧಾರಣೆಯಿಂದಾಗಿ, ದೇಶದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪರೀಕ್ಷಾ ಕೇಂದ್ರವಿರಲಿದೆ. ಇದರಿಂದಾಗಿ ಹಳ್ಳಿಗಳಿಂದ ಬರುವ ಅಭ್ಯರ್ಥಿಗಳಿಗೂ ಅನುಕೂಲವಾಗಲಿದೆ. ದೂರದ ಊರುಗಳಲ್ಲಿ ಇರುವ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಾಗದೇ ಇದ್ದ ಮಹಿಳೆಯರು, ಅಂಗವಿಕಲರು ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅಭ್ಯರ್ಥಿಗಳಿಗೂ ಇದು ಸಹಕಾರಿಯಾಗಲಿದೆ’ ಎಂದು ವಿವರಿಸಿದರು.*
*========*
*2021 ಜೂನ್ ನಂತರದಲ್ಲಿ ಎನ್ಆರ್ಎ ಮೊದಲ ಸಿಇಟಿ ನಡೆಸುವ ಸಾಧ್ಯತೆ ಇದೆ. ಹೀಗಿದ್ದರೂ, ಪ್ರಸ್ತುತ ಇರುವ ಏಜೆನ್ಸಿಗಳಾದ ಎಸ್ಎಸ್ಸಿ, ಆರ್ಆರ್ಬಿ ಹಾಗೂ ಐಬಿಪಿಎಸ್ಗಳು ಅಗತ್ಯತೆಗೆ ತಕ್ಕಂತೆ ನೇಮಕಾತಿಯನ್ನು ನಡೆಸಲಿವೆ’ ಎಂದರು.*
*========*
0 Comments