ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಅಗ್ರಸ್ಥಾನ

ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ ಅಗ್ರಸ್ಥಾನ
PTI | Updated Mar 13, 2018, 04:00 AM IST

ಹೊಸದಿಲ್ಲಿ : ಮೆಕ್ಸಿಕೊದ ಗ್ವಾಡಲಜರದಲ್ಲಿ ಮುಕ್ತಾಯಗೊಂಡ ಐಎಸ್‌ಎಸ್‌ಎಫ್‌ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು 4 ಕಂಚಿನೊಂದಿಗೆ ಒಟ್ಟು 9 ಪದಕಗಳೊಂದಿಗೆ ಅಗ್ರಸ್ಥಾನಿಯಾಗಿ ಹೋರಾಟ ಕೊನೆಗೊಳಿಸಿದೆ. ಈ ಮೂಲಕ ಇದೇ ಮೊದಲ ಬಾರಿ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ ಇಂಥ ಸಾಧನೆ ಮಾಡಿದೆ.

ಅಂತಾರಾಷ್ಟ್ರೀಯ ಶೂಟಿಂಗ್‌ ಸ್ಪೋರ್ಟ್ಸ್ ಫೆಡರೇಷನ್‌(ಐಎಸ್‌ಎಸ್‌ಎಫ್‌) ವಿಶ್ವಕಪ್‌ನ ಕೊನೆಯ ದಿನವಾದ ಭಾನುವಾರ ನಡೆದ ಪುರುಷರ ಸ್ಕೀಟ್‌ ವಿಭಾಗದ ಸ್ಪರ್ಧೆಯಲ್ಲಿ ಎರಡು ಬಾರಿಯ ಒಲಿಂಪಿಕ್‌ ಚಾಂಪಿಯನ್‌ ವಿನ್ಸೆಂಟ್‌ ಹಾಂಕಾಕ್‌ ಸ್ವರ್ಣ ಪದಕ ಗೆದ್ದು ಕೊಂಡಿದ್ದಾರೆ. ಇದೇ ಸ್ಪರ್ಧೆಯಲ್ಲಿದ್ದ ಭಾರತದ ಸ್ಮಿತ್‌ ಸಿಂಗ್‌ 15ನೇ ಹಾಗೂ ಅನ್ಗದ್‌ ಬಜ್ವಾ 18ನೇ ಸ್ಥಾನ ಗಳಿಸಿದ್ದಾರೆ. ಈ ನಡುವೆ ಕೇವಲ 112 ಅಂಕ ಕಲೆಹಾಕಿದ ಶೀರಜ್‌ ಶೇಖ್‌ 30ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಆದಾಗ್ಯೂ ಕೂಟದಲ್ಲಿ ಭಾರತ ಇದೇ ಪ್ರಥಮ ಬಾರಿಗೆ 9 ಪದಕದೊಂದಿಗೆ ಮೊದಲ ಸ್ಥಾನ ಗಳಿಸಿದೆ. ಭಾರತದ ಪರ ಶಜ್ಜಾರ್‌ ರಿಜ್ವಿ, ಮನು ಭೇಕರ್‌, ಅಖಿಲ್‌ ಶೆರೋನ್‌ ಮತ್ತು ಓಂ ಪ್ರಕಾಶ್‌ ಮಿಥರ್ವಲ್‌ ಚಿನ್ನದ ಪದಕ ಗೆದ್ದರೆ, ಅಂಜುಮ್‌ ಮೌದ್ಗಿಲ್‌ ಏಕೈಕ ರಜತ ಪದಕ ಜಯಿಸಿದರು.

Post a Comment

0 Comments