ತ್ರಿಪುರಾ ನೂತನ ಸಿಎಂ ಆಗಿ ಬಿಪ್ಲಬ್ ದೇಬ್ ಪ್ರಮಾಣ ವಚನ ಸ್ವೀಕಾರ

ತ್ರಿಪುರಾ ನೂತನ ಸಿಎಂ ಆಗಿ ಬಿಪ್ಲಬ್ ದೇಬ್ ಪ್ರಮಾಣ ವಚನ ಸ್ವೀಕಾರ
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಮಾಜಿ ಸಿಎಂ ಮಾಣಿಕ್ ಸರ್ಕಾರ್ ಸೇರಿ ಹಲವು ಗಣ್ಯರು ಭಾಗಿPublished: 09 Mar 2018 12:57 PM IST | Updated: 09 Mar 2018 12:58 PM IST

ಸಿಎಂ ಆಗಿ ಬಿಪ್ಲಬ್ ದೇಬ್ ಪ್ರಮಾಣ ವಚನ ಸ್ವೀಕರಿಸಿದ ಬಿಪ್ಲಬ್ ದೇಬ್
ಅಗರ್ತಲಾ: ತ್ರಿಪುರಾ ರಾಜ್ಯದ ನೂತನ ಸಿಎಂ ಆಗಿ ಬಿಪ್ಲಬ್ ದೇಬ್ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.
ಉಪಮುಖ್ಯಮಂತ್ರಿಯಾಗಿ ಜಿಷ್ಣು ದೇವ್ ಬರ್ಮಾನ್ ಇದೇ ಸಂದರ್ಭ ಪ್ರಮಾಣ ವಚನ ಸ್ವೀಕರಿಸಿದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ತ್ರಿಪುರಾದ ಮಾಜಿ ಸಿಎಂ ಮಾಣಿಕ್ ಸರ್ಕಾರ್, ಬಿಜೆಪಿಯ ಹಿರಿಯ ನಾಯಕರಾದ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
48 ವರ್ಷ ವಯಸ್ಸಿನ ಬಿಪ್ಲಬ್ ದೇಬ್  ಅವರು ತ್ರಿಪುರಾ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದು, ಬಿಪ್ಲಬ್ ದೇಬ್ ಅವರು ಗೋಮತಿ ಜಿಲ್ಲೆಯವರಾಗಿದ್ದಾರೆ. 1999ರಲ್ಲಿ ತ್ರಿಪುರಾದ ಉದಯ್ ಪುರ ಕಾಲೇಜಿನ ಪದವಿ ಪಡೆದ ಬಿಪ್ಲಪ್ ದೇಬ್ ಅವರು, ಆರ್ ಎಸ್ ಎಸ್ ಸಂಘಟನೆ ಸೇರಿದ ಬಳಿಕ ದೆಹಲಿಯಲ್ಲೇ 16 ವರ್ಷ ಕಳೆದಿದ್ದರು. ಈ ಸಮಯದಲ್ಲಿ ಆರ್ ಎಸ್ ಎಸ್ ನ ಪ್ರಮುಖರಾದ ಗೋಬಿಂದ್ ಆಚಾರ್ಯ ಮತ್ತು ಕೃಷ್ಣ ಗೋಪಾಲ್ ಶರ್ಮಾ ರೊಂದಿಗೆ ಕಾರ್ಯ ನಿರ್ವಹಿಸಿದ್ದರು.
ಈಗ್ಗೆ 2 ವರ್ಷಗಳ ಹಿಂದಷ್ಟೇ ತವರು ರಾಜಕಾರಣಕ್ಕೆ ಮರಳಿದ್ದ ಬಿಪ್ಲಪ್ ದೇಬ್ ಬಂದಷ್ಟೇ ವೇಗದಲ್ಲಿ ತ್ರಿಪುರಾ ಬಿಜೆಪಿ ಘಟಕದ ಮುಖ್ಯಸ್ಥರಾಗಿದ್ದರು. ಇದೀಗ ಇತ್ತೀಚಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ಮು ಯಶಸ್ವಿಯಾಗಿ ಸಂಘಟಿಸಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Post a Comment

0 Comments