PDO ಅಧ್ಯಯನ ಸಾಮಗ್ರಿ 12

PDO notes:
~~~~~~~~~~~~~~~~~~~~~~~~~

1]  ಕನಾ೯ಟಕ ಪಂಚಾಯತ್ ರಾಜ್ ಅಧಿನಿಯಮ 1993 ಯಾವ ವಿಷಯವನ್ನು ಒಳಗೊಂಡಿದೆ?
¶ಗ್ರಾಮ ಪಂಚಾಯತಿ & ಸ್ಥಾಯಿ ಸಮಿತಿಗಳ ರಚನೆ

2] ಗ್ರಾಮ ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದ ರಾಜ್ಯ ಸಕಾ೯ರದ ಸಾಮಾನ್ಯ ಅಥವಾ ವಿಶೇಷ  ಆದೇಶವನ್ನು ಯಾರು ಹೊರಡಿಸುತ್ತಾರೆ?
¶ರಾಜ್ಯ ಸಕಾ೯ರ

3] ಗ್ರಾಮ ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದ ರಾಜ್ಯ ಸಕಾ೯ರದ ಸಾಮಾನ್ಯ ಆದೇಶ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಘೋಷಣೆ ಮಾಡುವವರಾರು?
¶ಡೆಪ್ಯೂಟಿ ಕಮೀಷನರ್

4] ಎಷ್ಟು ಜನಸಂಖ್ಯೆ ಹೊಂದಿರುವ ಗ್ರಾಮ ಅಥವಾ ಗ್ರಾಮದ ಗುಂಪನ್ನು ಒಳಗೊಂಡಿರುವ ಪ್ರದೇಶವನ್ನು ಪಂಚಾಯತಿ ಪ್ರದೇಶವೆಂದು ಘೋಷಿಸಲಾಗುತ್ತದೆ?
¶5000 ದಿಂದ 7000

5] ಒಂದು ಪಂಚಾಯತಿ ಪ್ರದೇಶದ ಕೇಂದ್ರ ಸ್ಥಾನವನ್ನೂ ಕೂಡ ಘೋಷಿಸುವ ಅಧಿಕಾರ ಯಾರಿಗಿರುತ್ತದೆ?
¶ಡೆಪ್ಯೂಟಿ ಕಮೀಷನರ್

6] ಡೆಪ್ಯೂಟ್ ಕಮೀಷನರ್ ರವರು ಪಂಚಾಯತಿ ಪ್ರದೇಶಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಘೋಷಣೆಯ ಅಧಿಸೂಚನೆಯ ತರುವಾಯ ಎಷ್ಟು ದಿನದೊಳಗೆ ಅಜಿ೯ದಾರರು ಅಹ್ವಾಲು ಸಲ್ಲಿಸಬಹುದು & ಯಾರಿಗೆ ಆ ಅಹ್ವಾಲನ್ನು ಅವರು ಸಲ್ಲಿಸಬೇಕು?
¶30 ದಿನದೆಳಗೆ, ಕಮೀಷನರ್ ಗೆ

7] ಪ್ರಕರಣ-5 ಪ್ರಸ್ತಾಪಿಸುವ ವಿಷಯ
¶ ಗ್ರಾಮ ಪಂಚಾಯತಿ ರಚನೆ

8] ಪಂಚಾಯತಿ ಪ್ರದೇಶದ ಎಷ್ಟು ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯ ಇರಬೇಕು?
¶400

9] ಗ್ರಾಮ ಪಂಚಾಯತಿ ಸ್ಥಾನಗಳು ಈ ಕೆಳಗಿನ ಯಾವ ಆದೇಶಕ್ಕೆ ಒಳಪಟ್ಟು ಮೀಸಲು ಇಡಲಾಗುತ್ತದೆ?
A. ರಾಜ್ಯ ವಿಧಾನ ಮಂಡಲ
B. ರಾಜ್ಯ ಹಣಕಾಸು ಆಯೋಗ
C. ರಾಜ್ಯ ಚುನಾವಣಾ ಆಯೋಗ ***
D. ರಾಜ್ಯ ಯೋಜನಾ ಆಯೋಗ

10] ಗ್ರಾಮ ಪಂಚಾಯತಿ ಒಟ್ಟು ಸ್ಥಾನಗಳಲ್ಲಿ ರಾಜ್ಯ ಚುನಾವಣಾ ಆಯೋಗದ ಸಾಮಾನ್ಯ ಅಥವಾ ವಿಶೇಷ ಆದೇಶಕ್ಕೆ ಒಳಪಟ್ಟು ಡೆಪ್ಯುಟಿ ಕಮೀಷನರ್ ರವರು ಹಿಂದುಳಿದವಗ೯ದವರಿಗೆ ಎಷ್ಟು ಸ್ಥಾನಗಳನ್ನು ಮೀಸಲಿಡತಕ್ಕದ್ದು?
A. 1/3 ರಷ್ಟು ಸಂಖ್ಯೆ ***
B. 2/3 ರಷ್ಟು
C. 3/4 ರಷ್ಟು
D. 1/4 ರಷ್ಟು

11] 2010 ರಲ್ಲಿ ಮಾಡಿದ ಕಾಯ್ದೆಯಂತೆ ಮಹಿಳೆಯರಿಗೆ ಕನಾ೯ಟಕದಲ್ಲಿ ಎಷ್ಟು ಸ್ಥಾನಗಳನ್ನು ಮೀಸಲಿಡಲಾಗಿದೆ? ಅದನ್ನು ತಿಳಿಸುವ ಸಂವಿಧಾನಾತ್ಮಕ ತಿದ್ದುಪಡಿ ಮಸೂದೆ ಎಷ್ಟನೆಯದು?
¶ಒಟ್ಟು ಸ್ಥಾನದ 50%
  ತಿದ್ದುಪಡಿ ಮಸೂದೆ 110
------------------------------------------------------------------
ಸಂಗ್ರಹ: P.P.ಕುಲಕಣಿ೯
             ಬಾದಾಮಿ

Post a Comment

0 Comments