65ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ

65ನೇ ಸೌತ್ ಫಿಲ್ಮ್ ಫೇರ್: ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿ

Updated: Sunday, June 17, 2018, 15:29 [IST]
65ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರಕಟವಾಗಿದೆ. ಮುತ್ತಿನ ನಗರಿ ಹೈದರಾಬಾದ್ ನಲ್ಲಿ 65ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ (ಜೂನ್ 16) ಅದ್ಧೂರಿಯಾಗಿ ನೆರವೇರಿದೆ.

ಕನ್ನಡ ಚಿತ್ರರಂಗದಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಪ್ಪು ಸುಂದರಿಯನ್ನ ಹಿಡಿದು ನಗೆ ಬೀರಿದರೆ, ತೆಲುಗಿನಲ್ಲಿ 'ಅತ್ಯುತ್ತಮ ನಟ'ನಾಗಿ ಹೊರಹೊಮ್ಮಿದವರು 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರಕೊಂಡ.
ತಮಿಳಿನ 'ವಿಕ್ರಂ ವೇದ' ಚಿತ್ರದಲ್ಲಿನ ಅಭಿನಯಕ್ಕೆ ವಿಜಯ್ ಸೇತುಪತಿ 'ಅತ್ಯುತ್ತಮ ನಟ' ಪ್ರಶಸ್ತಿ ಸ್ವೀಕರಿಸಿದರು. ಇನ್ನೂ 'ಅತ್ಯುತ್ತಮ ನಟಿ' ಪ್ರಶಸ್ತಿಗೆ ನಯನತಾರಾ ಭಾಜನರಾದರು.
65ನೇ ಸೌತ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಚಿತ್ರರಂಗದ ಪ್ರತಿಭಾವಂತರ ಪಟ್ಟಿ ಇಲ್ಲಿದೆ. ನೋಡಿ...

ಕನ್ನಡದಲ್ಲಿ ಯಾರ್ಯಾರಿಗೆ ಸಿಕ್ಕಿದೆ ಪ್ರಶಸ್ತಿ
ಅತ್ಯುತ್ತಮ ಚಲನಚಿತ್ರ: ಒಂದು ಮೊಟ್ಟೆಯ ಕಥೆ
ಅತ್ಯುತ್ತಮ ನಟ: ಪುನೀತ್ ರಾಜ್ ಕುಮಾರ್ (ಚಿತ್ರ: ರಾಜಕುಮಾರ)
ಅತ್ಯುತ್ತಮ ನಟಿ: ಶ್ರುತಿ ಹರಿಹರನ್ (ಚಿತ್ರ: ಬ್ಯೂಟಿಫುಲ್ ಮನಸ್ಸುಗಳು)
ಅತ್ಯುತ್ತಮ ನಟ (ಕ್ರಿಟಿಕ್ಸ್ ಅವಾರ್ಡ್): ಧನಂಜಯ (ಚಿತ್ರ: ಅಲ್ಲಮ)
ಅತ್ಯುತ್ತಮ ನಟಿ (ಕ್ರಿಟಿಕ್ಸ್ ಅವಾರ್ಡ್): ಶ್ರದ್ಧಾ ಶ್ರೀನಾಥ್ (ಚಿತ್ರ: ಆಪರೇಶನ್ ಅಲಮೇಲಮ್ಮ)
  

ತರುಣ್ ಸುಧೀರ್ ಗೆ ಒಲಿದ ಅದೃಷ್ಟ
ಅತ್ಯುತ್ತಮ ನಿರ್ದೇಶಕ: ತರುಣ್ ಸುಧೀರ್ (ಚಿತ್ರ: ಚೌಕ)
ಅತ್ಯುತ್ತಮ ಪೋಷಕ ನಟ: ಪಿ ರವಿಶಂಕರ್ (ಚಿತ್ರ: ಕಾಲೇಜ್ ಕುಮಾರ್)
ಅತ್ಯುತ್ತಮ ಪೋಷಕ ನಟಿ: ಭವಾನಿ ಪ್ರಕಾಶ್ (ಚಿತ್ರ: ಊರ್ವಿ)
ಅತ್ಯುತ್ತಮ ಗಾಯಕ: ಅರ್ಮಾನ್ ಮಲಿಕ್
ಅತ್ಯುತ್ತಮ ಗಾಯಕಿ: ಅನುರಾಧಾ ಭಟ್
ಅತ್ಯುತ್ತಮ ಗೀತ ಸಾಹಿತ್ಯ: ವಿ.ನಾಗೇಂದ್ರ ಪ್ರಸಾದ್
ಅತ್ಯುತ್ತಮ ಸಂಗೀತ ನಿರ್ದೇಶನ: ಬಿ.ಜೆ.ಭರತ್

  

ತೆಲುಗಿನಲ್ಲಿ ಪ್ರಶಸ್ತಿ ಬಾಚಿಕೊಂಡ 'ಬಾಹುಬಲಿ'
ಅತ್ಯುತ್ತಮ ಚಲನಚಿತ್ರ: ಬಾಹುಬಲಿ-2
ಅತ್ಯುತ್ತಮ ನಿರ್ದೇಶಕ: ಎಸ್.ಎಸ್.ರಾಜಮೌಳಿ (ಚಿತ್ರ: ಬಾಹುಬಲಿ-2)
ಅತ್ಯುತ್ತಮ ಪೋಷಕ ನಟ: ರಾನಾ ದಗ್ಗುಬಾಟಿ (ಚಿತ್ರ: ಬಾಹುಬಲಿ-2)
ಅತ್ಯುತ್ತಮ ಪೋಷಕ ನಟಿ: ರಮ್ಯಾ ಕೃಷ್ಣನ್ (ಚಿತ್ರ: ಬಾಹುಬಲಿ-2)
ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಎಂ.ಎಂ.ಕೀರವಾಣಿ (ಚಿತ್ರ: ಬಾಹುಬಲಿ-2)
ಅತ್ಯುತ್ತಮ ಛಾಯಾಗ್ರಹಣ: ಕೆ.ಕೆ.ಸೆಂಧಿಲ್ (ಚಿತ್ರ: ಬಾಹುಬಲಿ-2)
65ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಬ್ಲಾಕ್ ಲೇಡಿ' ಹಿಡಿದು ನಗೆ ಬೀರಿದ ಕನ್ನಡಿಗರ ಪಟ್ಟಿ ಇಲ್ಲಿದೆ
  

ತೆಲುಗಿನಲ್ಲಿ ಅತ್ಯುತ್ತಮ ನಟ-ನಟಿ ಯಾರು.?
ಅತ್ಯುತ್ತಮ ನಟ: ವಿಜಯ್ ದೇವರಕೊಂಡ (ಚಿತ್ರ: ಅರ್ಜುನ್ ರೆಡ್ಡಿ)
ಅತ್ಯುತ್ತಮ ನಟಿ: ಸಾಯಿ ಪಲ್ಲವಿ (ಚಿತ್ರ: ಫಿದಾ)
ಅತ್ಯುತ್ತಮ ನಟ (ಕ್ರಿಟಿಕ್ಸ್ ಅವಾರ್ಡ್): ವೆಂಕಟೇಶ್ (ಚಿತ್ರ: ಗುರು)
ಅತ್ಯುತ್ತಮ ನಟಿ (ಕ್ರಿಟಿಕ್ಸ್ ಅವಾರ್ಡ್): ರಿತಿಕಾ ಸಿಂಗ್ (ಚಿತ್ರ: ಗುರು)
ಅತ್ಯುತ್ತಮ ಗಾಯಕ: ಹೇಮಚಂದ್ರ (ಚಿತ್ರ: ಫಿದಾ)
ಅತ್ಯುತ್ತಮ ಗಾಯಕಿ: ಮಧು ಪ್ರಿಯಾ (ಚಿತ್ರ: ಫಿದಾ)
  

ತಮಿಳಿನಲ್ಲಿ ಅತ್ಯುತ್ತಮ ನಟ-ನಟಿ ಯಾರು.?
ಅತ್ಯುತ್ತಮ ಚಿತ್ರ: ಆರಂ
ಅತ್ಯುತ್ತಮ ನಿರ್ದೇಶಕ: ಪುಷ್ಕರ್ ಗಾಯತ್ರಿ (ಚಿತ್ರ: ವಿಕ್ರಮ್ ವೇದ)
ಅತ್ಯುತ್ತಮ ನಟ: ವಿಜಯ್ ಸೇತುಪತಿ (ಚಿತ್ರ: ವಿಕ್ರಮ್ ವೇದ)
ಅತ್ಯುತ್ತಮ ನಟಿ: ನಯನತಾರಾ (ಚಿತ್ರ: ಆರಂ)
ಅತ್ಯುತ್ತಮ ನಟ (ಕ್ರಿಟಿಕ್ಸ್ ಅವಾರ್ಡ್): ಕಾರ್ತಿ ಮತ್ತು ಆರ್.ಮಾಧವನ್
ಅತ್ಯುತ್ತಮ ನಟಿ (ಕ್ರಿಟಿಕ್ಸ್ ಅವಾರ್ಡ್): ಅದಿತಿ ಬಾಲನ್ (ಚಿತ್ರ: ಅರುವಿ)
ಅತ್ಯುತ್ತಮ ಉದಯೋನ್ಮುಖ ನಟ: ವಸಂತ್ ರವಿ (ಚಿತ್ರ: ತಾರಾಮಣಿ)
  

ತಮಿಳಿನ ಬೆಸ್ಟ್ ಮ್ಯೂಸಿಕ್ ಆಲ್ಬಂ ಯಾವುದು.?
ಅತ್ಯುತ್ತಮ ಪೋಷಕ ನಟ: ಪ್ರಸನ್ನ
ಅತ್ಯುತ್ತಮ ಪೋಷಕ ನಟಿ: ನಿತ್ಯ ಮೆನನ್ (ಚಿತ್ರ: ಮೆರ್ಸಲ್)
ಅತ್ಯುತ್ತಮ ಮ್ಯೂಸಿಕ್ ಆಲ್ಬಂ: ಎ.ಆರ್.ರೆಹಮಾನ್ (ಚಿತ್ರ: ಮೆರ್ಸಲ್)
ಅತ್ಯುತ್ತಮ ಗೀತ ಸಾಹಿತ್ಯ: ವೈರಮುತ್ತು
ಅತ್ಯುತ್ತಮ ಗಾಯಕ: ಅನಿರುದ್ಧ್ ರವಿಚಂದರ್
ಅತ್ಯುತ್ತಮ ಗಾಯಕಿ: ಶಾಶಾ ತಿರುಪತಿ
  

ಮಲಯಾಳಂನಲ್ಲಿ ಅತ್ಯುತ್ತಮ ನಟ-ನಟಿ ಯಾರು.?
ಅತ್ಯುತ್ತಮ ಚಿತ್ರ: Thondimuthalum Driksakshiyum
ಅತ್ಯುತ್ತಮ ನಟ: ಫಹಾದ್ ಫಾಸಿಲ್
ಅತ್ಯುತ್ತಮ ನಟಿ: ಪಾರ್ವತಿ
ಅತ್ಯುತ್ತಮ ನಟ (ಕ್ರಿಟಿಕ್ಸ್ ಅವಾರ್ಡ್): ಟೊವಿನೋ ಥಾಮಸ್
ಅತ್ಯುತ್ತಮ ನಟಿ (ಕ್ರಿಟಿಕ್ಸ್ ಅವಾರ್ಡ್): ಮಂಜು ವಾರಿಯರ್
ಅತ್ಯುತ್ತಮ ಉದಯೋನ್ಮುಖ ನಟ: ಆಂಥೋನಿ ವರ್ಗೀಸ್
ಅತ್ಯುತ್ತಮ ಉದಯೋನ್ಮುಖ ನಟಿ: ಐಶ್ವರ್ಯ ಲಕ್ಷ್ಮಿ
  

ಮಲಯಾಳಂನಲ್ಲಿ ಅತ್ಯುತ್ತಮ ನಿರ್ದೇಶಕ ಯಾರು.?
ಅತ್ಯುತ್ತಮ ನಿರ್ದೇಶಕ: ದಿಲೀಶ್ ಪೊಥೇನ್
ಅತ್ಯುತ್ತಮ ಪೋಷಕ ನಟ: Alencier Ley
ಅತ್ಯುತ್ತಮ ಪೋಷಕ ನಟಿ: ಶಾಂತಿ ಕೃಷ್ಣ
ಅತ್ಯುತ್ತಮ ಗಾಯಕ: Shahbaz Aman
ಅತ್ಯುತ್ತಮ ಗಾಯಕಿ: ಕೆ.ಎಸ್.ಚಿತ್ರಾ
ಅತ್ಯುತ್ತಮ ಗೀತ ಸಾಹಿತ್ಯ: ಅನ್ವರ್ ಅಲಿ
ಅತ್ಯುತ್ತಮ ಸಂಗೀತ ಸಂಯೋಜಕ: ರೆಕ್ಸ್ ವಿಜಯನ್

Post a Comment

0 Comments