ಭಾರತದಲ್ಲಿ ಬಾಲ್ಯ ವಿವಾಹ ಸಂಖ್ಯೆಯಲ್ಲಿ ಭಾರೀ ಇಳಿಮುಖ: ಯುನಿಸೆಫ್ ವರದಿ

ಭಾರತದಲ್ಲಿ ಬಾಲ್ಯ ವಿವಾಹ ಸಂಖ್ಯೆಯಲ್ಲಿ ಭಾರೀ ಇಳಿಮುಖ: ಯುನಿಸೆಫ್ ವರದಿ
Published: 06 Mar 2018 12:26 PM IST

ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ವಿಶ್ವದಾದ್ಯಂತ ಅದರಲ್ಲೂ ಭಾರತದಲ್ಲಿ ಬಾಲ್ಯವಿವಾಹ ಸಂಖ್ಯೆಯಲ್ಲಿ ಭಾರೀ ಕಡಿಮೆಯಾಗಿದೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಹೇಳಿದೆ.
ಯುನಿಸೆಫ್ ಪ್ರಕಾರ, ಕಳೆದೊಂದು ದಶಕದಲ್ಲಿ ವಿಶ್ವಾದ್ಯಂತ 25 ದಶಲಕ್ಷ ಬಾಲ್ಯ ವಿವಾಹವನ್ನು ತಡೆಯಲಾಗಿದೆ. ದಕ್ಷಿಣ ಏಷ್ಯಾದಲ್ಲಿ ಕಳೆದ 10 ವರ್ಷಗಳಲ್ಲಿ ಬಾಲ್ಯ ವಿವಾಹ ವಿಶ್ವಾದ್ಯಂತ ಕಡಿಮೆಯಾಗಿದ್ದು 18 ವರ್ಷಕ್ಕಿಂತ ಮೊದಲು ಮದುವೆಯಾಗುವ ಅಪಾಯ ಕಳೆದೊಂದು ದಶಕದಲ್ಲಿ ಶೇಕಡಾ 50ರಿಂದ ಶೇಕಡಾ 30ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಬಾಲ್ಯ ವಿವಾಹ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಿದೆ.
ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಏರಿಕೆ, ಹೆಣ್ಣು ಮಕ್ಕಳ ಪ್ರಗತಿಗೆ ಸರ್ಕಾರದ ಕಾರ್ಯಕ್ರಮಗಳು , ಬಾಲ್ಯ ವಿವಾಹದ ಅಕ್ರಮ ಕುರಿತು ಸಾರ್ವಜನಿಕ ಸಂದೇಶಗಳು ಇತ್ಯಾದಿಗಳಿಂದ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಯುನಿಸೆಫ್ ತಿಳಿಸಿದೆ.
ಪ್ರಸ್ತುತ 18 ವರ್ಷಕ್ಕಿಂತ ಮೊದಲು ಐವರಲ್ಲಿ ಒಬ್ಬ ಹುಡುಗಿ ಮದುವೆಯಾಗುತ್ತಾಳೆ, ದಶಕದ ಹಿಂದೆ ನಾಲ್ವರಲ್ಲಿ ಒಬ್ಬ ಹೆಣ್ಣು ಮಗಳು 18 ವರ್ಷಕ್ಕಿಂತ ಮೊದಲು ವಿವಾಹವಾಗುತ್ತಿದ್ದಳು. ಪ್ರಸ್ತುತ ಬಾಲ್ಯ ವಿವಾಹ ಆಫ್ರಿಕಾದಲ್ಲಿ ಹೆಚ್ಚಾಗಿದ್ದು ಇಥಿಯೋಪಿಯಾದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿದೆ. ಆದರೂ ಈ ವಿಚಾರದಲ್ಲಿ ಇನ್ನಷ್ಟು ದೂರ ಸಾಗಿ ಪ್ರಗತಿ ಕಾಣಬೇಕಾಗಿದೆ ಎಂದು ಯುನಿಸೆಫ್ ನ ಪ್ರಧಾನ ಲಿಂಗ ಸಲಹೆಗಾರ ಅಂಜು ಮಲ್ಹೋತ್ರಾ ತಿಳಿಸಿದ್ದಾರೆ.
ಬಾಲ್ಯ ವಿವಾಹವನ್ನು 2030ರ ವೇಳೆಗೆ ಕೊನೆಗಾಣಿಸಲು ವಿಶ್ವಸಂಸ್ಥೆ ಸ್ಥಿರ ಅಭಿವೃದ್ಧಿ ಗುರಿಯನ್ನಿಟ್ಟುಕೊಳ್ಳಲಾಗಿದ್ದು, ಆ ಗುರಿಯನ್ನು ತಲುಪಲು ಈಗಿನಿಂದಲೇ ಪ್ರಯತ್ನಪಡುವ ಅಗತ್ಯವಿದೆ. ಬಾಲ್ಯ ವಿವಾಹವನ್ನು ತಡೆಯುವುದರಿಂದ ಹೆಣ್ಣು ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಈಡೇರಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅಂಜು ಮಲ್ಹೋತ್ರಾ ಹೇಳುತ್ತಾರೆ.

Post a Comment

0 Comments