🌕 ಕೋಲ್ಕತಾ ಬಂದರು (ಹಲ್ದಿಯಾ ಸೇರಿದಂತೆ):
Kolkata Port (including Haldia)
—ಕೋಲ್ಕತಾದ ಬಂಗಾಳ ಕೊಲ್ಲಿಯಿಂದ 128 ಕಿ.ಮೀ, ದೂರದಲ್ಲಿರುವ ಹೂಗ್ಲಿ ನದಿಯ ತೀರದಲ್ಲಿದೆ. ಇದು ಒಂದು ನದಿ ತೀರದ ಬಂದರಾಗಿದೆ.*ಕೋಲ್ಕತ್ತಾ ಬಂದರನ್ನು ಭಾರತದ ಚಹದ ಬಂದರು ಎಂದು ಕರೆಯಲಾಗುತ್ತಿದೆ.
🌕 ಹಾಲ್ಡಿಯಾ ಬಂದರು (Haldia):
ಕೊಲ್ಕತ್ತಾ ಬಂದರಿನ ಒತ್ತಡ ಕಡಿಮೆ ಮಾಡಲು ನಿರ್ಮಿಸಿರುವ ಕೃತಕ ಬಂದರಾಗಿದೆ. ಕೋಲ್ಕತಾ ಬಂದರಿನ ವಿಪರೀತ ಹೂಳು ತುಂಬುವಿಕೆಯಿಂದಾಗುತ್ತಿದ್ದ ದೊಡ್ಡ ಹಡಗುಗಳು ಪ್ರವೇಶ ತಡೆಯನ್ನು ನಿವಾರಿಸಲು ಈ ಹಲ್ದಿಯಾ ಬಂದರನ್ನು ಅಭಿವೃದ್ಧಿಪಡಿಸಲಾಯಿತು.
🌕 ಪಾರದೀಪ್ ಬಂದರು: (Paradip Port)
ಒರಿಸ್ಸಾದ ಬಂಗಾಳ ಕೊಲ್ಲಿಯ ತೀರದಲ್ಲಿದೆ. ಭಾರತವು ಇಲ್ಲಿಂದ ಜಪಾನ್ ಗೆ ಕಚ್ಚಾ ಕಬ್ಬಿಣವನ್ನು ರಫ್ತು ಮಾಡುತ್ತದೆ.
🌕ವಿಶಾಖಪಟ್ಟಣಂ ಬಂದರು: (Vishakhapatnam Port)
ಇದು ಅತ್ಯಂತ ಆಳವಾದ ಬಂದರಾಗಿದ್ದು, ಆಂಧ್ರಪ್ರದೇಶದಲ್ಲಿದೆ. ಇದು ಭಿಲಾಯಿ ಮತ್ತು ರೂರ್ಕೆಲಾ ಪ್ರದೇಶಗಳ ಉಕ್ಕು ಉತ್ಪಾದನೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತದೆ.
🌕 ಚೆನೈ ಬಂದರು: (Chennai Port)
ಹಳೆಯ ಕೃತಕ ಬಂದರು. ಈ ಬಂದರು ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯದ ವಿಷಯದಲ್ಲಿ ಎರಡನೇ ಮುಂಬೈ ನಂತರ ಸ್ಥಾನದಲ್ಲಿದೆ.
🌕ಎನ್ನೋರ್ ಬಂದರು: (Ennore Port)
ಇದನ್ನು 2001ರಲ್ಲಿ ಪ್ರಮುಖ ಬಂದರು ಎಂದು ಘೋಷಿಸಲಾಯಿತು. ಇದು ಖಾಸಗಿ (ಕಾರ್ಪೊರೇಟ್) ಸಹಭಾಗಿತ್ವದಲ್ಲಿರುವ ಮೊದಲ ಬಂದರಾಗಿದೆ. ಉಷ್ಣ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲನ್ನು ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ ಪವರ್ ಸ್ಟೇಷನ್ ಗೆ ಪೂರೈಸಲು ಈ ಬಂದರನ್ನು ಎಲ್ಲಾ ರೀತಿಯಿಂದ ಸುಸಜ್ಜಿತ ಆಧುನೀಕರಣಗೊಳಿಸಲಾಗಿದೆ.
🌕 ಟುಟಿಕೊರಿನ್ ಬಂದರು
(Tuticorin Port)
ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಕೃತಕ ಆಳವಾದ ಸಮುದ್ರದ ಬಂದರನ್ನು ಹೊಂದಿದೆ.
🌕 ಕೊಚ್ಚಿನ್ ಬಂದರು:(Cochin Port)
ಇದು ಕೇರಳ ಕರಾವಳಿಯಲ್ಲಿರುವ ಉತ್ತಮವಾದ ನೈಸರ್ಗಿಕ ಬಂದರು. ಚಹಾ, ಕಾಫಿ ಮತ್ತು ಮೆಣಸು ಪದಾರ್ಥಗಳ ರಫ್ತು ಹಾಗು ಪೆಟ್ರೋಲಿಯಂ ಮತ್ತು ರಸ ಗೊಬ್ಬರಗಳ ಆಮದನ್ನು ನಿಭಾಯಿಸುತ್ತದೆ.
🌕 ನವ ಮಂಗಳೂರು ಬಂದರು:(New Mangalore Port)
ಇದನ್ನು 'ಕರ್ನಾಟಕದ ದ್ವಾರ' ಎಂದು ಕರೆಯುತ್ತಾರೆ. ಕುದುರೆಮುಖದಲ್ಲಿ ತೆಗೆಯುವ ಕಬ್ಬಿಣದ ಅದಿರಿನ ರಫ್ತು ನಿಭಾಯಿಸುತ್ತದೆ.
🌕 ಮರ್ಮಗೋವಾ ಬಂದರು: (Marmugao Port)
ಮರ್ಮಗೋವಾ ಬಂದರು ಗೋವಾ ರಾಜ್ಯದ ಝವಾರಿ ಕೊಲ್ಲಿಯ ಪ್ರದೇಶದಲ್ಲಿದೆ. ಇದು ನೌಕಾ ನೆಲೆಯನ್ನು ಹೊಂದಿದ್ದು, ಭಾರತದ ಪ್ರಮುಖ ಕಬ್ಬಿಣದ ಅದಿರಿನ ರಫ್ತಿಗೆ ಹೆಸರಾದ ಬಂದರಾಗಿದೆ.
🌕 ಮುಂಬೈ ಬಂದರು (Mumbai Port):
ಇದು ಒಂದು ನೈಸರ್ಗಿಕ ಬಂದರು. ಭಾರತದ ಹೊಸ ಅತಿ ಜನನಿಬಿಡ ಬಂದರಾಗಿದೆ.
🌕ನವಸೇವಾ ಬಂದರು (Nhava Sheva) : ಇದನ್ನು ಮುಂಬೈ ಬಂದರು ಬಳಿ ಅಭಿವೃದ್ಧಿಪಡಿಸಲಾಗುತ್ತಿದೆ.Mumbai ಬಂದರಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ನವಶೇವಾ ಬಂದರನ್ನು ನಿರ್ಮಿಸಲಾಗಿದೆ.
🌕ಜವಾಹರಲಾಲ್ ನೆಹರು ಬಂದರು: (Jawaharlal Nehru Port)
ವಿಶ್ವದ ವೇಗವಾಗಿ ಬೆಳೆಯುತ್ತಿರುವ ಬಂದರುಗಳಲ್ಲಿ ಇದು 5 ಸ್ಥಾನದಲ್ಲಿದೆ.
🌕ಕಾಂಡ್ಲಾ ಬಂದರು: (Kandla Port)
ಇದನ್ನು ಕರಾಚಿ ಬಂದರಿನ ವಿಭಜನೆಯ ನಂತರ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾಯಿತು ಇದು ಒಂದು ಉಬ್ಬರವಿಳಿತದ ಬಂದರಾಗಿದ್ದು, ಮುಕ್ತ ವ್ಯಾಪಾರ ವಲಯವಾಗಿದೆ. ಇದು ಕಛ್ ಖಾರಿಯ ರಣ್ ಪ್ರದೇಶದ ಶಿರೋಭಾಗದಲ್ಲಿದೆ.
1 Comments
Good information sir.... thank you
ReplyDelete