ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ

ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ

<< 360 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಇಂದು ಲೋಕಾರ್ಪಣೆ >>

ಬೆಳಗಾವಿ: ನಗರದ ಪ್ರಸಿದ್ಧ ಕೋಟೆ ಕೆರೆ ದಡದಲ್ಲಿ ನಿರ್ವಿುಸಿರುವ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಮಾ.12ರಂದು ಬೆಳಗ್ಗೆ 8.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸ್ತುತ ರಾಜಸ್ತಾನದ ವಾಘಾ ಬಾರ್ಡರ್​ನಲ್ಲಿ 355 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭವಿದ್ದು, ಬೆಳಗಾವಿಯಲ್ಲಿ 360 ಅಡಿ ಎತ್ತರ ಸ್ತಂಭ ನಿರ್ವಿುಸಲಾಗಿದೆ.

ಮುಖ್ಯಮಂತ್ರಿಯವರ 100 ಕೋಟಿ ರೂ. ವಿಶೇಷ ಅನುದಾನದಲ್ಲಿನ 1.62 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರಧ್ವಜ ಸ್ತಂಭ ನಿರ್ವಿುಸಲಾಗಿದೆ. ಸ್ತಂಭದ ತುದಿಯಲ್ಲಿ ತ್ರಿವರ್ಣ ಧ್ವಜ ದಿನದ 24 ಗಂಟೆ ಹಾಗೂ ವರ್ಷದ 365 ದಿನ ಹಾರಾಡಲಿದೆ. ರಾತ್ರಿಯೂ ಸಾರ್ವಜನಿಕರ ವೀಕ್ಷಣೆಗಾಗಿ ಫೋಕಸ್ ಲೈಟ್ ವ್ಯವಸ್ಥೆ ಕಲ್ಪಿಸಲಾಗಿದೆ.

ಧ್ವಜ ಮತ್ತು ಸ್ತಂಭದ ವಿಶೇಷತೆ: ಬೇಸ್ ಪ್ಲೇಟ್​ನಿಂದ ಒಟ್ಟು 110 ಮೀ. ಎತ್ತರವನ್ನು ಸ್ತಂಭ ಹೊಂದಿದೆ. ಈ ಸ್ತಂಭದಲ್ಲಿ 12080 ಅಡಿ ವಿಸ್ತೀರ್ಣದ ರಾಷ್ಟ್ರಧ್ವಜ ಹಾರಾಡಲಿದೆ. ವಿದ್ಯುನ್ಮಾನ ಯಂತ್ರದ ಸಹಾಯದಿಂದ ರಾಷ್ಟ್ರಧ್ವಜ ಹಾರಾಡಲಿದ್ದು, 1.9 ಮೀ. ಡೈಮನ್ಷನ್ ಹಾಗೂ 14 ಮಿ.ಮೀ. ದಪ್ಪ ಇರುವ ಧ್ವಜಕ್ಕೆ 3.5 ಎಚ್​ಪಿ ಮೋಟರ್ ಅಳವಡಿಸಲಾಗಿದೆ. ಡೆನಿಯರ್ ಪಾಲಿಸ್ಟರ್ ಬಟ್ಟೆಯಿಂದ ಧ್ವಜ ಸಿದ್ಧಪಡಿಸಲಾಗಿದೆ. ರೋಪ್​ನ ದಪ್ಪ 8 ಮಿ.ಮೀ. ಹೊಂದಿದ್ದು, 15 ದಿನದಲ್ಲಿ ಧ್ವಜ ಸಿದ್ಧಪಡಿಸಲಾಗಿದೆ. ಒಟ್ಟು 36 ಟನ್ ತೂಕವನ್ನು ಧ್ವಜಸ್ತಂಭ ಹೊಂದಿದೆ. ಪುಣೆ ಮೂಲದ ಬಜಾಜ್ ಸಂಸ್ಥೆ ರಾಷ್ಟ್ರಧ್ವಜ ನಿರ್ಮಾಣ ಹಾಗೂ ರಾಷ್ಟ್ರಧ್ವಜ ಸ್ತಂಭ ನಿರ್ವಣದ ಗುತ್ತಿಗೆ ಪಡೆದು ಪೂರ್ಣಗೊಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಡಾ ಅಧ್ಯಕ್ಷ ಹಾಗೂ ಶಾಸಕ ಫಿರೋಜ್ ಸೇಠ್, ಮುಖ್ಯಮಂತ್ರಿಯಿಂದ ರಾಷ್ಟ್ರಧ್ವಜ ಸ್ತಂಭ ಲೋರ್ಕಾಪಣೆ ಮಾಡುವ ಯೋಜನೆ ಇತ್ತು. ಆದರೆ ಸಿಎಂ ಅವರು ಚುನಾವಣೆ ಸಿದ್ಧತೆಯಲ್ಲಿದ್ದಾರೆ ಎಂದರು. ಬುಡಾ ಆಯುಕ್ತ ಶಕೀಲ್ ಅಹ್ಮದ್ ಸುದ್ದಿಗೋಷ್ಠಿಯಲ್ಲಿದ್ದರು.

Post a Comment

0 Comments