ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ಸ್ಪೀಡ್; 10 ಸ್ಥಾನ ಏರಿಕೆ ಕಂಡ ಭಾರತಕ್ಕೆ 67ನೇ ಸ್ಥಾನ

ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್ ಸ್ಪೀಡ್; 10 ಸ್ಥಾನ ಏರಿಕೆ ಕಂಡ ಭಾರತಕ್ಕೆ 67ನೇ ಸ್ಥಾನ
Published: 26 Mar 2018 10:44 PM IST

ಇಂಟರ್ನೆಟ್
ನವದೆಹಲಿ: ಬ್ರಾಡ್ ಬ್ಯಾಂಡ್ ಸ್ಪೀಡ್ ನಲ್ಲಿ ಭಾರತ 10 ಸ್ಥಾನ ಏರಿಕೆ ಕಂಡಿದ್ದು 67ನೇ ಸ್ಥಾನ ಸಿಕ್ಕಿದೆ. ಜತೆಗೆ ಮೊಬೈಲ್ ಇಂಟರ್ನೆಟ್ ಸ್ಪೀಡ್ ನಲ್ಲಿ 109ನೇ ಸ್ಥಾನ ಸಿಕ್ಕಿದೆ.
ಇಂಟರ್ನೆಟ್ ಸ್ಪೀಡ್ ಟೆಸ್ಟಿಂಗ್ ಮತ್ತು ಅನಾಲಿಸಿಸ್ ಕಂಪೆನಿ ಓಕ್ಲಾ ವಿಶ್ವದ ವಿವಿಧ ದೇಶಗಳ ಇಂಟರ್ನೆಟ್ ಸ್ಪೀಡ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದ ಸ್ಥಿರ ಬ್ರಾಡ್ ಬ್ಯಾಂಡ್ ಸ್ಪೀಡ್ 2017ರ ನವೆಂಬರ್ ನಲ್ಲಿ 18.82 ಮೆಗಾ ಬೈಟ್ಸ್ ಪರ ಸೆಕೆಂಡ್(ಎಂಬಿಪಿಎಸ್) ಇದ್ದರೆ, 2018ರ ಫೆಬ್ರವರಿಯಲ್ಲಿ 20.72 ಎಂಬಿಪಿಎಸ್ ಗೆ ಏರಿಕೆಯಾಗಿದೆ ಎಂದು ಹೇಳಿದೆ.
ಅತೀ ವೇಗವಾದ ಮೊಬೈಲ್ ಇಂಟರ್ನೆಟ್ ಪಟ್ಟಿಯಲ್ಲಿ ನಾರ್ವೆಗೆ ಮೊದಲ ಸ್ಥಾನ ಸಿಕ್ಕಿದೆ. ಇನ್ನು ಬ್ರಾಡ್ ಬ್ಯಾಂಡ್ ಸ್ಪೀಡ್ ನಲ್ಲಿ ಸಿಂಗಾಪುರಕ್ಕೆ ಮೊದಲ ಸ್ಥಾನ ಸಿಕ್ಕಿದೆ.
Posted by: VS | Source: Online Desk


Post a Comment

0 Comments